Tuesday, November 2, 2010

ಇದ್ದ ಮೂವರಲ್ಲಿ ಕದ್ದೋರ್ಯಾರು?

ಆರು ತಿಂಗಳು ಮುಂಚೆ ಗೃಹ ಪ್ರವೇಶದಲ್ಲಿ ನೀನ್ ಹಾಕ್ಕೊಂಡಿದ್ದೆ ಆಲ್ವಾ, ಅದು ಮತ್ತೆ ಇನ್ನೊಂದು necklace ಕಾಣಿಸ್ತಾ ಇಲ್ಲ ಅಂತ ಅಮ್ಮ ಫೋನ್ ಮಾಡ್ದಾಗ ತುಂಬಾ ಭಯ ಆಯ್ತು. Necklace ದೊಡ್ದಮ್ಮಂದು, ಅವತ್ತೆ ಸಂಜೆ ಅವ್ರಿಗೆ ವಾಪಸ್ ಕೊಟ್ಟೆ.
ಸರಿ ಇದಾಗಿ ಒಂದ್ ತಿಂಗಳು ಆಯ್ತು. ಅಮ್ಮ ಮನೆ ಯಾವಾಗ್ಲೂಚಿನ್ನ ಇಡ್ತಿದ್ದ cupboard, ಅದ್ರ ಪಕ್ಕ ಇದ್ದ ಇನ್ನೊಂದು cupboard ಹುಡ್ಕಿದ್ರೂ ಎಲ್ಲೂ ಸಿಗ್ಲಿಲ್ಲ. ದೊಡ್ಡಮ್ಮ ಅವ್ರ ಅಮ್ಮನ ಮನೇಲಿ ಹುಡ್ಕಿದ್ರು, ಅಲ್ಲೂ ಸಿಗ್ಲಿಲ್ಲ.
ಅಲ್ಲಿ ಇಲ್ಲಿ ಹುಡ್ಕಿ ಎಲ್ಲೂ ಕಾಣಿಸ್ತಿಲ್ಲ ಅಂತ ಗೊತ್ತಾಗೋವಾಗ ಗೃಹ ಪ್ರವೇಶ ಆಗಿ ಎಂಟು ತಿಂಗಳೇ ಕಳೆದೋಗಿತ್ತು.
ಸರಿ, ಏನಾದ್ರೂ ಆಗ್ಲಿ, ಕೊನೆ ಪ್ರಯತ್ನ ಅಂತ ಪಕ್ಕದೂರಲ್ಲಿ ತುಂಬಾ famous ಆಗಿದ್ದ ಮಂತ್ರವಾದಿ(ಜ್ಯೋತಿಷಿ ಅಂತಾನೂ ಹೇಳ್ಬಹುದು) ಹತ್ರ ಹೋದ್ರು.
ಅವರು ನಿಮ್ಮ necklace ಯಾರೋ ತೆಗೊಂಡ್ ಹೋಗಿದಾರೆ, 15 ದಿನ ಬಿಟ್ಟು ಬನ್ನಿ, ಹೇಳ್ತೇನೆ ಅಂತ ಹೇಳಿದಾಗ ಸಿಗೋದೆ ಇಲ್ಲ ಅಂತ ಅಂದುಕೊಂಡಿದ್ದವರಿಗೆ ಒಂದು ray of hope!
ಅಮ್ಮ ಮತ್ತೆ ಫೋನ್ ಮಾಡಿ ನೀನು bag pack ಮಾಡೋವಾಗ ಗೊತ್ತಾಗ್ದೆ ಬಂದಿರ್ಬಹುದು, ಇನ್ನೊಂದ್ ಸರ್ತಿ ನೋಡು ಅಂತ ಕೇಳಿದ್ರು. ಎಷ್ಟೇ ಆದರು ನಾನೇ ತಾನೇ last ಹಾಕ್ಕೊಂಡಿದ್ದು. ಸರಿ ಅಂತ ಮತ್ತೆ ಮನೆ ಎಲ್ಲ ಹುಡುಕಾಡಿದ್ರೂ ಏನೂ ಸಿಗ್ಲಿಲ್ಲ!
ಇವತ್ತು ಮತ್ತೆ ಅಮ್ಮಂದು ಫೋನ್ ಬಂದಿತ್ತು. ನೋಡಿದ್ರೆ ಅಲ್ಮೇರ ಕೆಳಗಡೆ ಇಲಿ ಒಂದು ರಾಶಿ ಮಣ್ಣು ಕೆದಕಿ ಹಾಕಿತ್ತು, ಅಲ್ಲೇ ಅದ್ರ ಕೆಳಗಡೆ ಒಂದು ಚಿಕ್ಕ box ಅಲ್ಲಿ ಅದೇ ಎರಡು necklace!
Finally, ತೆಗೊಂದ್ ಹೋಗಿದ್ದು ಯಾರು ಅಂತ ಗೊತ್ತಾಯ್ತಲ್ಲ! :-)

3 comments:

karthik said...

Supper!!! Eligalu chinnad mele invest maadana antha plan haakide. Avikku gottagide, gold rate will boom in near future :P

ರವಿಕಾಂತ ಗೋರೆ said...

Chinnada rate gaganakkeriddu iligaligoo gottaagirbeku !! :-)

ಜ್ಯೋತಿ said...

Thanks for comments :-)