Monday, March 6, 2017

ಚೋಪ್ಟಾ ಚಂದ್ರಶಿಲಾ (Day 4, 5, 6)

ಬೆಳಗ್ಗೆ ಮತ್ತೆ 4.30 ಗೆ ಎಚ್ರ ಆಯ್ತು. ಇಲ್ಲಿ 7.30 ಗೆ ಅಲಾರಾಂ ಹೊಡ್ಕೊಂಡಾಗ ಇನ್ನೂ ಮಲಕ್ಕೋಬೇಕು ಅಂತ ಅನಿಸಿದ್ರೆ ಅಲ್ಲಿ ಎಷ್ಟು ಬೇಗ ಎದ್ರೂ ಫ್ರೆಶ್ ಅನಿಸ್ತಾ ಇತ್ತು,

ಅವತ್ತು ಸ್ವಲ್ಪ ಬೇಗಾನೆ ರೆಡಿ ಆಗಿ ಊಟ ಪ್ಯಾಕ್ ಮಾಡ್ಕೊಂಡು ಹೊರಟ್ವಿ. ಹೋಗ್ಬೇಕಾಗಿದ್ದಿದ್ದು ರೋಹಿಣಿ ಬುಗ್ಯಾಲ್(4+ ಕಿ.ಮೀ.).  ಕಾಡು ದಾರಿ, ಮಧ್ಯ ಮಧ್ಯ ಸ್ವಲ್ಪ ಏರು ತಗ್ಗು ಇದ್ರೂ ತುಂಬಾ ಕಷ್ಟ ಏನಿಲ್ಲ. ದಾರಿ ಮಧ್ಯ ಒಂದು ಸಣ್ಣ ಝರಿ, ಅಲ್ಲಿ ನೀರಲ್ಲಿ ಕಾಲಿಟ್ರೆ ಕೊರೆಯೋ ಚಳಿ, ಆದ್ರೂ ಅಲ್ಲಿ ನೀರಲ್ಲಿ ಗಂಟೆಗಟ್ಲೆ ಆತ ಆಡಿದ್ವಿ. ಸಕತ್ ಮಜಾ ಬಂತು ಎಲ್ಲರಿಗೂ :-)

ರೋಹಿಣಿ ಬುಗ್ಯಾಲ್ ತಲುಪುವಾಗ ಮಧ್ಯಾಹ್ನ 1-1.30 ಆಗಿತ್ತು. ಕಾಡಿನ ಮಧ್ಯದಲ್ಲಿ ಹುಲ್ಲುಗಾವಲು, ನೋಡಕ್ಕೆ ಗಾಲ್ಫ್ ಕೋರ್ಸ್ ಥರ ಇತ್ತು. ಅಲ್ಲಿ ಸ್ವಲ್ಪ ರೆಸ್ಟ್, ಆಮೇಲೆ ಊಟ ಮಾಡ್ಕೊಂಡು ಮತ್ತೆ ವಾಪಸ್. ವಾಪಸ್ ಬರ್ತಾ ಮತ್ತೆ ನೀರಲ್ಲಿ ಆಟ. ತುಂಬಾ ಕಷ್ಟದ ಟ್ರೆಕ್ ಆಗಿಲ್ದೇ ಇದ್ರೂ ನಡೆದೂ ನಡೆದೂ ಸುಸ್ತಾಗಿತ್ತು ಅವತ್ತು.

ಅಂತೂ ನೋಡ್ತಾ ನೋಡ್ತಾ ಕೊನೆ ದಿನ ಬಂದೇ ಬಿಡ್ತು. ತುಂಗನಾಥ ದೇವಸ್ಥಾನ ಇದ್ದಿದ್ದು  3 ಕಿ.ಮೀ.  ಬೆಳಗ್ಗೆ ತಿಂಡಿ ತಿಂದು ಊಟ ಕಟ್ಟಿಕೊಂಡು ಹೊರಟ್ವಿ. ದೇವಸ್ಥಾನಕ್ಕೆ ಹೋಗೋ ದಾರಿ ಪೂರ್ತಿ ಕಲ್ಲು ಹಾಕಿದ್ದಾರೆ, ಸ್ವಲ್ಪ ಕಷ್ಟ ಅದ್ರ ಮೇಲೆ ನಡೀತಾ ಹೋಗೋದು. ಇದು ಸಮುದ್ರಮಟ್ಟದಿಂದ 12000 feet ಎತ್ತರದಲ್ಲಿದೆ, ಐದು ಕೇದಾರಗಳಲ್ಲಿ(Panch kedar: ಕೇದಾರನಾಥ್, ಮಧ್ಯಮೇಶ್ವರ್, ರುದ್ರನಾಥ್, ಕಲ್ಪೇಶ್ವರ್) ಒಂದು. ಚಳಿಗಾಲದಲ್ಲಿ ಈ ದೇವಸ್ಥಾನ ಹಿಮ ಬೀಳೋ ಕಾರಣ ಮುಚ್ಚಿರ್ತಾರೆ. ಹೋಗ್ತಾ ದಾರಿ ಉದ್ದಕ್ಕೂ ಹಿಮಾಲಯದ ಶಿಖರಗಳನ್ನ ನೋಡ್ತಾ ಹೋಗ್ಬಹುದು.  ಅಲ್ಲಿಂದ ಚಂದ್ರಸಿಲಾ ಮತ್ತೆ 1.5 ಕಿ.ಮೀ. ಊಟ ಮಾಡಿಲ್ದೆ ಇದ್ದಿದ್ ಕಾರಣ ಇದು ಸಿಕ್ಕಾಪಟ್ಟೆ ಕಷ್ಟ ಆಯ್ತು ನಂಗೆ. ಅಲ್ಲಿ ಮೇಲೆ ಗಂಗಾ ದೇವಸ್ಥಾನ ಇದೆ. ಅಲ್ಲಿಂದ ಮತ್ತೆ ಹಿಮಾಲಯದ ಚೌಖಂಬಾ, ನಂದಾ ದೇವಿ ಇತ್ಯಾದಿ ಶಿಖರಗಳ panaromic view.


ಅಲ್ಲಿ ಸ್ವಲ್ಪ ಹೊತ್ತು ಕೂತಿದ್ದು ಮತ್ತೆ ಕೆಳಗಡೆ ತುಂಗನಾಥ ದೇವಸ್ಥಾನ ಹತ್ರ ಬಂದ್ವಿ, ಊಟ ಮಾಡಿದ್ವಿ(ಸಂಜೆ 3.30-4). ಬರ್ತಾ ಬಾಬ್ಬಿ ಅವ್ರು ಅಲ್ಲಿ ಇಲ್ಲಿ ಬಿದ್ದಿರೋ ಪ್ಲಾಸ್ಟಿಕ್ ಬಾಟಲ್ ಗಳನ್ನ ಎತ್ಕೊಂಡು ಬರ್ತಾ ಇದ್ರು. ಏನಕ್ಕೆ ಅಂತ ಕೇಳಿದ್ರೆ, ಇಲ್ಲಿ ಬರೋ ಜನ ಪ್ಲಾಸ್ಟಿಕ್ ಎಸೆದು ಇಲ್ಲಿನ ಗುಡ್ಡ ಎಲ್ಲ ಹಾಳು ಮಾಡ್ತಾ ಇದಾರೆ. ಅದಕ್ಕೆ ಪ್ರತೀ ಸರ್ತಿ ಟ್ರೆಕ್ ಬಂದಾಗ ನಾನು ಪ್ಲಾಸ್ಟಿಕ್ ಎತ್ಕೊಂಡು ಹೋಗಿ ಸ್ವಲ್ಪ ಆದ್ರೂ ಕ್ಲೀನ್ ಮಾಡಕ್ಕೆ ಪ್ರಯತ್ನ ಮಾಡ್ತಿದೀನಿ ಅಂದ್ರು. ನಾವೂ ಖುಷಿಯಾಗಿ ಅವರ ಜೊತೆ ಸೇರ್ಕೊಂಡ್ವಿ, ಸ್ವಚ್ಛ ಭಾರತ್ ಅಭಿಯಾನ :-). ಕೆಳಗಡೆ ಇಳಿಯೋ ಹೊತ್ತಿಗೆ ಎಲ್ಲರ ಕೈಯಲ್ಲೂ ಎರಡು ಮೂರು ಚೀಲ ತುಂಬಾ ಪ್ಲಾಸ್ಟಿಕ್ ಬಾಟಲ್. ಇದೇನಿದು ಇಷ್ಟೊಂದು ಕಸ ಅಂತ ನಾವು ಅಂದ್ಕೊಂಡ್ರೆ ಇದು ಕಮ್ಮಿ, ನಾನು ಈ ಕೆಲಸ ಶುರು ಮಾಡಿದಾಗ ಇನ್ನೂ ರಾಶಿ ರಾಶಿ ಕಸ ಇರೋದು ಅಂತ ಅವರು ಹೇಳಿದ್ರು. ಏನೋ ಸ್ವಲ್ಪ ಒಳ್ಳೆ ಕೆಲಸ ಮಾಡಿದೀವಿ ಅಂತ  ಮನಸ್ಸಿಗೆ ತುಂಬಾ ಖುಷಿ ಆಯ್ತು.       

ಅವತ್ತು ರಾತ್ರಿ ತುಂಬಾ ಹೊತ್ತು ಟೆಂಟ್ ಹೊರಗಡೆ ಕೂತು ನಕ್ಷತ್ರಗಳನ್ನ ನೋಡ್ತಾ ಹರಟೆ ಹೊಡೆದ್ವಿ.

ಮರುದಿನ ಬೆಳಗ್ಗೆ ಬೇಗ ಎದ್ದು ಗಾಡಿ ಹತ್ತಿ ಹರಿದ್ವಾರ್ ಕಡೆಗೆ ಹೊರಟ್ವಿ. ನಾನು ಮತ್ತೆ ಮೈಥಿಲಿ ರಿಷಿಕೇಶ್ ಅಲ್ಲೇ ಇಳ್ಕೊಂಡ್ವಿ, ನಾವು ನೆಕ್ಸ್ಟ್ ಡೇ ಫ್ಲೈಟ್.  ಮಿಕ್ಕಿರೋರೆಲ್ಲ ಹರಿದ್ವಾರ್ ಇಂದ ರೈಲು ಹತ್ತಿ ಹೋಗೋರು. ಎಷ್ಟು ಬೇಗ ಟ್ರಿಪ್ ಮುಗೀತು ಅನ್ನೋ ಬೇಜಾರು ಒಂದು ಕಡೆ ಆದ್ರೆ, ಸ್ನಾನ ಮಾಡಕ್ಕೆ ನೀರು ಸಿಗತ್ತೆ ಅನ್ನೋ ಖುಷಿ ಒಂದು ಕಡೆ :-D

ರಿಷಿಕೇಶ್ ಅಲ್ಲಿ ಮತ್ತೆ ಗಂಗಾ ಆರತಿ ನೋಡ್ಬೇಕು ಅಂತ ನಾನು ಮೊದಲೇ ಡಿಸೈಡ್ ಮಾಡಿದ್ದೆ. ಮೈಥಿಲಿ ಬರ್ದೇ ಇದ್ದಿದ್ ಕಾರಣ ನಾನು ಒಬ್ಳೆ ಪರಮಾರ್ಥ ನಿಕೇತನ ಘಾಟ್ ಕಡೆ ಹೋದೆ. ಇಲ್ಲೂ ಹರಿದ್ವಾರ್ ಥರ ತುಂಬಾ ಜನ ಇದ್ರು, ಆದ್ರೆ ಯಾರೂ ಪೂಜೆ ಮಾಡ್ಸಿ ಅಂತ ದುಡ್ಡು ಕಿತ್ಕೊಳ್ಳೋರು ಇಲ್ಲ, ಹಾಗೂ ಪರಿಸರ ಎಲ್ಲ clean.
ಅಲ್ಲಿ ಸ್ವಲ್ಪ ಹೊತ್ತು ಇದ್ದು, ಮತ್ತೆ ಹೋಟೆಲ್. ಇಡೀ ಟ್ರೆಕ್ ಸಮಯದಲ್ಲಿ ಊಟ ಎಷ್ಟೇ ಚೆನ್ನಾಗಿದ್ರೂ ಮೊಸರು ಇರ್ಲಿಲ್ಲ. ಮೊಸರು ಇಲ್ದೆ ಇದ್ರೆ ನಾನು ಒಂದು ಹೊತ್ತಿನ ಊಟ ಕೂಡಾ ಮಾಡಲ್ಲ! ಹಾಗಾಗಿ ಸಿಕ್ಕಾಪಟ್ಟೆ ಆಸೆ ಆಗಿತ್ತು ಮೊಸರು ತಿನ್ಬೇಕು ಅಂತ, ಎಷ್ಟು ಅಂದ್ರೆ ಒಂದು ಪಾತ್ರೆ ತುಂಬಾ ಮೊಸರು ತಿಂದೆ, ಒಂದು ಪರಾಠಾ ಜೊತೆ. 

ಹೋಟೆಲ್ ಅಲ್ಲಿ ಅವರದ್ದೇ ಗಂಗಾ ಘಾಟ್ ಇತ್ತು, ಅಲ್ಲೂ ಬೆಳಗ್ಗೆ ಸಂಜೆ ಗಂಗಾ ಆರತಿ ಮಾಡ್ತಿದ್ರು.
ಬೆಳಗ್ಗೆ ಅಲ್ಲಿ ಗಂಗಾ ಆರತಿ ನೋಡ್ಕೊಂಡು, ತಿಂಡಿ ತಿಂದು ಮತ್ತೆ ಬೆಂಗ್ಳೂರ್ ಕಡೆ ಹೊರಟೆ. ಹೋಟೆಲ್ ಅಲ್ಲಿ ಚೆಕ್ ಔಟ್ ಮಾಡೋವಾಗ ಒಂದು ಬಾಟಲ್ ಗಂಗಾ ನೀರು ಕೊಟ್ರು, ಅದು ಎಷ್ಟು ಗಲೀಜಾಗಿದೆ ಅಂದ್ರೆ, ಗಂಗಾ ನದೀಲಿ ಜನ ಹೆಂಗೆ ಸ್ನಾನ ಎಲ್ಲ ಮಾಡ್ತಾರೋ ಅಂದ್ಕೊಳ್ಳೋ ಅಷ್ಟು! ಅಲ್ಲಿ ಎಲ್ಲಾ ಕಡೆ ಬೇರೆ ಬೇರೆ ಸೈಜ್ ಬಾಟಲಿ ಮಾರಾಟ ಮಾಡ್ತಾ ಇದ್ರೂ, ಮೊದಲು ನೋಡ್ದಾಗ ಗೊತ್ತಾಗಿರಲಿಲ್ಲ ಏನಕ್ಕೆ ಅಂತ, ಆಮೇಲೆ ಗೊತ್ತಾಯ್ತು ಅದು ಗಂಗಾ ನೀರು ತುಂಬಿಸ್ಕೊಂಡು ಹೋಗಕ್ಕೆ ಅಂತ!     
 
ವಾಪಾಸ್ ವಿಮಾನ ಇದ್ದಿದ್ದು ಡೆಹ್ರಾಡೂನ್ -> ದೆಹಲಿ -> ಬೆಂಗ್ಳೂರ್. ದೆಹಲಿ ಏರ್ಪೋರ್ಟ್ ಅಲ್ಲಿ ಸ್ವಲ್ಪ ಟೈಮ್ ಇತ್ತು, ಅಲ್ಲಿ ಊಟ ಮಾಡಕ್ಕೆ ಅಂತ ಹೋದ್ರೆ ನಿಮಿತ್ ಸಿಕ್ದ. ಹಿಂದಿನ ದಿನ ಇನ್ನೂ ಎಲ್ಲರಿಗೂ ಬೈ ಹೇಳಿ, ಮುಂದೆ ಸಿಕ್ತೀವೋ ಇಲ್ವೋ ಅಂದ್ಕೊಡಿದ್ವಿ, ನೋಡಿದ್ರೆ ಅಲ್ಲೇ ಇನ್ನೊಂದ್ ಸರ್ತಿ ಸಿಕ್ಕಿದ್ದು ತುಂಬಾ ಖುಷಿ ಆಯ್ತು.  ಅಂತೂ ಮತ್ತೆ ಸೆಲ್ಫಿ ಹೊಡ್ಕೊಂಡು ಅವನು ರಾಜಸ್ಥಾನ್ ಕಡೆ ಹೊರಟ, ನಾನು ಬೆಂಗ್ಳೂರ್. ಏರ್ಪೋರ್ಟ್ ಇಂದ ಅಣ್ಣನ ಮನೆ ಸೇರಕ್ಕೆ 3 ಗಂಟೆ, ಬೆಂಗ್ಳೂರ್ ಬಂದಿದ್ ಕೂಡ್ಲೇ ಟ್ರಾಫಿಕ್ ದರ್ಶನ ಆಗಿ, ಯಾಕೆ ಇಷ್ಟು ಬೇಗ ಟ್ರಿಪ್ ಮುಗೀತೋ ಅನ್ನೋ feeling!

ಟ್ರಿಪ್ ಇಂದ ಬಂದು ಒಂದು ವರ್ಷ ಆಗಕ್ಕೆ ಮುಂಚೆ ಈ ಕತೆ ಬರೀತಿನೋ ಇಲ್ವೋ ಅಂದ್ಕೊಂಡಿದ್ದೆ, ಅಂತೂ ಇಂತೂ ಈ ಕತೆ ಮುಗಿಸ್ತಾ ಇದ್ದೀನಿ ಇಲ್ಲಿಗೆ :-)


4 comments:

ಮನಸಿನಮನೆಯವನು said...

ಇಂತಹ ಟ್ರಿಪ್ ಅಲ್ಲಲ್ಲೇ ಆಗ್ತಿದ್ರೆ ಮಾತ್ರ ಬೆಂಗಳೂರನ್ನು ಅಡ್ಜಸ್ಟ್ ಮಾಡ್ಕೋಬಹುದು.. ಇಲ್ಲಾಂದ್ರೆ ಜೀವನವೇ ಬೋರ್ ಆಗತ್ತೆ

ವಿ.ರಾ.ಹೆ. said...

... ಚಂದ್ರಶಿಲಾ ಮುಗಿಸಿದ್ರಿ... ಹೀಗೇ ಟ್ರೆಕ್/ಟ್ರಿಪ್ ಹೋಗ್ತಾ ಇರಿ.. ಬರೀತಾ ಇರಿ.... :)

ಜ್ಯೋತಿ said...

@ವಿಕಾಸ್,
Thanks :-)
ನಿಶಾನಿ ಮೊಟ್ಟೆ ಅಂತ ಹೋಗಿದ್ವಿ, ಅದೊಂದು ಅಧ್ವಾನ ಕತೆ, ಅದೇ next :-)

@ಮನಸಿನಮನೆಯವನು
ಹೌದು, ಆದ್ರೆ ಬೆಂಗಳೂರಲ್ಲಿ ಹೆಬ್ಬಾಳ <-> ಮಾರತ್ತಹಳ್ಳಿ ಓಡಾಡೋದು ಯಾವುದೇ trek ಗೂ ಕಮ್ಮಿ ಇಲ್ಲ.

Ghumakkadd said...

It was really lovely of you that you joined to clean the trek. I have been on many trek in past one year and have always made sure to bring back plastic bottles in sack from the trek as they are ruining the beauty of Himalaya.

Thanks for a great blog post.


Regards,

Chopta Trek