Monday, November 11, 2013

ಉತ್ತಮ ಆರೋಗ್ಯಕ್ಕಾಗಿ Diet plan

Diet ಅಂತ ಓದಿದ ತಕ್ಷಣ ಇನ್ನೇನಿರತ್ತೆ, ಬೆಳಗ್ಗೆ  oats/corn flakes ತಿನ್ನಿ, ಅನ್ನ ತಿನ್ಬೇಡಿ- ಚಪಾತಿ ತಿನ್ನಿ, ಕಡ್ಲೆ/ಕೊಬ್ಬರಿ ಎಣ್ಣೆ ಬೇಡ - olive oil ಉಪಯೋಗಿಸಿ, ಸಿಹಿ ತಿಂಡಿ/ತುಪ್ಪ/ಕಾಯಿತುರಿ ತಿನ್ಲೇ ಬೇಡಿ ಅಂತೆಲ್ಲ ಹೇಳ್ತೀನಿ ಅಂದ್ಕೊಂಡ್ರಾ? ಖಂಡಿತಾ ಇಲ್ಲ.

ಆರು ತಿಂಗಳ ಹಿಂದೆ ರುಜುತಾ ದಿವೇಕರ್ ಬರೆದ  "Don't lose your mind, lose your weight" ಪುಸ್ತಕ ಓದಿದೆ.
ಪುಸ್ತಕದ ಹೆಸರು ತೂಕ ಕಡಿಮೆ ಮಾಡಿಕೊಳ್ಳಿ ಅಂತ ಇದ್ರೂ, ಪುಸ್ತಕದ ಪ್ರಾರಂಭದಲ್ಲೇ ಅವಳು ಹೇಳೋದು ತೂಕದ ಬಗ್ಗೆ ಯೋಚನೆ ಮಾಡ್ಬೇಡಿ, ಆರೋಗ್ಯದ ಬಗ್ಗೆ ಗಮನ ಕೊಡಿ ಅಂತ. ಸರಿಯಾದ ಆಹಾರ ಕ್ರಮವನ್ನು follow ಮಾಡಿದ್ರೆ ಕೊಬ್ಬು(fat content) ಕಡಿಮೆ ಆಗತ್ತೆ ಅಂದ್ರೆ ತೂಕನೂ ತಾನೇ ತಾನಾಗಿ ಕಡಿಮೆ ಆಗತ್ತೆ.

ಎಲ್ಲರಿಗೂ ತೂಕ ಕಡಿಮೆ ಮಾಡುವುದೇ ಯೋಚನೆ, ಈ ವಿಚಾರವಾಗಿ google ಮೊರೆ ಹೋದರೆ ಸಿಗುವ ಸಿಗುವ options(crash diets): ದಿನ ಇದೇ ಕಲ್ಲಂಗಡಿ ಹಣ್ಣು ತಿನ್ನಿ, ಸಲಾಡ್ ತಿನ್ನಿ ಬರೀ ಜ್ಯೂಸು ಕುಡೀರಿ ಎಲ್ಲ ಈ ಥರದ್ದೇ. ಒಂದು ವಾರ ಈ ಥರ ಮಾಡಿದ್ರೆ ಖಂಡಿತಾ ತೂಕ ಕಡಿಮೆ ಆಗತ್ತೆ. ಆದ್ರೆ ಇದರಿಂದ ಅಡ್ಡ ಪರಿಣಾಮಗಳೇ ಜಾಸ್ತಿ, ಒಂದು ವಾರದ ನಂತರ nutrion defeciency ಮತ್ತು ಅದರಿಂದಾಗಿ weakness. Diet ಮುಗಿದ ಮೇಲೆ ಎಲ್ಲ ತಿನ್ನಕ್ಕೆ ಶುರು ಮಾಡಿದ ಮೇಲೆ ಮತ್ತೆ ತೂಕ ಇನ್ನೂ ಜಾಸ್ತಿ ಆಗತ್ತೆ.

ರುಜುತಾ ಹೇಳೋ 4 principles:
1: ಬೆಳಗ್ಗೆ ಎದ್ದ ತಕ್ಷಣ coffee/tea ಕುಡೀಬೇಡಿ, ಯಾವ್ದಾದ್ರು ಹಣ್ಣು ತಿನ್ನಿ.  
2. ಪ್ರತೀ ಎರಡು ಘಂಟೆಗೆ ಏನಾದ್ರೂ ತಿನ್ನಿ. ನಾವು ಮಾಡೋ ದೊಡ್ಡ ತಪ್ಪು ಇದು, ತುಂಬಾ ಹೊತ್ತು ಏನೂ ತಿನ್ನದೇ ಕೊನೆಗೆ ಹೊಟ್ಟೆ ಬಿರಿಯೋ ತರ ತಿನ್ನೋದು. ಇದ್ರಿಂದ ತಿನ್ನೋ ಊಟ ಎಲ್ಲ ಕೊಬ್ಬಾಗಿ ದೇಹದಲ್ಲಿ ಶೇಖರಣೆಗೊಳ್ಳತ್ತೆ.
3. ಜಾಸ್ತಿ ಕೆಲಸ ಮಾಡೋ ಹೊತ್ತಿಗೆ ಜಾಸ್ತಿ ತಿನ್ನಿ, ಕಡಿಮೆ ಕೆಲಸ ಮಾಡೋ  ಹೊತ್ತಿಗೆ ಕಡಿಮೆ ತಿನ್ನಿ.
4.  ರಾತ್ರಿ ಊಟ ಮಲಗೋ 2 ಘಂಟೆ ಮೊದಲೇ ಮಾಡಿ.

ಆದಷ್ಟು ಅಪ್ಪ, ಅಮ್ಮ, ಅಜ್ಜ, ಅಜ್ಜಿ ಕಾಲದಲ್ಲಿ ಉಪಯೋಗಿಸುತ್ತಿದ್ದ ವಸ್ತುಗಳನ್ನೇ ಬಳಸಿ. ಇಲ್ಲಿನ ಹವಾಮಾನಕ್ಕೆ olive oil ತಿಂದರೆ ಪ್ರಯೋಜನ ಇಲ್ಲ. pizza/pasta/chips/biscuits ತಿನ್ನೋದು ಒಳ್ಳೆದಲ್ಲ, ಅದು ಎಷ್ಟೇ low calorie/low sugar/baked ಆಗಿರಲಿ.

ಸಾಧ್ಯವಾದಷ್ಟು ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು avoid ಮಾಡಿ.
ಸಿಹಿ ತಿಂಡಿಗಳು(ಮನೆಯಲ್ಲಿ ಮಾಡಿದವು) ಬೆಳಗ್ಗೆ ಹೊತ್ತಿನಲ್ಲಿ ತಿನ್ನಿ (ಅದಕ್ಕೆ ಸರಿಯಾಗಿ ಬೆಳಗಿನ ತಿಂಡಿಯನ್ನು ಕಡಿಮೆ ಮಾಡಿ).
ಪ್ರತಿ ದಿನ ಒಂದು ಚಮಚ ತುಪ್ಪ ಬೆಳಗ್ಗೆ ತಿಂಡಿ ಅಥವಾ ಮಧ್ಯಾಹ್ನ ಊಟದ ಜೊತೆಗೆ ತಿನ್ನಿ. 

ಇದು ನನ್ನ ದಿನಚರಿ:
6.30 am :  ಒಂದು ಹಣ್ಣು (ಸೀಬೆ/ಸೇಬು/ಸೀತಾಫಲ ಇತ್ಯಾದಿ) ಅಥವಾ ಒಂದು ಹಿಡಿ ಬಾದಾಮಿ/ಗೋಡಂಬಿ/ಒಣ ದ್ರಾಕ್ಷಿ ಇತ್ಯಾದಿ 
8.30  am (ಬೆಳಗ್ಗೆ ತಿಂಡಿ) :  ಚಪಾತಿ(3)/ದೋಸೆ(3)/ಇಡ್ಲಿ(4)/ಉಪ್ಪಿಟ್ಟು/ಅವಲಕ್ಕಿ 
10.30  : 1 ಚಿಕ್ಕ ಕ್ಯಾರಟ್/ಮುಳ್ಳು ಸೌತೆ 
12.30( ಮಧ್ಯಾಹ್ನ ಊಟ)  : ಅನ್ನ + ಸಾಂಬಾರ್/ಸಾರು + ಪಲ್ಯ + ಮಜ್ಜಿಗೆ 
3:00    : ಸ್ವಲ್ಪ ಮೊಳಕೆ ಕಾಳು + ಮೊಸರು
5.00    : ಒಂದು ಹಿಡಿ  ಕಡಲೆಬೀಜ(ಇದರ ಬದಲು ಒಂದು ಹಿಡಿ ಚುರುಮುರಿ/ಅವಲಕ್ಕಿ ಒಗ್ಗರಣೆ ಇತ್ಯಾದಿ ತಿನ್ನಬಹುದು)7.30 (ರಾತ್ರಿ
ಊಟ)   : ಅನ್ನ + ಸಾಂಬಾರ್/ಚಪಾತಿ+ ಪಲ್ಯ
9.30-10   : ಒಂದು ಲೋಟ ಹಾಲು 
ಇದರ ಜೊತೆಗೆ ನಿಯಮಿತವಾಗಿ ವ್ಯಾಯಾಮ ಮಾಡಿ(ಪ್ರತಿ ದಿನ 20-30 ನಿಮಿಷ)

ಇದನ್ನು follow ಮಾಡಿ ಒಂದು ವಾರದಲ್ಲೇ ಆರೋಗ್ಯದಲ್ಲಿ ಸುಧಾರಿಸುತ್ತದೆ. ನೀವೂ ಪುಸ್ತಕ ಓದಿ, try ಮಾಡಿ.