Thursday, December 22, 2016

ಚೋಪ್ಟಾ ಚಂದ್ರಶಿಲಾ (Day 1)

ಹೊರಡಕ್ಕೆ ಎರಡು ದಿನ ಇರೋ ಹಾಗೆ ಟ್ರೆಕ್ organiser ಲಕ್ಷ್ಮಿ ಈ-ಮೇಲ್ ಕಳ್ಸಿ  ಬೆಳಗ್ಗೆ 6 ಗಂಟೆಗೆ ರೈಲ್ವೆ ಸ್ಟೇಷನ್ ಅಲ್ಲಿ ಟೆಂಪೋ ಟ್ರಾವೆಲರ್ ಕಾಯ್ತಾ ಇರತ್ತೆ ಅಂತ ಹೇಳಿದ್ರು. ಅವತ್ತಿನ ಪ್ಲಾನ್ ಇದ್ದಿದ್ದು ನಾವು ಸಾರಿ ಅನ್ನೋ ಹಳ್ಳಿ ತಲುಪಿ ಅಲ್ಲಿ ರೆಸ್ಟ್
ಯಾವಾಗ ಬೆಳಗ್ಗೆ ಆಗತ್ತೋ, ಎಲ್ಲ ಹೇಗಿರತ್ತೋ ಅನ್ನೋ ಯೋಚನೆಲಿ ರಾತ್ರಿ ಸರಿಯಾಗಿ ನಿದ್ದೆ ಬರ್ಲಿಲ್ಲ. ಬೆಳಗ್ಗೆ ಎದ್ದು indian standard time ಪ್ರಕಾರ ಅರ್ಧ ಗಂಟೆ ತಡವಾಗಿ ನಾನು, ಮೈಥಿಲಿ ರೈಲ್ವೆ ಸ್ಟೇಷನ್ ತಲುಪಿದ್ವಿ. ಅಷ್ಟೊತ್ತಿಗೆ ಎಲ್ಲಾರು ಬಂದಾಗಿತ್ತು : ಪೂಜಾ, ಪ್ರಿಯಾಂಕಾ, ಪಲ್ಲವಿ, ಮೋನಾ, ಮಾಧುರಿ, ರೆಂಜಿತ್, ಕ್ಯಾಥರಿನ್, ರಚನಾ, ನಿಮಿತ್ ಇಷ್ಟು ಜನ. 
ಆದ್ರೆ ಗಾಡಿ ಬಂದಿದ್ದು ಇನ್ನೂ ಲೇಟ್. ಗಾಡಿಗೆ ಎಲ್ಲಾ ಸಾಮಾನು ತುಂಬ್ಸಿ ಹೊರಡೋ ಅಷ್ಟರಲ್ಲಿ ಎಲ್ಲಾರು ಪರಿಚಯ ಮಾಡ್ಕೊಂಡ್ವಿ, ಗಾಡೀಲಿ ಹಾಡು ಹರಟೆಗಳು ಶುರು. 

ಅವತ್ತು ಬರಬೇಕಾಗಿದ್ದ ಗಾಡಿಯವನು ಏನೋ ಪ್ರಾಬ್ಲಮ್ ಆಗಿ ಕೊನೆ ಕ್ಷಣದಲ್ಲಿ ಬರ್ಲಿಲ್ಲ. organiser ಬೇರೆ ಗಾಡಿ ಕಳ್ಸಿದ್ರು, ಆ ಡ್ರೈವರ್ ಗೆ ನಮ್  ಮೇಲೆ ಏನು ಸಿಟ್ಟು ಬಂದಿತ್ತೋ ಗೊತ್ತಿಲ್ಲ, ಗಂಟೆ 9 ಆಗಿ ಹೊಟ್ಟೆ ಹಸಿದು ಪ್ರಾಣ ಹೋಗ್ತಾ ಇದೆ ಅಂದ್ರೂ ತಿಂಡಿಗೆ ನಿಲ್ಸಿಲ್ಲ!! ಅಂತೂ ಜಗಳ ಕಾದು ಯಾವ್ದೋ ಊರಲ್ಲಿ ತಿಂಡಿಗೆ ನಿಲ್ಸಿ ಆಲೂ ಪರಾಠಾ ತಿಂದಾಗ ಹೊಟ್ಟೆಗೆ ನೆಮ್ಮದಿ.
ಮುಂದೆ ಊಟಕ್ಕೆ ಏನಪ್ಪಾ ಕತೆ ಅಂತ ಮಾತಾಡ್ಕೊಂಡು ಗಾಡಿ ಹತ್ತಿ ಹೊರಟ್ರೆ ಹೋಗೋ ದಾರಿ ಪಕ್ಕ ಗಂಗಾ ನದಿ ಕಣ್ಣಾ ಮುಚ್ಚಾಲೆ ಆಟ ಆಡ್ತಾ ಇತ್ತು.

ಸಾರಿ ತಲುಪಕ್ಕೆ ನಾವು ರಿಷಿಕೇಶ್, ದೇವಪ್ರಯಾಗ್, ರುದ್ರಪ್ರಯಾಗ್, ಉಖೀಮಠ್ ದಾರೀಲಿ ಹೋಗ್ಬೇಕಿತ್ತು. ಹೋಗ್ತಾ ದಾರಿ ಪಕ್ಕದಲ್ಲೇ ಅಲಕನಂದಾ ಮತ್ತೆ ಭಾಗೀರತಿ ಸೇರಿ ಗಂಗಾ ನದಿ ಆಗೋದು, ನೋಡಕ್ಕೆ ಕಣ್ಣಿಗೆ ಹಬ್ಬ. ಅಲ್ಲಿ ಇಳಿದು ಸ್ವಲ್ಪ ಫೋಟೋ ತೆಕ್ಕೊಂಡ್ವಿ.ಇದೇ ಥರ ಅಲ್ಲಲ್ಲಿ ಇಳಿದು ಸೌತೆಕಾಯಿ ತಿಂದ್ಕೊಂಡು, ಇನ್ನೊಂದ್ ಕಡೆ ಗಡಗಡ ನಡುಗೋ ಚಳಿ ನೀರಲ್ಲಿ ಆಟ ಆಡಿ, ಇನ್ನಷ್ಟು ಫೋಟೋಸ್ ತೆಕ್ಕೊಂಡು ರುದ್ರಪ್ರಯಾಗ ತಲುಪಿದ್ವಿ. ಕಹಾನಿ ಮೇ ಟ್ವಿಸ್ಟ್ ಅನ್ನೋ ಥರ ಡ್ರೈವರ್ ಇಲ್ಲೇ ಇಳ್ಕೊಳ್ಳಿ ಇಲ್ಲೇ ಬಿಡಕ್ಕೆ ಹೇಳಿರೋದು ನಂಗೆ ಅಂತ ಹೇಳ್ದ. ನಾವೆಲ್ಲಾ  confused!! ಮತ್ತೆ ಟ್ರೆಕ್ organiser ಹತ್ರ ಮಾತಾಡಿ, ಡ್ರೈವರ್ ಹತ್ರ  ಜಗಳ ಮಾಡಿ ಸಾರಿ ತನಕ ಬಿಡ್ಲೇ ಬೇಕು ಅಂತ ಮಾತಾಯ್ತು. ಅವನಿಗೆ ದಾರಿ ಬೇರೆ ಗೊತ್ತಿರ್ಲಿಲ್ಲ. ಅಲ್ಲಿ ಇಲ್ಲಿ ಕೇಳ್ಕೊಂಡು ಉಖೀಮಠ್ ನಂತ್ರ deviation ಇದೆ ಅಂತ ಗೊತ್ತಾಯ್ತು. ಅಲ್ಲಿ ತಲುಪೋ ಅಷ್ಟ್ರಲ್ಲಿ ಭಾರೀ ಮಳೆ. ಕಿರಿದಾದ ರಸ್ತೆ, ಕಡಿದಾದ ತಿರುವು, ಜೊತೆಗೆ ಅಲ್ಲಲ್ಲಿ ಮಣ್ಣು ಬೇರೆ ಬೀಳಕ್ಕೆ ಶುರು ಆಯ್ತು. ದಾರಿ ಉದ್ದಕ್ಕೂ "danger, landslide zone" ಅನ್ನೋ  boards, ಜೀವ ಕೈಯಲ್ಲಿ ಹಿಡ್ಕೊಂಡು ಹೋಗಿದೀವಿ.


ಅಂತೂ ಸಾರಿ ತಲುಪಿದ್ರೆ, ಗಾಡಿಯಿಂದ ಇಳಿಯಕ್ಕೆ ಆಗ್ದೇ ಇರೋ ಅಷ್ಟು ಮಳೆ, ಆಲಿಕಲ್ಲು. ಸ್ವಲ್ಪ ಹೊತ್ತಲ್ಲಿ ಮಳೆ ನಿಂತು ಪರಿಸರ ಶಾಂತ ಮತ್ತು ಸುಂದರ.  ಅಲ್ಲಿ ನಮ್ಮ ಟ್ರೆಕ್ ಗೈಡ್ ಬಾಬ್ಬಿ  ಪರಿಚಯ ಆಯ್ತು.  ಮುಂದಿನ ದಿನಗಳ ಪ್ಲಾನ್ ಎಲ್ಲಾ ಮಾತಾಡಿ, ರಾತ್ರಿ ಬಿಸಿ ಬಿಸಿ ಊಟ ಮಾಡಿ ಮಲಗಿದ್ರೆ ನಿದ್ದೆ ಬಂದಿದ್ದೇ ಗೊತ್ತಾಗ್ಲಿಲ್ಲ.ಟ್ರೆಕ್ ನಾಳೆಯಿಂದ, to be continued....