Monday, March 20, 2017

ಭಯಾನಕ ರಾತ್ರಿಗಳು - 3

ನಂಗೆ ತುಂಬಾ ಚಿಕ್ಕ ವಯಸ್ಸಿಂದಾನೂ ಭಯ ಜಾಸ್ತಿ, ಜೊತೆಗೆ ಚಿಕ್ಕ ಚಿಕ್ಕ ಶಬ್ದಗಳೂ ಕೇಳೋದೂ ಜಾಸ್ತಿನೇ. ಎಷ್ಟು ಅಂದ್ರೆ, ರೂಮ್ ಅಲ್ಲಿ ಏನಾದ್ರು ಪ್ಲಾಸ್ಟಿಕ್ ಚೂರು ಗಾಳಿಗೆ ಓಡಾಡ್ತಾ ಇದ್ರೆ ಕೇಳ್ಸತ್ತೆ, ಎದುರುಗಡೆ ಮನೇಲಿ ಪಾತ್ರೆ ತೊಳಿಯೋ ಸದ್ದೂ (ಪಕ್ಕದ ಬಿಲ್ಡಿಂಗ್) ಕೇಳ್ಸತ್ತೆ ಅದೂ ನಮ್ಮನೇಲೇ ಪಾತ್ರೆ ಶಬ್ದ ಬರ್ತಿದೆಯೋ ಅನ್ನೋ ಥರ. ರಾತ್ರಿ ಹೊತ್ತಲ್ಲಿ ರಸ್ತೇಲಿ ಏನಾದ್ರೂ ನಾಯಿ ಊಳಿಡ್ತಾ ಅಥವಾ ಬೊಗಳ್ತಾ ಇದ್ರೆ ಮುಗೀತು, ಅವತ್ತು ನಿದ್ದೇನೇ ಬರಲ್ಲ.

ಹೋದ್ ವರ್ಷ ಒಂದೆರಡು ದಿನ ಇದೇ ಥರ ನಂಗೆ ಬೆಕ್ಕಿನ್ ಮರಿ ಅಳೋ ಶಬ್ದ ಕೇಳಿಸ್ತಾ ಇತ್ತು, ಬೇರೆ ಯಾರಿಗ್ ಕೇಳಿದ್ರೂ ಇಲ್ಲ ಅಂತಾ ಇದ್ರು. ಆಮೇಲೆ ರಾತ್ರಿ ಊಟ ಮಾಡ್ತಾ ಇದ್ದಾಗ ಮನೆ ಹೊರಗಡೇನೇ ಬೆಕ್ಕಿನ್ ಮರಿ ಕೂಗ್ತಾ ಇತ್ತು. ಕೆಳಗಡೆ ಮನೆಲಿ(ಅಪಾರ್ಟ್ಮೆಂಟ್) ಹೊಸದಾಗಿ ತಂದಿದ್ ಮರಿ ಅದು. ಆಮೇಲೆ ಅದು ಬಾಲ್ಕನಿಲಿ ಬಂದು ಕೂಗಕ್ಕೆ ಶುರು ಮಾಡಿದ್ರೆ ಸಾಕು, ನಾನು ನಮ್ಮನೆ ಬಾಲ್ಕನಿಗೆ ಹೋಗಿ ಮಾತಾಡಿಸ್ತಾ ಇದ್ದೆ. ಪಾಪ ಒಂದಿನ ಹೊರಗಡೆ ರಸ್ತೆಗೆ ಹೋಗಿ ಯಾವುದೊ ವಾಹನ ಕೆಳಗಡೆ ಬಿದ್ದು ಸತ್ತ್ ಹೋಯ್ತಂತೆ.  

ಮೊನ್ನೆ ಒಂದಿನ ನಾನು ಮನೇಲಿ ಒಬ್ಳೆ ಇದ್ದೆ. 11 ಕ್ಕೇ ಮನೇಲಿ ಬೇರೆ ಎಲ್ಲ ಲೈಟ್ ಆಫ್ ಮಾಡಿ ರೂಮ್ಗೆ ಬಂದೆ. ನಾನು ಒಬ್ಳೆ ಇದ್ದಾಗ RO ಕೂಡಾ ಆಫ್ ಮಾಡಿ ಮಲಕ್ಕೋತೀನಿ, ಇಲ್ಲಾ ಅಂದ್ರೆ ಅದರ ಶಬ್ದಕ್ಕೂ ಭಯ ಆಗತ್ತೆ ನಂಗೆ :-P.
ನಿದ್ದೆ ಬರ್ತಿರ್ಲಿಲ್ಲ, ಲ್ಯಾಪ್ಟಾಪ್ ಅಲ್ಲಿ ಏನೋ ನೋಡ್ತಾ ಫ್ರೆಂಡ್ಸ್ ಜೊತೆ ಚಾಟ್ ಮಾಡ್ತಾ ಇದ್ದೆ ಸ್ವಲ್ಪ ಹೊತ್ತು.  ಒಂದೆರಡ್ ದಿನದಿಂದ ಫ್ರೆಂಡ್ ಜೊತೆ ಏನೋ ಜೊತೆ ಜಗಳ ಆಗಿತ್ತು, ಹಾಗೆ ಫೋನ್ ಅಲ್ಲಿ ಸುಮಾರು ಹೊತ್ತು(almost 2 hours) ಮಾತಾಡ್ಡೆ ಅವತ್ತು. ಜಗಳ ಸರಿ ಹೋಗಕ್ಕೆ ಮುಂಚೆ ಫ್ರೆಂಡ್ ಫೋನ್ ಸ್ವಿಚ್ ಆಫ್ ಆಯ್ತು.

ಅಷ್ಟೊತ್ತು ಫೋನ್ ಅಲ್ಲಿ ಮಾತಾಡಿ ತಲೆ ಎಲ್ಲ ಕೆಟ್ಟೋಗಿತ್ತು, ಏನಾದ್ರು ಚೆನ್ನಾಗಿರೋದು ಕಾಮಿಡಿ ಸಿನಿಮಾ ನೋಡೋಣ ಅಂತ  
ಚುಪ್ಕೆ ಚುಪ್ಕೆ ನೋಡಕ್ಕೆ ಶುರು ಮಾಡ್ದೆ. ಅವಾಗ ಸುಮಾರು 2 am ಆಗಿರ್ಬಹುದು.  ಸಿನಿಮಾ ತುಂಬಾ ಸರ್ತಿ ನೋಡಿರೋ ಕಾರಣ ಜಾಸ್ತಿ ಇಷ್ಟ ಇರೋ ಸೀನ್ ಮಾತ್ರ ನೋಡ್ದೆ.  ಹೀಗೇ ರಾತ್ರಿ 3 ಗಂಟೆ ಆಯ್ತು. ಫ್ಯಾನ್ ಜೋರಾಗಿ ತಿರುಗುತ್ತಾ ಇತ್ತು. ಇದ್ದಕಿದ್ದ ಹಾಗೆ ಯಾರೋ ಜೋರಾಗಿ ರೂಮ್ ಬಾಗಿಲು ತಟ್ಟಕ್ಕೆ ಶುರು ಮಾಡಿದ್ರು. ಮಲಕ್ಕೊಳಕ್ಕೆ ಮುಂಚೆ ಮೇನ್ ಬಾಗಿಲು ಹಾಕಿ ಸರಿಯಾಗಿ ಲಾಕ್ ಮಾಡಿದ್ದೆ. ಅದೂ ಸಾಲ್ದು ಅಂತ ಎಲ್ಲ ಬಾಲ್ಕನಿ ಬಾಗಿಲೂ ಹಾಕಿದ್ದೆ. ಬೇರೆ ಯಾವ್ ಬಾಗಿಲೂ ಶಬ್ದ ಆಗ್ಲಿಲ್ಲ, ಬರೀ ನಮ್ ರೂಮ್ ಬಾಗಿಲು ತಟ್ಟೋ ಶಬ್ದ.    

ನಂದು ಹೃದಯ ಜೋರಾಗಿ ಹೊಡ್ಕೊಳ್ಳಕ್ಕೆ ಶುರು ಆಯ್ತು.  ಏನಾದ್ರು ಅಷ್ಟೊತ್ತು ನಾನು ಮೂವಿ ನೋಡ್ತಾ ಎದ್ದಿಲ್ದೆ ಇದ್ದು, ಬಾಗಿಲು ಶಬ್ದಕ್ಕೆ ಎಚ್ರ ಆಗಿದ್ರೆ ಹಾರ್ಟ್ ಅಟ್ಯಾಕ್ ಆಗಿರೋದೋ ಏನೋ. ಮತ್ತೆ ಫ್ರೆಂಡ್ಗೆ ಫೋನ್ ಮಾಡ್ದೆ, ಏನೋ ಬಂದಿದೆ ಮನೆಗೆ ಅಂತ. ಆಮೇಲೆ ಸಣ್ಣದಾಗಿ ಮಿಯಾಂವ್ ಅನ್ನೋ ಶಬ್ದನೂ ಕೇಳಿಸ್ತು ನಂಗೆ, ಬೆಕ್ಕು ಅನ್ಸತ್ತೆ , ನಿಂಗೆ ಕೇಳುಸ್ತಾ ಅಂತ ಫೋನ್ ಬಾಗಿಲ್ ಹತ್ರ ಹಿಡಿದ್ರೆ ಅವನಿಗೆ ಕೇಳಿಸ್ತಾ ಇಲ್ಲ. ಕೊನೆಗೆ ಅವನೇ ಏನೂ ಆಗಲ್ಲ, ಧೈರ್ಯ ಮಾಡು, ಬಾಗಿಲು ತೆಗ್ದು ನೋಡು ಅಂತ ಹೇಳಿದ್ ಮೇಲೆ ಬಾಗಿಲು ತೆಗೆದ್ರೆ ಕೆಳಗಡೆ ಮನೆ ಬೆಕ್ಕು(ಪರ್ಷಿಯನ್ ಬೆಕ್ಕು ತೆಗೊಂಡಿದ್ರು ಅವರು 6 ತಿಂಗಳು ಮೊದ್ಲು). ಹೋದ ಜೀವ ಮತ್ತೆ ಬಂದಂಗಾಯ್ತು ನಂಗೆ.

ಹಾಲ್ ಕಿಟಕಿಲಿ ಟಿವಿ ಕೇಬಲ್ ಬಂದಿರೋ ಕಾರ್ಣ ಅದನ್ನ ಫುಲ್ ಹಾಕಕ್ಕಾಗಲ್ಲ. ಆ ಜಾಗದಲ್ಲಿ ಕೈ ಹಾಕಿ ಅದನ್ನ ಓಪನ್ ಮಾಡಿ ಒಳಗೆ ಬಂದಿತ್ತು ಅದು. ಅದನ್ನ ಎತ್ಕೊಂಡು ಹೋಗಿ ಅದ್ರ ಮನೆಗೆ ಬಿಟ್ಟ್ ಬರೋಣ ಅಂದ್ರೆ ತುಂಬಾ ಭಾರ ಅದು. ಆಮೇಲೆ ಕೆಳಗಡೆ ಮನೆಗ್ ಹೋಗಿ ಅವ್ರನ್ನ ಎಬ್ಸಿ ಕರ್ಕೊಂಡು ಬರೋ ಅಷ್ಟ್ರಲ್ಲಿ ನಂಗೆ ಸಾಕು ಸಾಕಾಗಿ ಹೋಯ್ತು. ಅವರು ಅದನ್ನ ಕರ್ಕೊಂಡು ಹೋದ್ರು.  ಗಂಟೆ  4 ಕ್ಕೆ ನಿದ್ದೆ ಮಾಡಿದ್ದು ಮಾಡೋವಷ್ಟರಲ್ಲಿ ಭಯಾನಕ ರಾತ್ರಿ ಮುಕ್ತಾಯ :-)

ಇದು ಹಳೆಯ ಕತೆಗಳು:

ಭಯಾನಕ ರಾತ್ರಿಗಳು - 2

4 comments:

ವಿ.ರಾ.ಹೆ. said...

ಯಾವ್ದಾರೂ ಕಿತ್ತೋಗಿರೋ ಟೀವಿ ಛಾನಲ್ ನವರು ಓದಿದರೆ....
ಬಾಗಿಲು ತಟ್ಟಿದ ಪರ್ಶಿಯನ್ ಬೆಕ್ಕು
ನಡುರಾತ್ರಿಯಲ್ಲಿ ಪರ್ಶಿಯನ್ ಬೆಕ್ಕಿನ ಕಿರುಕುಳ
ಈ ಪರ್ಶಿಯನ್ ಬೆಕ್ಕಿಗೆ ಇಂಡಿಯನ್ ಹುಡುಗೀರೇ ಬೇಕಂತೆ....
ಬೆಕ್ಕಿನ ಭೂತ ಬಾಗಿಲು ಬಡಿದಾಗ..

ಅಂತೆಲ್ಲಾ ಹಾಕಿ ಒಂದು ಎಪಿಸೋಡ್ ಮಾಡಬಹುದು ನೋಡಿ :)

ಜ್ಯೋತಿ said...

@ವಿಕಾಸ್
ಹ ಹ ಹ ಹ ಹ ಹ ಹ
ಬಿದ್ದು ಬಿದ್ದು ನಗ್ತಾ ಇದ್ದೀನಿ ನಿಮ್ಮ ಕಮೆಂಟ್ ಓದಿ :-D

gowtham ghatke said...

@vikas.. houdu.. Persian cats Indian hudgeeru obbre idre attack maadutte.. olle episode..
iri channel ge idea kodteeni.. ;)
Awesome comment anyway :D

@Jyothi.. bekku room olage bandmelindu innu swalpa baribahudittenopa.. :)
Starting build up chennagittu :)

ಜ್ಯೋತಿ said...

@Gowtham,
ಬೆಕ್ಕಿನ ಭಯಾನಕ ರಾತ್ರಿ ಅಂತ ಇನ್ನೊಂದು ಪೋಸ್ಟ್ ಬರೀತೀನಿ, ಅದಕ್ಕೂ ಸಿಕ್ಕಾಪಟ್ಟೆ ಭಯ ಆಗಿತ್ತು, ಬೇರೆ ಯಾರದ್ದೋ ಮನೆಗೆ ಬಂದ್ ಬಿಟ್ಟಿದೀನಿ ಅಂತ ;-)