Monday, April 20, 2009

ಕಸವ್ ಗೆ ಯಾರು ಸರಿಯಾದ ವಕೀಲರು?

ಅಂಜಲಿ ವಾಘಮೊರೆಯವರನ್ನು ಕಸವ್ ನ ಅಧಿಕೃತ ವಕೀಲರನ್ನಾಗಿ ನೇಮಿಸಿದಾಗಲೂ ಅದು breaking news(ಒಡೆದು ಹಾಕುವ ಸುದ್ದಿ ಅಂತ ಹೇಳಬಹುದಾ?) ಆಗಿತ್ತು. ಹಾಗೆ ಅವರನ್ನು ತೆಗೆದು ಹಾಕಿದಾಗಲೂ ಮತ್ತೆ breaking news. ಮಧ್ಯಾಹ್ನ ಆಫೀಸಿನಲ್ಲಿ ಊಟ ಮಾದುತ್ತಿದ್ದಗೆ ಈ ಸುದ್ದಿಯನ್ನು ಟಿ.ವಿ. ಯಲ್ಲಿ ನೋಡಿ ಆಶ್ಚರ್ಯವಾಯಿತು. ಆಗ ನಾವು ಊಟದ ಮಧ್ಯೆ ಯಾರು ಕಸವ್ ಗೆ ತಕ್ಕ lawyer ಅಂತ ಮಾತನಾಡಲು ಶುರು ಮಾಡಿದೆವು.

ಚಿದಂಬರಂ ಆಗಬಹುದಾ? ಇವರು ನನಗೆ ಗೃಹ ಮಂತ್ರಿ ಸ್ಥಾನ ಸಾಕಾಯಿತು. I want to go back to my previous profession ಅಂತ ಏನಾದರೂ ಹೇಳಬಹುದಾ ಅಂತ ಯೋಚನೆ ಮಾಡಿದೆವು.

ಹೀಗೆ ಇನ್ನೂ ಅನೇಕರ ಬಗ್ಗೆ ಮಾತಾಡಿದರೂ ಕೊನೆಗೆ ಆಯ್ಕೆ ಆಗಿದ್ದು ಒಬ್ಬರೇ, ಅವರೇ ನಮ್ಮ ನಿಮ್ಮೆಲ್ಲರ ಮೆಚ್ಚಿನ ಟಿ.ಎನ್.ಸೀತಾರಂ. ಹೇಗೆ ಅಂತ ಯೋಚನೆ ಮಾಡ್ತಿದೀರಾ?

First point:
ಅಲ್ಲಿ ಗುಂಡುಗಳು ಹಾರಿದ್ದು ಎ.ಕೆ.47 ಇಂದ ಅಲ್ಲವೇ ಅಲ್ಲ. ಅದು ಬರೀ ಪೋಲೀಸರ ಗನ್ನುಗಳಿಂದ ಹೊರ ಬಂದ ಗುಂಡುಗಳು. ಇದಕ್ಕೆ ಪಕ್ಕಾ proof ಅಂತ ಗುಂಡು ಎಷ್ಟು ದೂರದಿಂದ ಹಾರಿತು, ಯಾವ ಗನ್ನು, ಇತ್ಯಾದಿ ಇತ್ಯಾದಿ ಮಾಹಿತಿ ಕೊಟ್ಟು ಕೊನೆಗೆ "ಬಸವರಾಜು, ಇದನ್ನ mark ಮಾಡಪ್ಪ" ಅಂತ ಹೇಳ್ತಾರೆ.

Next point:
ಇನ್ನು ಕಸವ್ ಎ.ಕೆ.47 ಹಿಡಿದುಕೊಂಡಿರುವ ವಿಡಿಯೋ ಚಿತ್ರಣ ಇದೆ. ಇದು ಹೇಗೆ ಸಾಧ್ಯ ಅಂತೀರಾ? ಪಾಪ ಕಸವ್ ಕೂಡ ಒತ್ತೆಯಾಳೇ, ಉಗ್ರವಾದಿ ಬೀಡಿ ಸೇದಕ್ಕೆ ಹೋದಾಗ ತನ್ನ ಕೈಯಲ್ಲಿದ್ದ ಬಂದೂಕನ್ನ ಪಾಪದ ಕಸವ್ ಕೈಯಲ್ಲಿ ಹಿಡಿಸಿದ್ದಾನೆ, ಅಷ್ಟೇ. ಅದನ್ನೇ ಈ ಮಾಧ್ಯಮಗಳು ದೊಡ್ಡದು ಮಾಡಿ...

Final point:
ಇಷ್ಟೂ ಸಾಲದಿದ್ದರೆ ಕಸವ್ ಮೊಬೈಲಿನ detailed bill ತರಿಸಿ ಅದರಲ್ಲಿ ಅವನು ಗುಂಡು ಹಾರುತ್ತಿದ್ದ ಸಮಯದಲ್ಲಿ ಸರಿಯಾಗಿ ಬೇರೆ ಯಾರದ್ದೋ ಜೊತೆ ಮಾತನಾಡುತ್ತಿದ್ದ, ಅವನು ಹೇಗೆ ಗುಂಡು ಹಾರಿಸುತ್ತಾನೆ ಅಂತ final point ಹೊಡೆದು, ಜೊತೆಗೆ ಇನ್ನೊಂದೆರಡು ವಚನಾನೋ, ಮಂಕುತಿಮ್ಮನ ಕಗ್ಗದ ಸಾಲುಗಳನ್ನೂ ಹೇಳಿ ಕೇಸು ಗೆಲ್ಲಿಸಿ ಕೊಡುತ್ತಿದ್ದರು.

ಇಷ್ಟೆಲ್ಲಾ ತಮಾಷೆಗೆ ಬರೆದೆ. ಸ್ವಲ್ಪ ಗಂಭೀರವಾಗಿ ಯೋಚನೆ ಮಾಡಿದರೆ ಕಸವ್ ವಿರುಧ್ಧ ಇಷ್ಟೆಲ್ಲಾ ಸಾಕ್ಷಿ ಇದ್ದರೂ ಅವನಿಗೆ ಯಾಕೆ ಶಿಕ್ಷೆ ಕೊಡುತ್ತಿಲ್ಲ? ಅವನ ಮೇಲಿನ ಕೇಸು ವರ್ಷಗಟ್ಟಲೆ ಹೀಗೆ ನಡೆಯುತ್ತಿರುತ್ತದೆ. ಅದೇ ಅವನ ದೇಶದಲ್ಲಾಗಿದ್ದರೆ ಇಷ್ಟು ಸಮಯ ಅವನು ಜೀವಂತವಾಗಿರಲು ಸಾಧ್ಯವಿರಲಿಲ್ಲ. ನಮ್ಮ ಕಾನೂನು ವ್ಯವಸ್ಥೆ ಯಾಕೆ ಇಷ್ಟೊಂದು ನಿಧಾನ? ಈ ಪ್ರಶ್ನೆಗಳಿಗೆ ಉತ್ತರವೇ ಇಲ್ಲ ಎಂದೆನಿಸುತ್ತದೆ.

ನೋಡೋಣ ಅವನಿಗೆ ಇನ್ನೂ ಎಷ್ಟು ಜನ ವಕೀಲರು ಸಿಗುತ್ತಾರೆ, ಎಷ್ಟು ವರ್ಷ ಈ ಕೇಸು ನಡೆಯುತ್ತದೆ, ಕೊನೆಗೆ ಅವನು ಬಿಡುಗಡೆಯಾದರೂ ಆಶ್ಚರ್ಯವಿಲ್ಲ.

17 comments:

Rajesh Manjunath - ರಾಜೇಶ್ ಮಂಜುನಾಥ್ said...

ಜ್ಯೋತಿ,
ಸಕತ್ತಾಗಿದೆ ಬರಹ... ಸಿಕ್ಕಾಪಟ್ಟೆ ನಗು ಬಂತು, ಮನೆಗೆ ಹೋದಾಗ ಈ ಧಾರವಾಹಿ ನೋಡಿದ್ದೆ.
ಯಾಕೋ ವ್ಯವಸ್ಥೆಯ ಬಗ್ಗೆ ಏನು ಹೇಳಲು ಮನಸ್ಸಿಲ್ಲ...ಇದು ಹೀಗೆ ಏನೋ ಅಂತ ಅನ್ನಿಸಿ ಬಿಟ್ಟಿದೆ.

ಏ ಜೆ ಜಾವೀದ್ said...

ಜ್ಯೊತಿ ಮೇಡಮ್,
ಕಲ್ಪನೆ ಬಹಳ ಚೆನ್ನಾಗಿದೆ. ಈ ಬರಹದ ಹಾಸ್ಯ ಭಾಗ ಖುಷಿ ಕೊಡ್ತು. ಇನ್ನು ಉಳಿದದ್ದು.....Law is an Ass. ಅಂದ ಹಾಗೆ ಈಗ ಬರುತ್ತಿರುವ Breaking News ಗಳೆಲ್ಲಾ ಅಕ್ಷರಶಃ ಒಡಕಿನ ಸುದ್ದಿಗಳೇ.ಹಾಗಾಗಿ ನಾನಂತು ಈಗೀಗ ಟಿ ವಿ ಯನ್ನು ಆನ್ ಮಾಡುತ್ತಲೇ ಇಲ್ಲ; ಎಲ್ಲಿ ಟಿ ವಿಯೇ ಒಡೆದು ಹೋಗುತ್ತೆ ಅನ್ನೊ ಭಯದಿಂದ. ನಾನು ಟಿ ವಿ ನೋಡುವುದು 9.30 ಕ್ಕೆ ಮಾತ್ರ. ಅದೂ ಮುಕ್ತಾ...ಮುಕ್ತಾ ನೋಡಲು!

PARAANJAPE K.N. said...

ಜ್ಯೋತಿಯವರೇ
ಕಸಬ್ ವಕೀಲರಾಗಿ ಸೀತಾರಾಂ ಗೆ ವಕಾಲತ್ ಕೊಡಲು ಮು೦ದಾಗಿರುವ ನೀವು, ಅವರು ಹೇಗೆ ಕೇಸಿಗೆ ಹೊಸ ತಿರುವು ಕೊಡಬಲ್ಲರೆ೦ಬುದನ್ನು ಹಾಸ್ಯಪೂರ್ವಕ ತೋರಿಸಿಕೊತ್ತಿದ್ದಿರಿ. ಚೆನ್ನಾಗಿದೆ. ನನ್ನದು ಒ೦ದು ಬ್ಲಾಗಿದೆ. ಪುರುಸೊತ್ತಿದ್ದರೆ ಬ೦ದು ಹೋಗಿ.
www.nirpars.blogspot.com

shivu said...

ಜ್ಯೋತಿ ಮೇಡಮ್,

ಕಸಬ್ ಬಗ್ಗೆ ತಮಾಷೆಗೆ ಬರೆದ ಲೇಖನ ಇಷ್ಟವಾಯಿತು..

ಸೀತಾರಾಂ ಪ್ರಸಂಗವನ್ನು ಚೆನ್ನಾಗಿ ಹೇಳಿದ್ದೀರಿ...ನಗುವಿನ ಜೊತೆಗೆ ನಿಮ್ಮ ವಾದ ಇಷ್ಟವಾಯಿತು...[ನೀವು ಮುಂದೆ ಲಾಯರಾಗುವ ಆರ್ಹತೆ ಇರಬಹುದು]

ಈಗ ವಿಚಾರಕ್ಕೆ ಬಂದರೆ ನಿಮ್ಮ ಅಭಿಪ್ರಾಯವನ್ನು ನಾನು ಒಪ್ಪುತ್ತೇನೆ...ಅವನಿಗೇಕೆ ಇನ್ನೂ ಶಿಕ್ಷೆಯಾಗುತ್ತಿಲ್ಲ....

ಇವತ್ತಿನ ಪೇಪರಿನಲ್ಲಿ ಅವನಿಗೆ ಏನು ಅರ್ಥವಾಗುತ್ತಿಲ್ಲವೆಂದು ಬಂದಿದೆ...ಹೀಗೆ ಏನೇನು ಕಾರಣಕ್ಕೆ ..ಯಾವಾಗ ಶಿಕ್ಷೆಯಾಗುತ್ತೋ ...ದೇವರೇ ಬಲ್ಲ...

ಸಂದೀಪ್ ಕಾಮತ್ said...

ಸೀತಾರಾಂ ಈಗಾಗಲೇ ಎಂಟ್ರಿ ಊಂಡ್ ಎಕ್ಸಿಟ್ ಊಂಡ್ ಬಗ್ಗೆ ಅಧ್ಯಯನ ನಡೆಸಿದ್ದಾರೆ ಹಾಗಾಗಿ ಅವರೇ ಸೂಕ್ತ.

ಆದ್ರೆ ಅವರು ಒಂದು ಕಂಡಿಷನ್ ಹಾಕ್ತಾರೆ ಅದೇನಂದ್ರೆ ಅವರ ಜೊತೆ ತ್ಯಾಗರಾಜ್/ಬಸವಾರಾಜ್ ಇರಲೇಬೇಕು .

ಶಿವಪ್ರಕಾಶ್ said...

ಜ್ಯೋತಿ ಅವರೇ,
ಅವರ ದೇಶದಲ್ಲಿ ಹೇಗೋ ಗೊತ್ತಿಲ್ಲ, ಆದರೆ ನಮ್ಮ ದೇಶದಲ್ಲಿ ಮಾತ್ರ ಕೇಸ್ ಬೇಗ ಮುಗಿಯಲ್ಲ...
ಅದು, ಇದು ಅಂತೆಲ್ಲ ಹೇಳಿ ದಿನ ತಳ್ತಾ ಇರ್ತಾರೆ...
ಸಣ್ಣ ಪುಟ್ಟ ಕೇಸಿಗೆ ೫-೬ ವರ್ಷ ಮಾಡ್ತಾರೆ... ಇನ್ನು ಕಸವ್ ಕೇಸು ಅಂದ್ರೆ ಕೇಳಬೇಕೆ... ?
ಕಸವ್ ಬಿಡಿ, ಅಫ್ಜಲ್ ಕತೆ ಏನಾಯ್ತು... ಅಲ್ವಾ...?
ಲೇಖನಕ್ಕೆ ಒಳ್ಳೆ ಕಾಮಿಡಿ ಟಚ್ ಕೊಟ್ಟು ಚನ್ನಾಗಿ ಬರೆದಿದ್ದೀರಿ..
ಧನ್ಯವಾದಗಳು...

ರವಿಕಾಂತ ಗೋರೆ said...

ಜ್ಯೋತಿ ಮೇಡಂ...
ಎಂತದು ಮಾರಾಯ್ರೆ ಇದು... ನೀವೇನಾದ್ರು ವಕೀಲರಾಗಿದ್ರೆ ನಿಮಗೆ ಒಂದು ಅವಕಾಶ ಖಂಡಿತ... :-)
ಮತ್ತೆ ಈ ಚುನಾವಣಾ ಸಮಯದಲ್ಲಿ ಕಸಬ್ ಗೆ ಶಿಕ್ಷೆ ಕೊಡಿ ಅಂತ ಹೇಳ್ತಿರಲ್ಲ... ಅಲ್ಲ ಮಾರಾಯ್ರೆ ಈಗ ಶಿಕ್ಷೆ ಕೊಟ್ರೆ ಸೋನಿಯಾ ತಾಯಿಗೆ (:-)) ವೋಟು ಎಲ್ಲಿಂದ ಬರ್ತದೆ??? ವೋಟಿಗಾಗಿ ಬೇಟೆ ನಡೀತಾ ಇರ್ಬೇಕಾದ್ರೆ (ಇಲ್ಲಾಂದ್ರೂ ಅಷ್ಟೆ.. ಆಫ್ಜ್ಯಲ್ ಗುರೂ ಗೆ ಇನ್ನೂ ಶಿಕ್ಷೆ ಆಗಿಲ್ಲ) ದೇಶದ ಬಗ್ಗೆ ಚಿಂತಿಸುವ ಸಮಯ ಯಾರಿಗಿದೆ ಹೇಳಿ... ಅಂತೂ ಒಂದು ಸೂಕ್ಷ್ಮ ವಾದ ವಿಚಾರ ಎತ್ತಿ ನನ್ನ ರಕ್ತ ಕುದಿಯುವಂತೆ ಮಾಡಿದ್ರಿ (ಸಿಟ್ಟು ಉಗ್ರವಾದಿಗಳ ಮೇಲೆ, ಅವರನ್ನು ಪೋಷಿಸುವ ದೇಶಗಳ ಮೇಲೆ)... ಕಸಬ್ ನಂಥ ಉಗ್ರವಾದಿಗೆ ಮರಣದಂಡನೆ ಕೊಟ್ರೂ ಸಾಲದು...!!!

ಸಾಗರದಾಚೆಯ ಇಂಚರ said...

ಜ್ಯೋತಿ, ನೀವೇ ಯಾಕೆ ಆಗಬಾರದು , ಒಂದು ಕೈ ನೋಡಿ ,

gowtham ghatke said...

jyothi madam , nimma blogu tumba ishta aaytu, aadre bejaraagi yen baribeku antha gottagutilla.Very good topic very neatly written in a comic way., but the sadest thing is the present situation in the country.Dont worry , We will change the system as far as possible.
This is one of the best blogs I have read.. Keep going.. :)

PaLa said...

:) :(

Greeshma said...

ಹ್ಹಾ ಹ್ಹಾ! ಲಾಯ್ಕಾಯ್ದು :) ಆ mindry video ನೆನಪಾತು.
System change ಮಾಡ್ಲೆ ಪ್ರಯತ್ನ ಮಾಡುವ. ವೋಟು ಹಾಕುವ :)

ಶರಶ್ಚಂದ್ರ ಕಲ್ಮನೆ said...

ಈ ಪೋಸ್ಟಿನ ತಲೆ ಬರಹ ನೋಡಿ ಏನೋ ಸೀರಿಯಸ್ ವಿಷಯ ಇರಬೇಕು ಅಂದುಕೊಂಡೆ.. ಹ್ಹೆ ಹ್ಹೆ. ಚನ್ನಾಗಿದೆ ನಿಮ್ಮ ಬರಹ... ಹಾಗು ನಿಮ್ಮ ಕಲ್ಪನೆ :)

ಶರಶ್ಚಂದ್ರ ಕಲ್ಮನೆ

Prabhuraj Moogi said...

ಕಸಬ ಬಾಲಾಪರಾಧಿ ಅಂತ ಸಾಬೀತು ಮಾಡಲು ಪ್ರಯತ್ನಿಸುತ್ತಿದ್ದಾರೆ, ಹಾಗಾದರೆ ಬರೀ ಒಂದು ವರ್ಷ್ ಜೈಲು ಶಿಕ್ಷ್ತೆಯಾಗಬಾಹುದಂತೆ!!! ಖೋಟ್ಟೀ ಜನ್ಮಪತ್ರ ಪಡೆಯಲು ಹಾಗೂ ಮೇಡಿಕಲ ಪರೀಕ್ಷೆಗಳ ತಿದ್ದಲು ಬಹಳ ತೊಂದ್ರೆಯಾಗಲಿಕ್ಕಿಲ್ಲ ಅವರಿಗೆ, ಥೂ ಇದೂ ಒಂದು ನ್ಯಾಯಾನಾ, ವ್ಯವಸ್ಥೆನಾ... ಯಾಕೊ A Wednesday ಫಿಲ್ಮನ ನಾಸಿರುದ್ದೀನ ಶಾ ಡೈಲಾಗುಗಳು ನೆನಪಾದವು...

ಬಾಲು said...

jyothi avare,

nanu vyavaste bagge enu helolla, desha da bagge, vyavaste bagge chinthe madabaradu antha andu kondiruve.

amele adu seetharam alla... CSP alva? (seetharam alli CSP aagi sikkkapatte case gelthare, so CSP would be the rite choice.)

e deshada durantha galu dina kaledanthe raajakeeya banna balkondu thappe alla anno level ge hogutte!! adu nam durantha

any how.. nim baraha bahala chennagide. nananthu sikkapatte nakku bitte!!

Anonymous said...

ಜ್ಯೋತಿಯವರೇ,

ಚೆನ್ನಾಗಿದೆ. ಧಾರಾವಾಹಿಯ ಮಿತಿಗಳನ್ನು ಕಾನೂನಿನ ವಾಸ್ತವವನ್ನು ಚೆನ್ನಾಗಿ ಹೇಳಿದ್ದೀರಿ..

ವನಿತಾ said...

ಅರ್ಥ ಗರ್ಭಿತ ಲೇಖನ..
ನನ್ನ ಬ್ಲಾಗ್ ಗೆ ಬರೆದ ಕಾಮೆಂಟ್ ಮೂಲಕ ಇಲ್ಲಿ ಬಂದೆ, ಧನ್ಯವಾದಗಳು ಜ್ಯೋತಿ.

ಜಲನಯನ said...

ಜ್ಯೋತಿಯವರೇ..
ನೀವು ತುಂಬಾ hard ರೀ..ಅಲ್ಲ ಪಾಪದ ಟಿ.ಎನ್.ಎಸ್. ರಿಗೆ ಹೊಸ ಪಾತ್ರವನ್ನೇ ಸೃಷ್ಠಿ ಮಾಡಿಬಿಟ್ಟಿರಿ
ಒಂದಂತೂ ನಿಜ ಹಲವರಿಗೆ ಡಿ,.ವಿ.ಜಿ. ಕಗ್ಗಗಳ ಪರಿಚಯ ಮಾಡ್ಕೊಡ್ತಿದ್ದಾರೆ ಸೀತಾರಾಂ ಅವರು, ಸಾಹಿತಿಗಳು ಹೆಮ್ಮೆಪಡುವ ವಿಷಯ
ಅದಕ್ಕೆ ಇರಬೇಕು, ಡಾ.ಬ.ರಾ. ನ್ಯಾಯಾಧೀಶರಾಗಿ ಪಾತ್ರ ತುಂಬಿದ್ದರೂ ನವಿರಾಗಿ ಹಸನ್ಮುಖಿ ಭಾವನೆ ತೋರಿಸ್ತಾರೆ ಅಂತಹ ಸಂದರ್ಭ ಬಂದಾಗಲೆಲ್ಲಾ..
ಮಾನವ ಸಂಸ್ಕೃತಿಗೇ ಕಳಂಕಪ್ರಾಯಿ, ನಿರ್ವಿವಾದ ಕಂಟಕಿಗಳನ್ನು encounter ಅಸ್ತ್ರಕ್ಕೆ ಒಳಪಡಿಸುವುದೇ ಸೂಕ್ತ...ಆದ್ರೆ ಈ ಅಸ್ತ್ರ ಭಸ್ಮಾಸುರರಿಗೇ ಸಿಗುತ್ತೆ ಅನ್ನೋದೇ ವಿಷಾದದ ವಿಷಯ