Thursday, December 22, 2016

ಚೋಪ್ಟಾ ಚಂದ್ರಶಿಲಾ (Day 1)

ಹೊರಡಕ್ಕೆ ಎರಡು ದಿನ ಇರೋ ಹಾಗೆ ಟ್ರೆಕ್ organiser ಲಕ್ಷ್ಮಿ ಈ-ಮೇಲ್ ಕಳ್ಸಿ  ಬೆಳಗ್ಗೆ 6 ಗಂಟೆಗೆ ರೈಲ್ವೆ ಸ್ಟೇಷನ್ ಅಲ್ಲಿ ಟೆಂಪೋ ಟ್ರಾವೆಲರ್ ಕಾಯ್ತಾ ಇರತ್ತೆ ಅಂತ ಹೇಳಿದ್ರು. ಅವತ್ತಿನ ಪ್ಲಾನ್ ಇದ್ದಿದ್ದು ನಾವು ಸಾರಿ ಅನ್ನೋ ಹಳ್ಳಿ ತಲುಪಿ ಅಲ್ಲಿ ರೆಸ್ಟ್
ಯಾವಾಗ ಬೆಳಗ್ಗೆ ಆಗತ್ತೋ, ಎಲ್ಲ ಹೇಗಿರತ್ತೋ ಅನ್ನೋ ಯೋಚನೆಲಿ ರಾತ್ರಿ ಸರಿಯಾಗಿ ನಿದ್ದೆ ಬರ್ಲಿಲ್ಲ. ಬೆಳಗ್ಗೆ ಎದ್ದು indian standard time ಪ್ರಕಾರ ಅರ್ಧ ಗಂಟೆ ತಡವಾಗಿ ನಾನು, ಮೈಥಿಲಿ ರೈಲ್ವೆ ಸ್ಟೇಷನ್ ತಲುಪಿದ್ವಿ. ಅಷ್ಟೊತ್ತಿಗೆ ಎಲ್ಲಾರು ಬಂದಾಗಿತ್ತು : ಪೂಜಾ, ಪ್ರಿಯಾಂಕಾ, ಪಲ್ಲವಿ, ಮೋನಾ, ಮಾಧುರಿ, ರೆಂಜಿತ್, ಕ್ಯಾಥರಿನ್, ರಚನಾ, ನಿಮಿತ್ ಇಷ್ಟು ಜನ. 
ಆದ್ರೆ ಗಾಡಿ ಬಂದಿದ್ದು ಇನ್ನೂ ಲೇಟ್. ಗಾಡಿಗೆ ಎಲ್ಲಾ ಸಾಮಾನು ತುಂಬ್ಸಿ ಹೊರಡೋ ಅಷ್ಟರಲ್ಲಿ ಎಲ್ಲಾರು ಪರಿಚಯ ಮಾಡ್ಕೊಂಡ್ವಿ, ಗಾಡೀಲಿ ಹಾಡು ಹರಟೆಗಳು ಶುರು. 

ಅವತ್ತು ಬರಬೇಕಾಗಿದ್ದ ಗಾಡಿಯವನು ಏನೋ ಪ್ರಾಬ್ಲಮ್ ಆಗಿ ಕೊನೆ ಕ್ಷಣದಲ್ಲಿ ಬರ್ಲಿಲ್ಲ. organiser ಬೇರೆ ಗಾಡಿ ಕಳ್ಸಿದ್ರು, ಆ ಡ್ರೈವರ್ ಗೆ ನಮ್  ಮೇಲೆ ಏನು ಸಿಟ್ಟು ಬಂದಿತ್ತೋ ಗೊತ್ತಿಲ್ಲ, ಗಂಟೆ 9 ಆಗಿ ಹೊಟ್ಟೆ ಹಸಿದು ಪ್ರಾಣ ಹೋಗ್ತಾ ಇದೆ ಅಂದ್ರೂ ತಿಂಡಿಗೆ ನಿಲ್ಸಿಲ್ಲ!! ಅಂತೂ ಜಗಳ ಕಾದು ಯಾವ್ದೋ ಊರಲ್ಲಿ ತಿಂಡಿಗೆ ನಿಲ್ಸಿ ಆಲೂ ಪರಾಠಾ ತಿಂದಾಗ ಹೊಟ್ಟೆಗೆ ನೆಮ್ಮದಿ.
ಮುಂದೆ ಊಟಕ್ಕೆ ಏನಪ್ಪಾ ಕತೆ ಅಂತ ಮಾತಾಡ್ಕೊಂಡು ಗಾಡಿ ಹತ್ತಿ ಹೊರಟ್ರೆ ಹೋಗೋ ದಾರಿ ಪಕ್ಕ ಗಂಗಾ ನದಿ ಕಣ್ಣಾ ಮುಚ್ಚಾಲೆ ಆಟ ಆಡ್ತಾ ಇತ್ತು.

ಸಾರಿ ತಲುಪಕ್ಕೆ ನಾವು ರಿಷಿಕೇಶ್, ದೇವಪ್ರಯಾಗ್, ರುದ್ರಪ್ರಯಾಗ್, ಉಖೀಮಠ್ ದಾರೀಲಿ ಹೋಗ್ಬೇಕಿತ್ತು. ಹೋಗ್ತಾ ದಾರಿ ಪಕ್ಕದಲ್ಲೇ ಅಲಕನಂದಾ ಮತ್ತೆ ಭಾಗೀರತಿ ಸೇರಿ ಗಂಗಾ ನದಿ ಆಗೋದು, ನೋಡಕ್ಕೆ ಕಣ್ಣಿಗೆ ಹಬ್ಬ. ಅಲ್ಲಿ ಇಳಿದು ಸ್ವಲ್ಪ ಫೋಟೋ ತೆಕ್ಕೊಂಡ್ವಿ.ಇದೇ ಥರ ಅಲ್ಲಲ್ಲಿ ಇಳಿದು ಸೌತೆಕಾಯಿ ತಿಂದ್ಕೊಂಡು, ಇನ್ನೊಂದ್ ಕಡೆ ಗಡಗಡ ನಡುಗೋ ಚಳಿ ನೀರಲ್ಲಿ ಆಟ ಆಡಿ, ಇನ್ನಷ್ಟು ಫೋಟೋಸ್ ತೆಕ್ಕೊಂಡು ರುದ್ರಪ್ರಯಾಗ ತಲುಪಿದ್ವಿ. ಕಹಾನಿ ಮೇ ಟ್ವಿಸ್ಟ್ ಅನ್ನೋ ಥರ ಡ್ರೈವರ್ ಇಲ್ಲೇ ಇಳ್ಕೊಳ್ಳಿ ಇಲ್ಲೇ ಬಿಡಕ್ಕೆ ಹೇಳಿರೋದು ನಂಗೆ ಅಂತ ಹೇಳ್ದ. ನಾವೆಲ್ಲಾ  confused!! ಮತ್ತೆ ಟ್ರೆಕ್ organiser ಹತ್ರ ಮಾತಾಡಿ, ಡ್ರೈವರ್ ಹತ್ರ  ಜಗಳ ಮಾಡಿ ಸಾರಿ ತನಕ ಬಿಡ್ಲೇ ಬೇಕು ಅಂತ ಮಾತಾಯ್ತು. ಅವನಿಗೆ ದಾರಿ ಬೇರೆ ಗೊತ್ತಿರ್ಲಿಲ್ಲ. ಅಲ್ಲಿ ಇಲ್ಲಿ ಕೇಳ್ಕೊಂಡು ಉಖೀಮಠ್ ನಂತ್ರ deviation ಇದೆ ಅಂತ ಗೊತ್ತಾಯ್ತು. ಅಲ್ಲಿ ತಲುಪೋ ಅಷ್ಟ್ರಲ್ಲಿ ಭಾರೀ ಮಳೆ. ಕಿರಿದಾದ ರಸ್ತೆ, ಕಡಿದಾದ ತಿರುವು, ಜೊತೆಗೆ ಅಲ್ಲಲ್ಲಿ ಮಣ್ಣು ಬೇರೆ ಬೀಳಕ್ಕೆ ಶುರು ಆಯ್ತು. ದಾರಿ ಉದ್ದಕ್ಕೂ "danger, landslide zone" ಅನ್ನೋ  boards, ಜೀವ ಕೈಯಲ್ಲಿ ಹಿಡ್ಕೊಂಡು ಹೋಗಿದೀವಿ.


ಅಂತೂ ಸಾರಿ ತಲುಪಿದ್ರೆ, ಗಾಡಿಯಿಂದ ಇಳಿಯಕ್ಕೆ ಆಗ್ದೇ ಇರೋ ಅಷ್ಟು ಮಳೆ, ಆಲಿಕಲ್ಲು. ಸ್ವಲ್ಪ ಹೊತ್ತಲ್ಲಿ ಮಳೆ ನಿಂತು ಪರಿಸರ ಶಾಂತ ಮತ್ತು ಸುಂದರ.  ಅಲ್ಲಿ ನಮ್ಮ ಟ್ರೆಕ್ ಗೈಡ್ ಬಾಬ್ಬಿ  ಪರಿಚಯ ಆಯ್ತು.  ಮುಂದಿನ ದಿನಗಳ ಪ್ಲಾನ್ ಎಲ್ಲಾ ಮಾತಾಡಿ, ರಾತ್ರಿ ಬಿಸಿ ಬಿಸಿ ಊಟ ಮಾಡಿ ಮಲಗಿದ್ರೆ ನಿದ್ದೆ ಬಂದಿದ್ದೇ ಗೊತ್ತಾಗ್ಲಿಲ್ಲ.ಟ್ರೆಕ್ ನಾಳೆಯಿಂದ, to be continued....

Friday, December 9, 2016

ಚೋಪ್ಟಾ ಚಂದ್ರಶಿಲಾ (Day 0)

ಹಿಮಾಲಯದ ಚಾರಣ ಹೋಗ್ಬೇಕು ಅಂತ ತುಂಬಾ ದಿನದ ಆಸೆ ಇತ್ತು, ಆದ್ರೆ ಧೈರ್ಯ ಇರ್ಲಿಲ್ಲ. ಅಂತೂ ಇಂತೂ ಧೈರ್ಯ ಮಾಡಿ ಸುಲಭದ್ದು ಶುರು ಮಾಡೋಣ ಅಂತ http://trekthehimalayas.com/ ಜೊತೆ  Chopta Chandrasila trek (14th May-19th May 2016) ಬುಕ್ ಮಾಡೇ ಬಿಟ್ಟೆ.  ಚೋಪ್ಟಾ ಚಂದ್ರಶಿಲಾ ಉತ್ತರಾಖಂಡ್ ರಾಜ್ಯದಲ್ಲಿದೆ. ಇಲ್ಲಿನ ಶಿಖರಗಳನ್ನು  ಘಡ್ವಾಲ್ ಹಿಮಾಲಯ ಅಂತಾನೂ ಕರೀತಾರೆ.

ಮೈಸೂರಿಂದ ಹರಿದ್ವಾರ್ ತನಕ ಹೋಗಿ, ಅಲ್ಲಿ ಮಿಕ್ಕಿರೋರು(ಯಾರದ್ದೂ ಪರಿಚಯ ಇರ್ಲಿಲ್ಲ) ಸಿಗ್ತಾರೆ ಅನ್ನೋ ಪ್ಲಾನ್.
ಬೆಂಗ್ಳೂರ್ ಅಲ್ಲಿ ಆಫೀಸ್ ಇದ್ರೂ ಮೈಸೂರಿಂದ ಮನೆಯಿಂದ ಕೆಲಸ(work from home) ಮಾಡ್ತಾ  ಇರೋದ್ರಿಂದ, ಒಂದು ವಾರ ರಜಾ ಹಾಕಿದ್ರೆ  ಸ್ವಲ್ಪ ಎಲ್ಲ ಕೆಲಸ ಮುಗ್ಸಿ ಹೋಗೋ ಅನ್ನೋ ಪ್ರೆಷರ್. ಅದಕ್ಕೆ ಅಂತ ಎರಡು ದಿನ ಮೊದ್ಲೇ ಮೈಸೂರಿಂದ ಹೊರಟಿದ್ದು(May 11).  ಹೋಗ್ತಾ ಮೂರು ಮೂರು ಬ್ಯಾಗ್! ಮನೆಯಿಂದಾನೆ ಟ್ರೆಕಿಂಗ್ ಶುರು ಆಗಿತ್ತು ನಂಗೆ.

ಬೆಂಗ್ಳೂರಲ್ಲಿ ಆಫೀಸ್ ಹತ್ರ ಫ್ರೆಂಡ್ ಮನೆಲಿ ಇದ್ದು, ಆಫೀಸ್ ಕೆಲಸ ಮುಗ್ಸಿ May 13ಕ್ಕೆ ಡೆಹ್ರಾಡೂನ್ ಕಡೆ ಹೊರಟೆ. ಒಂಥರಾ ಖುಷಿ, ಒಂಥರಾ ಭಯ, ಮೊದಲನೇ ಸರ್ತಿ ಒಬ್ಬಳೇ ಇಷ್ಟು ದೂರ ಪ್ರಯಾಣ ಮಾಡ್ತಿದ್ದಿದ್ದು. ಮೈಥಿಲಿ ಅಂತ ಇನ್ನೊಬ್ಬಳು ಮುಂಬೈ ಇಂದ ಇದೇ ಗ್ರೂಪ್ ಅಲ್ಲಿ ಇದ್ಳು. ಅವಳೂ ಒಬ್ಬಳೇ ಬರ್ತಾ ಇದ್ಳು, ಹಾಗೆ ಹರಿದ್ವಾರ್ ಅಲ್ಲಿ ಒಟ್ಟಿಗೆ ಇರೋಣ ಅಂತ ಪ್ಲಾನ್ ಮಾಡ್ಕೊಂಡಿದ್ವಿ. ಡೆಹ್ರಾಡೂನಿಂದ ಕ್ಯಾಬ್ ಮಾಡ್ಕೊಂಡು ಹರಿದ್ವಾರ್.  ರೈಲ್ವೆ ಸ್ಟೇಷನ್ ಹತ್ರ ಇದ್ರೆ ಒಳ್ಳೇದು ಅಂತ ಸಚಿನ್ ಇಂಟರ್ನಾಷನಲ್ ಹೋಟೆಲ್ ಬುಕ್ ಮಾಡಿದ್ವಿ, ಅದಂತೂ ಹಳೇ  ಹೋಟೆಲ್, ಎಲ್ಲ ಧೂಳುಮಯ.

ಹೇಗಿದ್ರೂ ಹರಿದ್ವಾರ್ ಹೋಗೋದೇ ಆದ್ಮೇಲೆ ಗಂಗಾ ಆರತಿ ನೋಡ್ದೆ ಇದ್ರೆ ಆಗತ್ತಾ! ಹೋಟೆಲಿಂದ 3 ಕಿ.ಮೀ. ಇರ್ಬಹುದು. ಸೈಕಲ್ ರಿಕ್ಷಾ ಹತ್ಕೊಂಡು ಸಂಜೆ ಆರಕ್ಕೆ ಹರ್ ಕಿ ಪೌಡಿ ಕಡೆ ಹೋದ್ವಿ, ಏನ್ ಜನ ಅಲ್ಲಿ, ಸೆಖೆ ಬೇರೆ! ಅಲ್ಲಿ ಇರೋ ಪುರೋಹಿತರು ಎಲ್ಲ ಕಡೆಯಿಂದ ಮುತ್ಕೊಂಡು ಪೂಜೆ ಮಾಡ್ಸಕ್ಕೆ ಇಷ್ಟು ಕೊಡಿ ಅಷ್ಟು ಕೊಡಿ ಪೂಜೆ ಮಾಡ್ಸಕ್ಕೆ ಇಷ್ಟು ಕೊಡಿ ಅಷ್ಟು ಕೊಡಿ ಅಂತ ಬರೀ ದುಡ್ಡ್ ಎಳಿಯಕ್ಕೆ ನೋಡ್ತಿರ್ತಾರೆ. ಆದ್ರೂ ಗಂಗಾ ಆರತಿ ಮೊದಲನೇ ಸರ್ತಿ ನೋಡಿದ್ದು ಅಲ್ಲಿ, ಹೊಸಾ ಅನುಭವ, ಏನೋ ಖುಷಿ.. ಅಲ್ಲಿಂದ ಚೋಲೆ ಭತೂರೆ ತಿಂದು ಹೋಟೆಲ್ಗೆ ವಾಪಸ್.

ಟ್ರಿಪ್ ನಾಳೆಯಿಂದ, ಮುಂದುವರೆದ ಅಧ್ಯಾಯದಲ್ಲಿ  :-D


 

Thursday, October 27, 2016

ರಾಮಾ ರಾಮಾ ರೇ - ಕೇಳು ಕೃಷ್ಣ

ಭಗವದ್ಗೀತೆ ಒಂದು ಹಾಡಿನಲ್ಲಿ


ಅರ್ಜುನ: ಕೃಷ್ಣಾಆಆ
ಕೃಷ್ಣ: ಒಹೋ

ಅ: ಕರುಣಾ ಸಿಂಧು
ಕೃ: ಹೌದಪ್ಪ
ಅ: ದೀನ ಬಂಧು
ಕೃ: ಅಬ್ಬಾಬ್ಬಬ್ಬ..
ಅ: ಆಪತ್ ಬಾಂಧವ, ಪಾಹಿಮಾಮ್...
ಕೃ: ಭೇಷ್, ಎತ್ಕೊಬಿಟ್ಟೆ ಕನ್ಲಾ

ಅ: ಕೇಳು ಕೃಷ್ಣ
ಕೃ: ಹೂ, ಹೇಳ್ಳಾ ಪಾರ್ಥ
ಅ: ಕೇಳು ಕೃಷ್ಣ
ಕೃ: ಹೇಳು ಪಾರ್ಥ
ಅ: ಕೇಳು ಕೃಷ್ಣ
ಕೃ: ಹೇಳು ಪಾರ್ಥ
ಅ: ಒಳಗೊಳಗೇ ಭಯವಯ್ತಯ್ಯ
ಕೃ: ನಾನಿವ್ನಿ ಸುಮ್ನಿರ್ಲಯಾ
ಅ: ಕೇಳು ಕೃಷ್ಣ
ಕೃ: ಹೇಳು ಪಾರ್ಥ
ಅ: ಈ ಖರ್ಮ ನನಗ್ಯಾಕಯ್ಯಾ
ಕೃ: ಧರ್ಮಾನ ಕಾಪಾಡೆಯಾ

ಅ: ಎಲ್ಲರೂ ನನ್ನೋರೆ ಜೊತೆಗಾರರೇ
ಕೃ: ಸಮರದಲ್ಲಿ ಸಂಬಂಧ ಏಕೋ ದೊರೆ
     ಹೂಡು ನೀ ಬಾಣವಾ
ಅ: ಆಗದೋ ಮಾಧವಾ

ಅ: ತಡಿ ಕೃಷ್ಣ
ಕೃ: ನಡಿ ಪಾರ್ಥ
ಅ: ತಡಿ ಕೃಷ್ಣ
ಕೃ: ನಡಿ ಪಾರ್ಥ

ಅ: ಸ್ನೇಹಿತರು
ಕೃ: ಅವರಯ್ಯ
ಅ: ಮರಣವಿದು
ಕೃ: ಅನಿವಾರ್ಯ
ಅ: ಭಗವಂತ ಕೃಪೆ ತೋರೆಯ

ಕೃ: ನೀನಿಲ್ಲಿ
ಅ: ಕ್ಷತ್ರಿಯ
ಕೃ: ನೀ ಕೂಡ
ಅ: ಕ್ಷಣವಯ್ಯ
ಕೃ: ಪಾಂಡವನೆ ಬಿಡು ಬಯಕೆಯ

ಅ: ಏನೆಂದು ತಿಳಿತಿಲ್ಲ 
     ಬಂಧವಿದು ಬಿಡುತ್ತಿಲ್ಲ 
     ಕೃಷ್ಣಾ, ಈ ಸಾವು ನೋವೆತಕೋ? 
ಕೃ: ಸಾವಂತೆ ನೋವಂತೆ 
     ಆತ್ಮಕ್ಕೆ ಏನಂತೆ 
     ಪ್ರತಿ ಮರಣ ಹೊಸ ಜನನಕೋ 

ಅ: ಕೊಲ್ಲುವುದು ಬೇಡಯ್ಯ, ನನಗಿರಲಿ ಅಪಜಯ 
ಕೃ: ಸೈನಿಕನು ನೀನಯ್ಯಾ, ಕರ್ತವ್ಯ ಮರೆತೆಯಾ 

ಅ: ನನಗ್ಯಾಕೆ ಬೇಕಯ್ಯಾ, ಈ ರಾಜ್ಯ ವೈಭೋಗ 
ಕೃ: ವೈರಾಗಿ ನೀನಾದ್ರೆ ಏನಯ್ಯ ಉಪಯೋಗ 

ಅ: ನರಕ್ದಂತೆ ಕಾಣ್ತಾಯಿತೇ ನಾ ನಿಂತ ಜಗವೆಲ್ಲ  
ಕೃ: ಜಗವೆಲ್ಲ ನನ್ನಲ್ಲೇ, ಆ ಭಯವು ಬೇಕಿಲ್ಲ  

ಅ:  ಬರಲಾರೆ ನಾನು, ದಯೆ ತೋರು ಪ್ರಭುವೇ, ಇರಲಾರೆ ನಾನೂ...    
ಕೃ: ಶರಣಾಗು ನೀನು, ಬಿಡು ಬೇರೆ ಎಲ್ಲವನು 
    ಶರಣಾಗು ನೀನೂಊಊ  

Wednesday, September 14, 2016

ಪದೇ ಪದೇ ಅದೇ ಅದೇ (ಪ್ರೇಮ ಗೀಮಾ ಜಾನೇ ದೋ)

"ಪದೇ ಪದೇ ಅದೇ ಅದೇ" ಹಾಡು melodious & lyrics ಕೂಡ ತುಂಬಾ ಚೆನ್ನಾಗಿದೆ.
Loved the line: "ಜಗಳ ಆಡೋದು ಕೂಡಾ ತಬಲಾ ಜತಿ ನುಡಿದಂತೆ" <3 <3 <3


ಪದೇ ಪದೇ ಅದೇ ಅದೇ ಹಳೇ ಕತೆ ಶುರುವಾಗಿದೆ
ಹೊಸಾ ದಿನ ಹೊಸಾ ಜನ ವಿನೂತನ ಈ ಲೋಕವೇ

ಛಳಿಗಾಲದ ಎಳೆ ಬಿಸಿಲಂತೆ ಇಣುಕುತಿದೆ ಒಲವೊಂದು
ಚಿಗುರುತಿರೋ ವಯಸಿಗೆ ಬೇಕು ಈ ಥರದ ಸುಖವೊಂದು
ಇದೊಂತರಾ ಚರಿಶ್ಮಯಾ
ಅದೇನು ಮೋಡಿ ಪ್ರೀತಿಗಿದೆಯೋ

ನವಿಲು ತೆರೆದಂತೆ ಗರಿಯ ಒಲವಾ ತಾಕಿದ ಹೃದಯ
ಕಾಲ ತುದಿಯಿಂದ ಮುಡಿಗೆ ಮಿಂಚು ಹರಿಯೋ ಹರೆಯ
ಬಯಲೆಲ್ಲ ಹಸಿರಾಗಿ, ಸಿಹಿಯಾಯ್ತು ತಿಳಿ ಗಾಳಿ
ಒಳಗೊಳಗೇ ಕುಣಿದಂತೆ ನನ್ನಾ ಪುಟ್ಟ ಹೃದಯ
ಇದೊಂತರಾ ಅವಿಸ್ಮಯ
ಅದೇನು ಮೋಡಿ ಪ್ರೀತಿಗಿದೆಯೋ

ಯುಗಳ ಒಂದೊಂದು ಮಾತು ಹರಳ ಝರಿ ಸುರಿದಂತೆ
ಜಗಳ ಆಡೋದು ಕೂಡಾ ತಬಲಾ ಜತಿ ನುಡಿದಂತೆ
ನಿನ್ನೊಡನೆ ಒಡನಾಟ, ಕಲಿತಷ್ಟು ಒಳ ನೋಟ
ಹುಡುಗಾಟ ಹುಡುಕಾಟ, ಎಲ್ಲಾ ನಿನ್ನ ಕೊಡುಗೆ
ಇದೊಂತರಾ ಅಗೋಚರ
ಅದೇನು ಮೋಡಿ ಪ್ರೀತಿಗಿದೆಯೋ


Tuesday, September 13, 2016

ಪ್ರೇಮ ಗೀಮಾ ಜಾನೇ ದೋ

ಸಿನಿಮಾ ಶುರುವಾಗುವುದು ಚಿಕ್ಕಮಗಳೂರಿನ ರಮಣೀಯ ದೃಶ್ಯಗಳಿಂದ.
ಸಿನಿಮಾ ನಾಯಕ ಮುಳ್ಳಯ್ಯನ ಗಿರಿಯ ತುದಿಯಿಂದ ಡಾರ್ಜಲಿಂಗ್ ಟೀ ಎಸ್ಟೇಟ್ ಗಳ ಕಡೆ ಯಾಕೆ ಹೋದ?
ಕೃಷ್ಣನ ವೇಷಧಾರಿಯೊಬ್ಬನನ್ನು ಕಂಡ ಕೂಡಲೇ ಅವನಿಗೆ ಯಾಕೆ ಭಯ? ಕಾರ್ತಿಕ್ ಯಾರು? ಪ್ರೀತಮ್ ಯಾರು? ಏನಿದು ಡಿಲೀರಿಯಮ್ ಟ್ರಿಮನ್ಸ್?
ಇಷ್ಟೆಲ್ಲಾ ಪ್ರಶ್ನೆಗಳನ್ನು ಹುಟ್ಟು ಹಾಕಿದರೂ ಸಿನಿಮಾದ ಕೊನೆಯಲ್ಲಿ ಎಲ್ಲವೂ ಸ್ಪಷ್ಟ.

ಸಿನಿಮಾದ ಮೊದಲ ಭಾಗ ಹೊಟ್ಟೆ ತುಂಬಾ ನಗು ತರಿಸಿದರೆ, ಮಧ್ಯಂತರದಲ್ಲಿ ತಿರುವು. ಎರಡನೇ ಭಾಗದಲ್ಲಿ, ತಂದೆ ಪ್ರೀತಿ, ಹುಡುಗಿ ಪ್ರೀತಿ, ದ್ವೇಷ, ಸೇಡು!

ಸಿನಿಮಾ ತುಂಬಾ ಅದ್ಭುತವಾದ ದೃಶ್ಯಗಳಿವೆ. ನಮ್ಮ ದೇಶದಲ್ಲೇ ಇಷ್ಟೆಲ್ಲಾ ಸುಂದರ ಸ್ಥಳಗಳಿರುವಾಗ ಬೇರೆ ದೇಶಗಳಿಗೆ ಯಾಕೆ ಹೋಗಬೇಕು ಎಂದು ಅನಿಸಿದರೆ ಆಶ್ಚರ್ಯವಿಲ್ಲ. ಸಿನಿಮಾ ಟ್ರೈಲರ್ ಇಲ್ಲಿ ನೋಡಿ : https://www.youtube.com/watch?v=yF18sCAsHzg

ಹಾಡುಗಳೂ ತುಂಬಾ ಚೆನ್ನಾಗಿವೆ, ಪದೇ ಪದೇ ಹಾಡನ್ನು ಪದೇ ಪದೇ ಕೇಳಲೇ ಬೇಕು.
ರಾಜೇಶ್ ಕೃಷ್ಣನ್ ದನಿಯಲ್ಲಿ ಅಪರೂಪದಾನಂದ ಕೂಡಾ ಅಷ್ಟೇ ಚೆನ್ನಾಗಿದೆ.
ಕಾಲೇಜು ಹುಡುಗರಿಗೋಸ್ಕರ title song

ಇದು ಹೊಸಬರ ಪ್ರಯತ್ನವಾದರೂ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ.
Must watch movie, don't miss it.