Sunday, July 19, 2009

ಬೆಂಗಳೂರಲ್ಲಿ ಎರಡು ವರ್ಷ!

ಹುಟ್ಟಿದ್ದರಿಂದ ಹಿಡಿದು ಪಿ.ಯು.ಸಿ. ವರೆಗೂ ಮನೆ ಬಿಟ್ಟು ಎಲ್ಲೂ ಹೋಗದ ನಾನು, ಮೈಸೂರಲ್ಲಿ ೪, ಬೆಂಗಳೂರಲ್ಲಿ ೨ ವರ್ಷ ಕಳೆದೆ ಎಂದರೆ ನನಗೆ ಆಶ್ಚರ್ಯ! ಮೈಸೂರಲ್ಲಿ ಇಂಜಿನಿಯರಿಂಗ್ ಓದಲು ಹೋದಾಗ ಅಷ್ಟೇನೂ ಅಳುಕಿರಲಿಲ್ಲ, ಅಣ್ಣನೂ ಮೈಸೂರಲ್ಲೇ ಇದ್ದುದು ಒಂದು ಕಾರಣ! ಆದರೆ ಬೆಂಗಳೂರಿಗೆ ಬರುವಾಗ ಸ್ವಲ್ಪ ಭಯ, ಈ ಬೆಂಗಳೂರಿನ ವೇಗಕ್ಕೆ ಹೊಂದಿಕೊಳ್ಳುತ್ತೇನೋ ಇಲ್ಲವೋ ಎಂಬ ಯೋಚನೆ ಇತ್ತು.

ಬೆಂಗಳೂರಿಗೆ ಬಂದಾಗ ಕಂಪನಿ ಕಡೆಯಿಂದ ಮಾರತ್ ಹಳ್ಳಿಯಲ್ಲಿ ಅಪಾರ್ಟ್ಮೆಂಟ್ ಒಂದರಲ್ಲಿ ೧೫ ದಿನಗಳ ಕಾಲ ಉಳಿಯುವ ಅವಕಾಶ ಕೊಟ್ಟಿದ್ದರು, ಅಷ್ಟು ದಿನಗಳ ಒಳಗೆ ನಮ್ಮ ಠಿಕಾಣಿ ನಾವೇ ಹುಡುಕ ಬೇಕಾಗಿತ್ತು. ನಾನು ಹಾಗೂ ನನ್ನ ಗೆಳತಿಯರು ಬಿ.ಟಿ.ಎಂ. ಹಾಗೂ ಕೋರಮಂಗಲದಲ್ಲಿ ಪಿ.ಜಿ. ಹುಡುಕಲು ಶುರು ಮಾಡಿದೆವು. ಎರಡು ದಿನ ಹುಡುಕಾಡಿ ಅಂತೂ ಇಂತೂ ರಾಷ್ಟೀಯ ಕ್ರೀಡಾ ಗ್ರಾಮದಲ್ಲಿ(national games village: NGV) ಒಂದು ಪಿ.ಜಿ.ಯಲ್ಲಿ ಉಳಿಯುವುದಾಗಿ ನಿರ್ಧಾರ ಮಾಡಿ ಎರಡು ಮೂರು ದಿನಗಳೊಳಗೆ ಅಲ್ಲಿಗೆ ಸಾಮಾನು ಸರಂಜಾಮುಗಳನ್ನು ಸಾಗಿಸಿದೆವು! ಅಪ್ಪ ಅಮ್ಮ ಇಲ್ಲದೆ ಇಷ್ಟೆಲ್ಲಾ ಕೆಲಸ ಮಾಡಲು ಸಾಧ್ಯ ಅಂತ ನನಗೆ ಖಂಡಿತವಾಗಿಯೂ ಗೊತ್ತಿರಲಿಲ್ಲ!

ಪಿ.ಜಿ. ಯಲ್ಲಿ ಒಂದು ವರ್ಷ ಇದ್ದಾಗ ಎಂತೆಂತಾ ಹುಡುಗಿಯರ ಜೊತೆ ಇದ್ದೆ ಅಂತ ಈಗ ಯೋಚನೆ ಮಾಡಿದರೆ ಹೌದಾ, ನಾನು ಇದ್ದದ್ದು ನಿಜವಾ ಅಂತ ಈಗ ಅನಿಸುತ್ತದೆ! ಆ ಮೂರು ತಮಿಳು ಹುಡುಗಿಯರು, ಮಧ್ಯ ರಾತ್ರಿ ತನಕ ಏನೇನೋ ಹರಟೆ ಹೊಡೆಯುತ್ತಿದ್ದದ್ದು, ಆರು ಜನ ಉತ್ತರ ಭಾರತದವರು ಎಲ್ಲವರಲ್ಲೂ, ಎಲ್ಲದರಲ್ಲೂ ತಪ್ಪು ಹುಡುಕುತ್ತಿದ್ದದ್ದು, ಇನ್ನೊಂದು OCD(Obsessive–compulsive disorder) ಇದ್ದ ಹುಡುಗಿ, ಹೀಗೆ ನಮೂನೆವಾರು ಜನ! ಆದರೆ ಇವರಲ್ಲದೆ ಒಂದಷ್ಟು ಒಳ್ಳೆ ಹುಡುಗಿಯರೂ ಸ್ವಲ್ಪ ಸ್ವಲ್ಪ ಸಮಯ ಇದ್ದು ಉಳಿದವರ/ಪಿ.ಜಿ. ಮಾಲೀಕರ ಕಾಟ ತಡೆಯಲಾಗದೆ ಓಡಿ ಹೋದವರೂ ಇದ್ದರು! ಊಟ ತಿಂಡಿಯ ವಿಷಯಕ್ಕೆ ಬಂದರೆ ಒಂದು ವರ್ಷ ಹೆಚ್ಚು ಕಮ್ಮಿ ಎಲ್ಲ ದಿನ ಬೆಳಗ್ಗೆ ಪರಾಟ, ಮೂರು ಸರ್ತಿ ಅಡಿಗೆವರು ಬದಲಾದರೂ ಕೂಡ. ಊರಲ್ಲಿ, ಮೈಸೂರಲ್ಲಿ ಏನೂ ತಿನ್ನದೇ ಇದ್ದವಳು ಇಲ್ಲಿ ಏನು ಕೊಟ್ಟರೂ ತಿನ್ನುತ್ತಿದ್ದೆ! ಮೊದಲಿನ ಮಾಲೀಕರು ತಂಗಳು/ಹಳಸಿದ್ದು ತಂದು ಕೊಟ್ಟರೆ ನಂತರದಲ್ಲಿ ಒಂದು ತಮಿಳು ಹೆಂಗಸು ಬಂದು ಅಡಿಗೆ ಮಾಡುತ್ತಿದ್ದರು. ಆಮೇಲೆ ಬಂದ ಬೆಂಗಾಲಿ ಅಡಿಗೆಯಲ್ಲಿ ಯಾವುದೇ ತರಕಾರಿ ಮಾಡಿದರೂ ಆಲೂಗಡ್ಡೆ ಹಾಕದೆ ಇರುತ್ತಿರಲ್ಲಿ. ಇದೇ ನಾನು ಊದಿಕೊಳ್ಳಲು ಮುಖ್ಯ ಕಾರಣ ಇರಬೇಕು.

ಅಲ್ಲಿ ಒಂದು ವರ್ಷ ಇದ್ದು, ಇನ್ನು ಇಲ್ಲಿ ಇರಲು ಸಾಧ್ಯವಿಲ್ಲ ಅಂತ ಅನಿಸಿದ ಮೇಲೆ ೪ ಗೆಳತಿಯರ ಜೊತೆ ಕೋರಮಂಗಲದಲ್ಲಿ ಮನೆ ಬಾಡಿಗೆ ತೆಗೆದುಕೊಂಡೆವು. ಅಲ್ಲಿಂದ ಮುಂದೆ ಅಡಿಗೆಯಲ್ಲಿ ನನ್ನ ಪ್ರಯೋಗಗಳು ಶುರು, ನನ್ನ ಗೆಳತಿಯರೇ ಬಲಿ ಪಶುಗಳು!! ಅನ್ನ ಕೂಡಾ ಇಡಲು ಬಾರದ ಹುಡುಗಿ ಈಗ ಅನ್ನ/ಸಾರು/ಪಲ್ಯ ಇತ್ಯಾದಿ ಎಲ್ಲವನ್ನೂ ಚೆನ್ನಾಗಿ( ನಂಬಿಕೆ ಬಾರದಿದ್ದರೆ ನನ್ನ ಗೆಳತಿಯರನ್ನೇ ಕೇಳಿ ನೋಡಿ) ಮಾಡಲು ಕಲಿತದ್ದೂ ಆಶ್ಚರ್ಯದ ವಿಷಯ!

ಮನೆ ಬಿಟ್ಟರೆ ಶಾಲೆ, ಬಿಟ್ಟರೆ ಮನೆ, ಇಷ್ಟೇ ನನ್ನ ಪ್ರಪಂಚ ಆಗಿತ್ತು. ಸರಿಯಾಗಿ ಬಸ್ ಹಿಡಿದು ಅಜ್ಜಿ ಮನೆಗೆ ಒಬ್ಬಳೇ ಹೋಗಲೂ ಭಯ! ಅಂತಾ ಹುಡುಗಿ ಬೆಂಗಳೂರಿನಲ್ಲಿ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಓಡಾಡಲು ಕಲಿತಿದ್ದೇನೆ ಎಂದರೆ ನನ್ನ ಅಪ್ಪ ಅಮ್ಮನಿಗಂತೂ ನಂಬಲೂ ಆಗುತ್ತಿಲ್ಲ.

ಈ ಎರಡು ವರ್ಷಗಳಲ್ಲಿ ಬೆಂಗಳೂರು ತುಂಬಾ ವಿಷಯಗಳನ್ನು ಕಲಿಸಿದೆ. ಎಲ್ಲವನ್ನೂ ಕೊಟ್ಟ ಬೆಂಗಳೂರಿಗೆ ಒಂದು ತುಂಬು ಹೃದಯದ ನಮನ.

21 comments:

ಸಿಮೆಂಟು ಮರಳಿನ ಮಧ್ಯೆ said...

ನಿಜ...
ಪರಿಸ್ಥಿತಿ..
ಅನಿವಾರ್ಯತೆ ಬೇಕಾಗಿದ್ದನ್ನು ಕಲಿಸುತ್ತದೆ...
ಬೇರೆ ಭಾಷೆ.. ಸಂಸ್ಕ್ರತಿಗಳ ಹೆಣ್ಣುಮಕ್ಕಳ ಸಂಗಡ ಇರುವದು ತುಂಬಾ ಕಷ್ಟ...

ಚಂದದ ಬರಹಕ್ಕೆ ಅಭಿನಂದನೆಗಳು...

karthik said...

Oh! Good girl. Ega neenu tumba tilkondidiya. Also learnt very soon.

shivu said...

ಜ್ಯೋತಿ ಮೇಡಮ್,

ಹೊರಗಿನ ಪ್ರಪಂಚದಲ್ಲಿ ಜವಾಬ್ದಾರಿಯಿಂದ ಬದುಕಬೇಕಾದಾಗ ಪ್ರತಿಯೊಂದನ್ನು ಕಲಿಯುವುದು ಅನಿವಾರ್ಯ ಜೊತೆಗೆ ಇಷ್ಟವೋ ಕಷ್ಟವೋ ಹೊಂದಿಕೊಳ್ಳುವ ಗುಣ ತಾನೇ ತಾನಾಗಿ ಬಂದುಬಿಡುತ್ತದೆ ಅಲ್ವಾ....

ನಿಮ್ಮ ಎಲ್ಲರ ಬದುಕಿನ ಲೇಖನ ಕೂಡ...

ಧನ್ಯವಾದಗಳು.

Anonymous said...

ಪ್ರಕಾಶಣ್ಣ ಹಾಗೂ ಶಿವೂ ಅವರೇ,
ನೀವು ಹೇಳುತ್ತಿರುವುದು ನಿಜ, ಅನಿವಾರ್ಯ ಪರಿಸ್ಥಿತಿ ಬಂದಾಗ ಕಲಿಯಲೇಬೇಕು!
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ಕಾರ್ತಿಕ್,
ನಿನ್ನಂತ ಗೆಳೆಯ ಜೊತೆ ಇದ್ದುದಕ್ಕೆ ಎಲ್ಲ ಸಾಧ್ಯ ಆಯಿತು, ಆಲ್ವಾ?

Laxman (ಲಕ್ಷ್ಮಣ ಬಿರಾದಾರ) said...

ಹಾಯ ಜ್ಯೋತಿ , ಬರಹ ತುಂಬಾ ಚೆನ್ನಾಗಿದೆ. ನಿಮ್ಮ ಬೆಂಗಳೂರ ಜೀವನದ ಎರಡು ವರ್ಷದ ಅನುಭವ. ಪರಿಸ್ಥಿತಿಯ ಅನಿವಾರ್ಯತೆ ಎಲ್ಲವನ್ನು ಕಲಿಸುತ್ತೆ ಇಲ್ಲದಿದ್ದರೆ ಎಲ್ಲ ಬಿಟ್ಟು ಮನೆಗೆ ಹೋಗಬೇಕಾಗುತ್ತದೆ
ಲಕ್ಷ್ಮಣ

PaLa said...

>>ನಂಬಿಕೆ ಬಾರದಿದ್ದರೆ ನನ್ನ ಗೆಳತಿಯರನ್ನೇ ಕೇಳಿ ನೋಡಿ
ಸುಳ್ಳು ದೇವರಿಗೆ ಕಳ್ಳ ಪೂಜಾರಿ, ಅನ್ನೋದು ಕನ್ನಡದೊಂದು ಪ್ರಸಿದ್ಧ ಗಾದೆ :)

ವಿ.ರಾ.ಹೆ. said...

@ಪಾಲ, ಓತಿಕ್ಯಾತಕ್ಕೆ ಬೇಲಿ ಸಾಕ್ಷಿನೂ ಚೆನ್ನಾಗಿದೆ ಅಲ್ವಾ :)

ಜ್ಯೋತಿ, ನೀವ್ ಹೇಳಿದ್ದು ನಿಜ , ಮನೆಯಿಂದ ಹೊರಗಿದ್ದಾಗ ಅನಿವಾರ್ಯವಾದಾಗ ಎಲ್ಲವನ್ನೂ ಕಲಿಯುತ್ತೇವೆ. ನಾನು ನನ್ನ ಹಾಸ್ಟೇಲ್ ಜೀವನಕ್ಕೆ ಇದಕ್ಕೋಸ್ಕರವೇ ಕೃತಜ್ಞ. !

ಪುಟ್ಟಿಯ ಅಮ್ಮ said...

ಜ್ಯೋತಿ ಅವರೆ,
ನಮ್ಮ ಬೆಂಗಳೂರಿನಲ್ಲಿ ನಿಮ್ಮ ಜೀವನದ ಎರಡು ವರ್ಷದ ಅನುಭವದ ಈ ಲೇಖನ ಚೆನ್ನಾಗಿದೆ. ಪರಿಸ್ಥಿತಿಯ ಅನಿವಾರ್ಯತೆ ಎಲ್ಲವನ್ನು ಕಲಿಯೋ ಹಾಗೆ ಮಾಡುತ್ತೆ ಅಲ್ವಾ?

Anonymous said...

ಲಕ್ಷ್ಮಣ ಅವರೇ,
ನನ್ನ ಬ್ಲಾಗಿಗೆ ಬಂದಿದ್ದಕ್ಕೆ ಧನ್ಯವಾದಗಳು.

ಪಾಲ,
ಇರ್ಲಿ, ಇರ್ಲಿ!

ವಿಕಾಸ್,
ಹೌದು, ಹಾಸ್ಟೆಲ್ ಅನುಭವಗಳೂ ಅಷ್ಟೇ, ಎಲ್ಲರೊಂದಿಗೆ ಬೆರೆಯುವುದನ್ನು ಹೇಳಿ ಕೊಡುತ್ತದೆ.

ಪುಟ್ಟಿಯ ಅಮ್ಮ,
ಹೌದು, ಅನಿವಾರ್ಯತೆ ಎಲ್ಲವನ್ನೂ ಕಲಿಸುತ್ತೆ.

Greeshma said...

ಬಾಲೆ, ಮೈಸೂರಿನ ಕೊನೆಯ ಎರಡು ವರುಷಗಳು ನೆನಪಿದೆಯೇ?ಹಾಗೆಯೇ ನಿಮ್ಮ ಮುಂದಿನ ದಿನಗಳು ಬೆಂಗಳೂರಿನಲ್ಲಿ ಖುಷಿಕರವಾಗಲಿದೆ ! ;)

Anonymous said...

ಗ್ರೀಷ್ಮಾ,
ಮಾತೆ, ನೀವು ಬೆಂಗಳೂರಿಗೆ ಬಂದ ಮೇಲೆ ಎಲ್ಲವೂ ಸರಿಯಾಗುವ ಆಶಯ ಇದೆ! ಬಾ ಬಾ, ನಿನ್ನ ನೋಡ್ತೆ!

Guru's world said...

ಜ್ಯೋತಿ .....
ಅನಿವಾರ್ಯ ವಿದ್ದರೆ....ಬೆಂಗಳೂರಲ್ಲ.. ಎಲ್ಲೇ ಇದ್ದರು,,,ಮಾಡುವುದನ್ನು ಕಲಿಯಲೇ ಬೇಕು....೨ ವರ್ಷದ ಬೆಂಗಳೂರಿನ ಜೀವನವನ್ನು ಚೆನ್ನಾಗಿ ೨ ಡೇ ಪ್ಯಾರದಲ್ಲಿ ವಿವರಿಸಿದ್ದಿರ.....ಚೆನ್ನಾಗಿ ಇದೆ... PG ಯಾ ಅನುಭವಗಳು... ಚೆನ್ನಾಗಿ ಇದ್ದಿರಬೇಕಲ್ವ.....ಇಂಥ ಕಡೆ ಇದ್ದಾಗಲೇ ಜೀವನ ಏನು ಅಂತ ಗೊತ್ತಾಗುವುದು.....ಏನಂತಿರ ?

Wish you all the best for your future, ಇನ್ನು ಚೆನ್ನಾಗಿರುವ ಅನುಭವಗಳು ಆಗಿ ಈ ಬ್ಲಾಗಿನಲ್ಲಿ ಬರೆಯುವಂತಾಗಲಿ....... :-)
ಗುರು

ಹರೀಶ ಮಾಂಬಾಡಿ said...

Good experience :)

niroopane chennaagide

Prabhuraj Moogi said...

ಅಬ್ಬ ಬಹಳ ದಿನಗಳ ನಂತರ ಮತ್ತೆ ಬರೆದಿದ್ದೀರಿ, ಖುಷಿಯಾಯ್ತು.. ಬೆಂಗಳೂರ್ರು ಹೊಟ್ಟೆ ಬಟ್ಟೆ ಕೊಟ್ಟಿದ್ದಲ್ಲದೆ, ಜೀವನಕ್ಕೆ ಕೆಲ ಒಳ್ಳೆಯ ಪಾಠಗಳನ್ನೂ ಕಲಿಸಿದೆ... ನಿಮ್ಮ ಹಾಗೆ ನಮಗೂ ಬಾಡಿಗೆ ಮನೆಯ ಅನುಭವಗಳು ಇವೆ... :)

Anonymous said...

ಗುರು ಅವರೇ,
ನೀವು ಹೇಳುತ್ತಿರುವುದು ನಿಜ. PG ಅನುಭವ ಬರೆದರೆ ಅದೇ ದೊಡ್ಡ ಕಥೆ ಆಗುತ್ತದೆ!

ಹರೀಶ ಅವರೇ,
ಧನ್ಯವಾದಗಳು.

ಪ್ರಭು ಅವರೇ,
ಬಾಡಿಗೆ ಮನೆ ಹುಡುಕಿದ್ದೇ ಒಂದು ಕತೆ ಆಗತ್ತೆ ಅಲ್ವ? ಹೀಗೆ ಬರ್ತಾ ಇರಿ.

gowtham ghatke said...

:) Neen ashtenu pukli irlilla munche ansitte... mysore-alli sumaru jor-e idde ;)

ಜಲನಯನ said...

ಅರೆ..ಜ್ಯೋತಿ..ನೀವು ಕೋರಮಂಗಲದಲ್ಲೇ ಇದ್ದಿದ್ದು ಅಂತ ಗೊತ್ತಿದ್ದಿದ್ರೆ..ಹಾಜರ್ ಆಗ್ಬಿಡ್ತಿದ್ನಲ್ಲಾ...ನಿಮ್ಮ ಪ್ರಯೋಗಗಳಿಗೆ ಸಬ್ಜೆಕ್ಟ್ ಆಗಿ....
ನಿಜ ಕಣ್ರಿ...ನಮ್ಮ ಅಡುಗೆ ನಾವು ಮಾಡ್ಕೊಂಡ್ರೆ ಅಲ್ಲಿಗೆ ನಮ್ಮ ಕಾಲ ಮೇಲೆ ನಾವು ನಿಲ್ಲೋಕೆ ಶಕ್ತರು ಅಂತ ಭರವಸೆ ಮೂಡುತ್ತೆ...ಇದು ಗಂಡಸರಿಗೂ ಅನ್ವಯಿಸುತ್ತೆ..ಯಾಕಂದ್ರೆ...ಹೆಂಡ್ತಿ..ಒಂದ್ಪಕ್ಷ ..ಘಟನುಘತಿಯಾದ್ರೆ....??!! ಅವನೇ ಅವಳಿಗೆ ಮಾಡಿಹಾಕಬೇಕಾಗಬಹುದಲ್ಲವೇ...??? ಒಳ್ಲೆ ಲೇಖನ

Venky said...

chennagide chennagide... baraha, mattu kannada... :-)

madhu said...

nimma varnane balu chenda. namma Bengalurige matte matte banni, hosa vishaya kalitukolli. Namma Bengaluru yellarannu baramaadikolluttade, ide idara vishesha. Proud to be a Bengalurean :)

Anonymous said...

Jyoti,

G.S.Shivarudrappanavare helidaare, hondikeyembudu eshtu kashtavo ee naalku dinada badukinali anta.

jotegaarara jotegaartiyara sannatana, tammadallada kelasadalli talehaakuvike, vaiyuktika sambandagaledegina ateeva kutoohala.....

ivella irritate maaduttave. aadre, nimma olletanavanna bereyavaru misuse maadikolladante echhara vahisi. yaavude anjike illade sari anisade irodanna helibidi.

n another thing.
thank you for adding my blog link.

Keep writing.

Ganesh

Anonymous said...

Dear Jyothi Nanna Blog Nannadu Nimma blogs nodide tuma channagide ....nimma mail id heli plz chandru.bhatkal@gmail.com ge mail madi k na