Sunday, June 7, 2015

ಚಾಮುಂಡಿ ಬೆಟ್ಟ ಮೆಟ್ಟಿಲು ಸೇವೆ

ಚಾಮುಂಡಿ ಬೆಟ್ಟ ಮೆಟ್ಟಿಲು ಹತ್ತಿಕೊಂಡು ಹೋಗ್ತಾ ಇದ್ದಾಗ ಸುಮಾರು ಜನ ಮೆಟ್ಟಿಲಿಗೆ ಅರಸಿನ+ಕುಂಕುಮ ಹಚ್ಚಿಕೊಂಡು ಹೋಗ್ತಾ ಇದ್ದಿದ್ದು ನೋಡಿದ್ದೆ. ಎಷ್ಟು ಕಷ್ಟ, ಎಲ್ಲ ಮೆಟ್ಲಿಗೂ ಬಗ್ಗಿ ಬಗ್ಗಿ ಹಚ್ಕೊಂಡು ಹೋಗೋದು ಅಂತ ಯೋಚನೆ ಮಾಡ್ತಾ ಇದ್ದೆ.

ವಾಪಸ್ ಬರ್ತಾ  ಇರೋವಾಗ, ಇನ್ನೊಬ್ರು ಇವ್ರೆನ್ನಲ್ಲ ಬೈತಾ ಇದ್ರು. ಮೊದಲೆಲ್ಲ ಮೆಟ್ಟಿಲು ಸೇವೆ ಅಂದ್ರೆ ಎಲ್ಲ ಮೆಟ್ಲು ಗುಡ್ಸೋದು, ಸ್ವಚ್ಛ ಮಾಡೊದು ಈ ತರ ಇರ್ತಾ ಇತ್ತು. ಈಗ ನೋಡಿದ್ರೆ ಈ ಥರ, ಅರಸಿನ+ಕುಂಕುಂಮ ಹಚ್ಚೋದ್ರಿಂದ ಯಾರಿಗೂ ಪ್ರಯೋಜನ ಇಲ್ಲ, ಬರೀ ನಮ್ ಕಾಲಿಗ್ ಹತ್ಕೊಳತ್ತೆ ಅದು. Useless. ಇದಕ್ಕಿಂತ ಅಲ್ಲಿ ಇಲ್ಲಿ ಬಿದ್ದಿರೋ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ತುಂಬಿಸಿ ದಾರಿಲಿರೋ ಗಿಡಗಳ ಹತ್ರ ಇಟ್ರೆ ಹನಿ ನೀರಾವರಿ ಆದಂಗೆ, ಗಿಡಕ್ಕೂ ಪ್ರಯೋಜನ ಅಗತ್ತೆ.

ಅಂತ ಹೇಳ್ತಾ, ಒಂದು ಬಾಟಲ್ ನೀರು ಇಡ್ತಾ ಇದ್ದಿದ್ದು ನೋಡಿ ಖುಷಿ ಆಯ್ತು. ಎಷ್ಟು ಸರಿ ಅಲ್ವ ಅವರು ಹೇಳಿದ್ದು.  

No comments: