Thursday, April 9, 2009

ಬಲೇ, ಚಾ ಪರ್ಕ!

ಈರ್ ಬಲೆ ಚಾ ಪಾರ್ಕ ತೂತಾರ? ಸೋಕುತ ನಾಟಕ.

ಇದು ದೇವದಾಸ್ ಕಾಪಿಕಾಡ್ ಅವರು ನಿರ್ದೇಶಿರುವ ತುಳು ನಾಟಕ.
ಹೌದು, ಇದೊಂದು ತುಳು ನಾಟಕ, ಬರೀ ನಾಟಕ ಅಂತ ಹೇಳಿದರೆ ಸ್ವಲ್ಪ ಕಡಿಮೆಯೇ, ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವ ಹಾಸ್ಯ ನಾಟಕ ಅಂತ ಹೇಳಿದರೆ ಸರಿ.

ಒಂದೆರಡು ಪಾತ್ರಗಳು:
ದಾಮು: ಅ.ದಾ.ಮ. (ಅಣ್ಣು, ದಾಮು, ಮಹಾಲಕ್ಷ್ಮಿ) ಕೆಫೆಯ ಮಾಲೀಕ
ಅಣ್ಣು: ದಾಮುವಿನ ಮಗ

ಒಂದಷ್ಟು ಪ್ರಸಂಗಗಳು:
ದಾಮು ಒಂದು ದಿನ ವಕೀಲರ ಮನೆಗೆ ಹೋಗಿರುತ್ತಾನೆ, ಅಣ್ಣು ಆಗ ಅವನನ್ನೇ ಹಿಂಬಾಲಿಸಿಕೊಂಡು ಬಂದು ದಾಮುವಿನಲ್ಲಿ ಕೇಳುವ ಪ್ರಶ್ನೆಗಳು-
ಗೋಳಿಬಜೆ ಮಲ್ಲ ಮಲ್ಪೊಡೆ?
ಕೊಡೆದ ಸಜ್ಜಿಗೆ ಇನಿತ ಸಜ್ಜಿಗೆಡು ಬೆರೆಸೋಡೇ??

ದಾಮು ಈ ರೀತಿ ಹೊರಗಡೆ ಎಲ್ಲಾದರೂ ಹೋದರೆ ಅಣ್ಣು ಹೋಟೆಲ್ ನೋಡಿಕೊಳ್ಳುವುದು.
ಅಣ್ಣು ಅಂದುಕೊಳ್ಳುವುದು ಒತ್ತಾರೆಡ್ತು ಒಂಜಿ ಗಿರಾಕಿಲಾ ಇಜ್ಜಿ, ಒಂಜಿ ಪರ್ನ್ದು ತಿಂಕ.

ದಾಮು ಬಂದ ಮೇಲೆ ಅವರ ನಡುವೆ ನಡೆಯುವ ಸಂಭಾಷಣೆ
ದಾಮು: ಏತು ಪರ್ನ್ದು ಪೋಂಡು?
ಅಣ್ಣು: ಪದಿಮೂಜಿ ಅಮ್ಮೆರೆ..
ದಾಮು: ಈ ಏತು ತಿಂತ?
ಅಣ್ಣು: ಒಂಜಿಯೇ ಅಮ್ಮೆರೆ
ದಾಮು: ಒಂಜಿಯ ರಡ್ಡಾ?
ಅಣ್ಣು: ಒಂಜಿಯೇ ಅಮ್ಮೆರೆ
ದಾಮು: ಒಂಜಿಯಾ ರಡ್ಡಾ?
ಅಣ್ಣು: ಒಂಜಿಯೇ ಅಮ್ಮೆರೆ, ಕಡೆ ಕಪ್ಪಾಯಿನ
ದಾಮು: ಕಡೆ ಕಪ್ಪಾಯಿನ ತಿನೋಡ್ಚಿ, ನಿಕ್ಕು ಏತು ಸರ್ತಿ ಪಣೋಡು, ಆಯೇನ ಪೂರಾ ಗಿರಾಕಿನಕಳೆಗು ಜಾಮ್ ಮಣ್ತದ ಕೊರ್ಕ!!

ಇನ್ನು ದಾಮುವಿಗೆ ಸಿಟ್ಟು ಬಂದರೆ,
ಅಣ್ಣು: ಒಂಜಿ ನೀರ್ ಗಮ್ಮಿ, ಪೇರ್ ಗಮ್ಮಿ, ಪೂರ ಗಮ್ಮಿ!!!
ದಾಮು: ಎಂಚಿನ?
ಅಣ್ಣು: ಚಾ ಅಮ್ಮೆರೆ
ದಾಮು:ಏರೆಗ್?
ಅಣ್ಣು: ಈರೆಗೆ ಅಮ್ಮೆರೆ..

ಇದೆಲ್ಲ ಓದಿದರೆ boring ಅನಿಸಬಹುದು, ಆದರೆ ಕೇಳಬೇಕು, ಆವಾಗ ಅದರ ಪೂರ್ತಿ ಮಜಾ ಬರುವುದು.

ಹಾಗೆ ಇನ್ನೊದು ನಾಟಕ ಪುದಾರ್ ದೀತಿಜಿ. ಇದೂ ಅಷ್ಟೇ, ಸೂಪರ್ ನಾಟಕ. ಬಿಡುವಾದರೆ ಕೇಳಿ ನೋಡಿ.
ಯಾಕೋ ನಾಟಕದ ಮಾತುಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಲು ಇಷ್ಟ ಆಗುತ್ತಿಲ್ಲ. ಹೀಗೆ ಇರಲಿ! ಇನ್ನೊಂದು ದಿನ ನೋಡೋಣ.

10 comments:

ಸಂದೀಪ್ ಕಾಮತ್ said...

ಜ್ಯೋತಿ ನಾಟಕದ ಮಾತುಗಳನ್ನು ಕನ್ನಡಕ್ಕೆ ಅನುವಾದ ಮಾಡಿದಲ್ಲಿ ಏನೂ ಉಪಯೋಗ ಇಲ್ಲ! ಈ ಮಾತುಗಳು ಬರೀ ತುಳುವಿನಲ್ಲಷ್ಟೇ ಖುಷಿ ಕೊಡೋದು!

ನನಗೂ ತುಳು ನಾಟಕಗಳಂದ್ರೆ ತುಂಬಾ ಇಷ್ಟ.ನನ್ನ ಬಳಿ ಎಲ್ಲಾ ನಾಟಕಗಳ ಸಿ.ಡಿಗಳಿವೆ.ಯಾವಾಗಲೂ ಬೋರ್ ಆದ್ರೆ ನೋಡ್ತೀನಿ.

ಬಲೆ ಚಾ ಪರ್ಕದಲ್ಲಿ ಒಂದು ನಾಟಕದ ರಿಹರ್ಸಲ್ ಸೀನ್ ಇದೆ ಅಲ್ವಾ? ದುಶ್ಯಂತ ಶಕುಂತಲ ನಾಟಕದ್ದಿರಬೇಕು ಬಹುಶ ,ಅದೂ ಸಕ್ಕತ್ ಆಗಿದೆ ಅಲ್ವಾ?

ರವಿಕಾಂತ ಗೋರೆ said...

ಬಹುಶ ಇದೊಂದೇ ಅಲ್ಲ , ಇಂತಹ ಬಹಳಷ್ಟು ನಾಟಕಗಳನ್ನ ನೋಡಿ, ಕೇಳಿ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದೇನೆ... ಬಲೆ ಚಾ ಪರ್ಕ, ಪುದರ್ ದೀತಿಜಿ, ಬಾಬು, ಬಾಲಕೃಷ್ಣ , ಮಾಮುಗೊಂಜಿ ಮಾಮಿ, ಈರ್ ದೂರ, ಗಂಟೆತಾಂಡ್ ..... ಹೀಗೆ ನಾಟಕಗಳ ಪಟ್ಟಿ ದೊಡ್ಡದಿದೆ... ಆದರೆ ಈಗ ಮೂವರು ದಿಗ್ಗಜರಾದ ದೇವದಾಸ್ ಕಾಪಿಕಾಡ್ , ನವೀನ ಪಡೀಲ್ , ವಿಜಯ್ ಕೊಡಿಯಾಳಬೈಲ್ ಎಲ್ಲ ತಮ್ಮ ತಮ್ಮದೇ ಗುಂಪು ಕಟ್ಟಿ ಬೇರೆಯಾದದ್ದು ವಿಷಾದನೀಯ...

PaLa said...

ಎಂಚಿನ ಮಾರೆರೆ, ಎಂಕ್ ತುಳು ಬರ್ಪಿಜ್ಜಿ

Anonymous said...

ಸಂದೀಪ್ ಅವರೇ,
ಹೌದು, ಆ ಸೀನ್ ಅಂತೂ ತುಂಬಾ ಚೆನ್ನಾಗಿದೆ.
ಬೆಂಗಳೂರಲ್ಲಿ ನಾಟಕದ ಸಿ.ಡಿ. ಎಲ್ಲಿ ಸಿಗಬಹುದು?

ರವಿಕಾಂತ್ ಅವರೇ,
ನೀವು ಹೇಳುವುದೂ ನಿಜ. ನಾಟಕಗಳು ಒಂದಕಿಂತ ಒಂದು ಚೆನ್ನಾಗಿವೆ. ಆದರೆ ನಾನು ಮೊದಲಿಗೆ ಕೇಳಿದ್ದು ಬಲೆ ಚಾ ಪರ್ಕ. ಅದಕ್ಕೆ ಅದು ಚೆನ್ನಾಗಿ ನೆನಪಿದೆ :-)

ಪಾಲ ಅವರೇ,
ಈರೆಗ್ ತುಳು ಬರ್ಪುಜ್ಜ?
ಇನ್ನೊದು ದಿನ ಕನ್ನಡಕ್ಕೆ ಅನುವಾದ ಮಾಡಿ ಬರೆಯುತ್ತೇನೆ.ಆದರೆ ಕನ್ನಡದಲ್ಲಿ ಕೇಳಲು ಅಷ್ಟು ಚೆನ್ನಾಗಿರುವುದಿಲ್ಲ.

ಸಿಮೆಂಟು ಮರಳಿನ ಮಧ್ಯೆ said...

ಜ್ಯೋತಿಯವರೆ....
ನನಗೆ ತುಳು ಭಾಷೆ ಬರುವದಿಲ್ಲ....

ಬೇಸರ ಆಗ್ತಿದೆ....

ಶಿವಪ್ರಕಾಶ್ said...

ನಂಗೆ ತುಳು ಬರೋದಿಲ್ಲ ... :(

Anonymous said...

ಪ್ರಕಾಶಣ್ಣ, ಶಿವಪ್ರಕಾಶ್,
ತುಳು ಬರದಿದ್ದರೆ ಬೇಜಾರು ಮಾಡಿಕೊಳ್ಳಬೇಡಿ. ಇನ್ನೊದು ದಿನ ಕನ್ನಡಕ್ಕೆ ಅನುವಾದ ಮಾಡಿ ಬರೆಯುತ್ತೇನೆ.
ಆದರೆ ಈಗ ಬಲೆ ಚಾ ಪರ್ಕ(ಬನ್ನಿ, ಚಾ ಕುಡಿಯೋಣ)!

Guru's world said...

ಜ್ಯೋತಿ,,,
ನನಗು ತುಳು ಬರೋಲ್ಲ..... ಕನ್ನಡದಲ್ಲಿ ಅನುವಾದಿಸಿದ್ದಾರೆ ಅರ್ಥ ಇರ್ತಾ ಇತ್ತು...
ಗುರು

Anonymous said...

ತುಳು ನಾಟಕದ ಬಗ್ಗೆ ತುಂಬಾ ಕೇಳಿದ್ದರೂ ಒಮ್ಮೆಯೂ ನೋಡಲಾಗಿಲ್ಲ, ಮತ್ತು ಕೇಳಲಾಗಿಲ್ಲ.

ಎಲ್ಲಾದರೂ ನೆಟ್ಟಿನಲ್ಲಿ ಸಿಗುವ ಸಾಧ್ಯತೆ ಇದೆಯಾ?

Anonymous said...

ಬಲೇ ಚಾ ಪರ್ಕ ನಾಟಕದ ಒಂದೆರಡು ಭಾಗಗಳು youtubeನಲ್ಲಿವೆ.

http://www.youtube.com/watch?v=3yMtubzhdRY

http://www.youtube.com/watch?v=zdhMm2S_5rs

http://www.youtube.com/watch?v=9NzUMxKMtMc

http://www.youtube.com/watch?v=WNd-DUuDDAE

ಇದಲ್ಲದೆ ಬರೀ audio files ಸಿಗಬಹುದು.