Wednesday, March 29, 2017

ಪರೀಕ್ಷೆಲಿ ನಕಲು ಮಾಡಿದ್ದು !

ಪರೀಕ್ಷೆಲಿ ಕಾಪಿ ಯಾರ್ ಮಾಡಲ್ಲ ಹೇಳಿ! ಇದು ತುಂಬಾ ಹಳೆ ಕತೆ, ಒಂದಾನೊಂದು ಕಾಲದಲ್ಲಿ ಅಂತ ಶುರು ಮಾಡ್ಬಹುದೇನೋ.

ನಾನಾಗ 4 ನೇ ತರಗತಿಯಲ್ಲಿದ್ದೆ, ಎಲ್ಲಾ ವಿಷಯಗಳೂ ಚೆನ್ನಾಗೇ ಓದ್ತಾ ಇದ್ದೆ. ಯಾವಾಗ್ಲೂ 2-3 ರಾಂಕ್!
ಆದ್ರೆ  ನೀತಿ ಬೋಧೆ(moral science ಗೆ ಕನ್ನಡದಲ್ಲಿ ಏನಂತಿದ್ವಿ ಅಂತ ಸತ್ಯವಾಗಿಯೂ ನೆನಪಿಲ್ಲ, ಇದೇ ಇರ್ಬಹುದು ಅಂತ ಅಂದ್ಕೊಂಡಿದೀನಿ)  ಪರೀಕ್ಷೆಗೆ ಓದೋದು ಅಂದ್ರೆ ಯಾಕೋ ಬೇಜಾರು. ಅದ್ರಲ್ಲಿ ಏನೂ ಇರ್ಲಿಲ್ಲ, ಯಾವ್ದೋ ಕತೆ ಇರ್ತಿತ್ತು. ಪೂರ್ತಿ ಗಿಣಿ ಪಾಠ ಮಾಡಿ ಅದನ್ನೇ ಬರೀಬೇಕಿತ್ತು ಅಷ್ಟೇ. ಅವಾಗ್ಲಿಂದಾನೂ  ಕತೆ ಹೇಳೋದು ಅಂದ್ರೆ ಇಷ್ಟ ಇರ್ಲಿಲ್ಲ ಅನ್ಸತ್ತೆ.
ಈಗ್ಲೂ ನಂಗೆ ಚಿಕ್ ಮಕ್ಳು ಯಾರಾದ್ರೂ ಕತೆ ಹೇಳು ಅಂದ್ರೆ ಏನ್ ಹೇಳ್ಬೇಕು ಅಂತಾನೆ ಗೊತ್ತಾಗಲ್ಲ

ಅದೆಲ್ಲಿಂದ ಕಾಪಿ ಮಾಡೋ ಐಡಿಯಾ ಬಂತೋ ಗೊತ್ತಿಲ್ಲ.  ಪುಸ್ತಕಾನ ಬೆಂಚ್ ಕೆಳಗಡೆ ಇಟ್ಟು ಚಪ್ಲಿ ಆ ಕಡೆ ಒಂದ್ ಸರ್ತಿ, ಈ ಕಡೆ ಒಂದ್ ಸರ್ತಿ ಇಡೋ  ಮಾಡ್ಕೊಂಡು ಪ್ರತೀ ಸರ್ತಿನೂ ಸ್ವಲ್ಪ ಸ್ವಲ್ಪ ನೋಡ್ಕೊಂಡು ಬರ್ದೆ ಕೂಡ. ಆದ್ರೆ ಶಿಕ್ಷಕಿ ಕೈಲಿ ಸಿಕ್ಕಾಕೊಂಡಿದ್ದೆ.

ಏನೋ ಪುಣ್ಯ, ಬೇರೆ ಎಲ್ಲದ್ರಲ್ಲೂ ಚೆನ್ನಾಗಿ ಮಾರ್ಕ್ಸ್ ಬರ್ತಿತ್ತು ಅಂತ ನನ್ನ ಸುಮ್ನೆ ಬಿಟ್ಬಿಟ್ರು. ಸ್ವಲ್ಪ ಬೈದು ಪಾಸ್ ಮಾಡಿದ್ರು ಆ ಸರ್ತಿ.  ಇಲ್ಲಾ ಅಂದಿದ್ರೆ ಮುಂದಿನ ವರ್ಷ 4 ನೇ ಕ್ಲಾಸ್ ಮತ್ತೆ ಬರೀಬೇಕಿತ್ತು!!! ಇವಾಗ ನೆನೆಸ್ಕೊಂಡ್ರೂ ನಗು ಬರತ್ತೆ ಈ ಕತೆ ನಂಗೆ :-D

ಆದ್ರೂ ನೀತಿ ವಿಷಯ ಕಾಪಿ ಮಾಡೋದು ಅಂದ್ರೆ ಏನು ತಮಾಷೆನಾ, ಯಾರಾದ್ರೂ ಇದೀರಾ ನನ್ ತರದವರು?
  

5 comments:

ವಿ.ರಾ.ಹೆ. said...

ನೀತಿಪಾಠದ ಪರೀಕ್ಷೆಯಲ್ಲೇ ಅನೀತಿ! ನಾನು 'ರಾಮಾಯಣ' ಪರೀಕ್ಷೆಲಿ ಮಾಡಿದ್ದೆ. ಆದ್ರೆ ನೀತಿಪಾಠದಲ್ಲೆಲ್ಲಾ ಮಾಡಿಲ್ಲಪ :)

ಜ್ಯೋತಿ said...

@ವಿಕಾಸ್
ಸತ್ಯ ಹರಿಶ್ಚಂದ್ರನ ಕತೆ ಕಾಪಿ ಮಾಡ್ಬೇಕಿತ್ತು, ಇನ್ನೂ ಮಜಾ ಇರೋದು ಅದು :-D

Unknown said...

Chennagi comment maadteera Vikas!
Jyothi, enaadru tappu first time maadidagle sikkakollodu.. adikke matte matte maadi pariniti hondabeku :P

Aadre naanu ashte, copy yavattu maadlilla.. it didn't make sense to write an exam copying... U can't cheat yourself anno feeling.. :)

ಜ್ಯೋತಿ said...

@Gautam
Rightly said

veena said...

ನಾನು ಯಾವಾತ್ತು ಕಾಪಿ ಮಾಡಿಲ್ಲ. ಅದರ ಬಗ್ಗೆ ಇವತ್ತಿಗೂ ಹೆಮ್ಮೆ ಇದೆ. ಆತ್ಮ ಸಾಕ್ಷಿಗೆ ವಿರುದ್ಧವಾಗಿ ಅವಶ್ಯವಿಲ್ಲದ ಯಾವುದೇ ಕಾರ್ಯಗಳನ್ನು ನಾನು ಮಾಡಿಲ್ಲ. ಆ ಒಂದು ಖುಷಿಯಲ್ಲೇ ಸುಖವಿದೆ. ಬದುಕಲ್ಲಿ ಸಂತೋಷವಿದೆ.
ನೀವು ನಿಮ್ಮ ಕಾಪಿ ಮಾಡಿದ ವಿಷಯವನ್ನು ಬ್ಲಾಗ್ ನ್ನಲ್ಲಿ ಹಾಕಿದ್ದೀರಿ ಅಂದ್ರೆ ನಿಮಗೆ ನಿಮ್ಮ ತಪ್ಪಿನ ಬಗ್ಗೆ ಪಾಶ್ಚ್ತಾಪ ವಿದೆ.

ನಾವು ಮಾಡಿದ ತಪ್ಪನ್ನು ಬಹಿರಂಗವಾಗಿ ಒಪ್ಪಿಕೊಂಡದ್ದು ನಿಮ್ಮ ಒಳ್ಳೆಯತನವನ್ನು ತೋರಿಸುತ್ತದೆ.