ಹೀಗೇ ಒಂದ್ ದಿನ ನಾನ್ ಮನೇಲಿ ಒಬ್ಳೇ ಇದ್ದೆ. ಇನ್ನೂ ಮಲಕ್ಕೊಂಡಿದ್ದೆ . ಏನೋ ಕನಸಲ್ಲಿ ಮುಳುಗೋಗಿದ್ದೆ.
ಇದ್ದಕ್ಕಿಂದ್ದಂಗೆ ಅಜ್ಜಿ ಮಾತಾಡೋದು ಕೇಳಿಸ್ತು, crystal clear ಆಗಿತ್ತು ಅಜ್ಜಿ voice!
"ಬೆಳಗಾಯ್ತು, ಇನ್ನೂ ಯಾಕೆ ಮಲಗಿದೀಯ, ಎದ್ದೇಳು" ಅಂತ ಬೈತಿದಾರೆ. ನಾನು ಮುಸುಕ್ ಹಾಕ್ಕೊಂಡ್ ಮಲಗಿದ್ದೆ, ಕಣ್ಣು ಬಿಟ್ರೆ ಕತ್ಲು.
ಅವಾಗ ಅತ್ತಿಗೆ voice ಕೂಡ ಕೇಳಿಸ್ತು!. ಅಜ್ಜಿ ಅತ್ತಿಗೆ ಏನೋ ಜಗಳ ಮಾಡ್ಕೊತಿದ್ರು.
ಇದೇನಿದು, ನಾನ್ ಮನೇಲಿ ಒಬ್ಳೇ ಅಲ್ವ ಇರೋದು ಇವರೆಲ್ಲ ಯಾವಾಗ ಬಂದ್ರು, ಏನ್ ನಡೀತಿದೆ ಅಂತಾನೆ ಅರ್ಥ ಆಗ್ಲಿಲ್ಲ.
ಏನಾದ್ರು ಆಗಲಿ ಎದ್ದೇ ನೋಡೋಣ ಅಂತ ಎದ್ರೆ ಯಾರೂ ಇಲ್ಲ. ಮತ್ತೆ ಎಚ್ರ ಆಯ್ತು!! ಮುಸುಕು ತೆಗೆದ್ ನೋಡಿದ್ರೆ full ಬೆಳಕು. ಬೆಳಗ್ಗೆ 11 ಗಂಟೆ ಆಗಿತ್ತು! ಅವಾಗ ಗೊತ್ತಾಯ್ತು, ಅಜ್ಜಿ, ಅತ್ತಿಗೆ ಬಂದಿದ್ದು ಕನಸಲ್ಲಿ ಅಂತ!
Inception movie effect, ಕನಸಿನ ಒಳಗಡೆನೂ ನಿದ್ದೆ & ಇನ್ನೊಂದ್ ಕನಸು :-)
3 comments:
kelavomme intha anubhava agutte, film nalliro paatragalu eddu namma kanasalli baruttave
ನಿಜ :-)
hmmm :)
Post a Comment