ಅಬ್ಬಾ...
ಆ ರಾತ್ರಿಯನ್ನು ನೆನೆಸಿಕೊಂಡರೆ.. ಈಗಲೂ ಮೈ ಜುಮ್ಮೆನ್ನುತ್ತದೆ. ಆಗ ನಾನು ಮೈಸೂರಿನಲ್ಲಿದ್ದೆ. ಕಾಲೇಜು ಹಾಸ್ಟೆಲಿನಲ್ಲಿ ನಮ್ಮ ರೂಮಿನಲ್ಲಿ ಮೂರು ಜನ. ಯಾವಾಗಲೂ ಕಿರಿಚಾಡೋದು, ಜಗಳ ಮಾಡೋದು, ರಾತ್ರಿ ರಾತ್ರಿಯವೆರೆಗೆ ಸಿನಿಮಾ ನೋಡೋದು ಇದೆಲ್ಲ ಇದ್ದಿದ್ದೇ.
ಅವತ್ತು ಮಳೆ ಜೋರಾಗಿ ಬರುತ್ತಿತ್ತು, ಮಿಂಚು ಗುಡುಗು ಬೇರೆ. ನಮ್ಮ ಹಾಸ್ಟೆಲಿನಲ್ಲಿ earthing ಸರಿಯಾಗಿಲ್ಲದ ಕಾರಣ ಮಿಂಚು/ಗುಡುಗು ಬಂದ ತಕ್ಷಣ ಎಲ್ಲಾ computer ಹಾಗೂ ಹಾಲಿನಲ್ಲಿದ್ದ TV ಗೆ ವಿಶ್ರಾಂತಿ ಸಿಗುತ್ತದೆ. Internals ಹತ್ತಿರದಲ್ಲಿ ಇಲ್ಲದ ಕಾರಣ ಯಾರೂ ಓದುತ್ತಿರಲಿಲ್ಲ. ಬೇರೆ ಮಾಡಲು ಏನೂ ಇಲ್ಲದ ಕಾರಣ ಎಲ್ಲರೂ ಬೇಗ ಮಲಗಿದ್ದೆವು.
ಸರಿ, ನಿದ್ದೆಯೇನೋ ಬಂತು. ಆಮೇಲೆ ನಡೆದದ್ದು, ಅಬ್ಬಾ...
ಎಲ್ಲರೂ ಗಾಢ ನಿದ್ದೆಯಲ್ಲಿದ್ದರು. ಕಿಟಕಿ ತೆಗೆದಿಟ್ಟರೆ ತಂಪು ಗಾಳಿ ಬರುತ್ತದೆ ಎಂದು ಒಂದು ಕಿಟಕಿ ತೆಗೆದೆ ಮಲಗಿದ್ದೆವು. ಜೋರಾಗಿ ಗುಡುಗಿದಾಗ ನನಗೆ ಎಚ್ಚರವಾಯಿತು. ಅವರಿಬ್ಬರಿಗೂ ಎಚ್ಚರವಾಯಿತೋ ಇಲ್ಲವೋ ನನಗಂತೂ ಗೊತ್ತಿಲ್ಲ. ಆಗ ಸಮಯ ನೋಡಿದರೆ ಸುಮಾರು 2.30. ಇನ್ನೇನು ನಿದ್ದೆ ಬರಬೇಕು ಮತ್ತೊಂದು ಗುಡುಗು. ಮತ್ತೂ ಒಂದಷ್ಟು ಹೊತ್ತು ಸುಮ್ಮನೆ ಹೊರಳಾಡುತ್ತಿದ್ದೆ. ಇಂಥಾ ಸಮಯದಲ್ಲಿ ಯಾವಾಗಲೂ ಕರೆಂಟ್ ಕೈ ಕೊಡುತ್ತದೆ, ಅವತ್ತೂ ಕೂಡ ಹಾಗೇ ಆಯಿತು.
ಆಮೇಲೆ ಇನ್ನೇನೋ ವಿಚಿತ್ರವಾದ ಶಬ್ದ ಕೇಳಲು ಶುರುವಾಯಿತು. ಇಂಥಾ ಶಬ್ದಗಳು ನನಗೆ ಮಾತ್ರವೇ ಯಾಕೆ ಕೇಳುತ್ತವೆ, ಅದೂ ಗೊತ್ತಿಲ್ಲ. ಯಾರೋ ಹತ್ತಿರದಲ್ಲೇ ನಡೆದಾಡಿದಂತೆ, ಯಾವುದೋ iron rod ಎಳೆದಾಡಿದಂತೆ ಕೇಳಿಸುತ್ತಿತ್ತು. ಮಧ್ಯ ಮಧ್ಯದಲ್ಲಿ ಜೋರಾಗಿ ಗುಡುಗು ಬೇರೆ.
ಮುಸುಕು ತೆಗೆದು, ರೂಮ್ ಮೇಟ್ ಗಳನ್ನು ಕೂಗಲೂ ಭಯ. ಇನ್ನೇನು ಮಾಡುವುದು, ದೇವರನ್ನೇ ನೆನೆಯುತ್ತಾ ಹಾಗೆ ಮಲಗಿದ್ದೆ. ಅಷ್ಟು ತಂಪಾದ ಗಾಳಿ ಬೀಸುತ್ತಿದ್ದರೂ ನಾನು ಬೆವರಿ ಮುದ್ದೆಯಾಗಿದ್ದೆ. ನಿಧಾನವಾಗಿ ಸದ್ದು ಕೇಳುವುದು ಕಡಿಮೆಯಾಯಿತು. ಆದರೂ ರಾತ್ರಿಯೆಲ್ಲಾ ನಿದ್ದೆ ಬರಲೇ ಇಲ್ಲ. ಬೆಳಗ್ಗೆ 6 ಗಂಟೆ ಹೊತ್ತಿಗೆ ಹಾಗೂ ಹೀಗೂ ನಿದ್ದೆ ಬಂತು.
ಆದರೂ ೮ ಗಂಟೆಯೊಳಗೆ ಏಳಲೇ ಬೇಕು. ಕಾಲೇಜಿಗೆ ಹೋಗುವುದು ಬೇಡವೇ. ಬೆಳಗ್ಗೆ 7.30 ಹಾಗೆ ಎದ್ದಾಯಿತು. ಆದರೂ ಯಾರ ಹತ್ತಿರವೂ ಏನೂ ಹೇಳಲಿಲ್ಲ. ಎಲ್ಲಿ ಎಲ್ಲವೂ ನನ್ನ ಕಲ್ಪನೆಯೋ/ಕನಸೋ ಎಂಬ ಭಯ.
ಆಮೇಲೆ ಸ್ನಾನ ಎಲ್ಲಾ ಆದ ಮೇಲೆ ತಿಂಡಿ ತಿನ್ನಲು mess ಕಡೆಗೆ ಹೋದೆವು. ದಿನವೂ ಅಲ್ಲಿ ಹೋಗಿ ತಿಂಡಿ ತಿನ್ನುವ ಮೊದಲು ಕೈ/ತಟ್ಟೆ ತೊಳೆಯುವುದು ಮೊದಲಿನಿಂದಲೇ ಬಂದಿರುವ ಒಳ್ಳೆಯ ಅಭ್ಯಾಸ. ಅಲ್ಲಿಗೆ ಹೋಗಿ ನೋಡಿದರೆ ಅಲ್ಲಿನ steel tapಗಳು ಮಾಯ!
ಆಗ ಗೊತ್ತಾಯಿತು ರಾತ್ರಿ ನಡೆದದ್ದು ಏನು ಅಂತ!!!!
Mess ಇನ್ನೂ ಸಂಪೂರ್ಣವಾಗಿ construction ಆಗಿರಲಿಲ್ಲ. ಅದರ ಕಿಟಕಿಯನ್ನು ಯಾರು ಬೇಕಾದರೂ ಹೊರಗಿನಿಂದ ತೆಗೆಯಬಹುದಿತ್ತು! ನಮ್ಮ ರೂಮಿನ ಕಿಟಕಿಯಿಂದ messನಲ್ಲಿ ಏನಾಗುತ್ತಿದೆ ಎನ್ನುವುದನ್ನು ಆರಾಮಾಗಿ ನೋಡಬಹುದು. ಯಾರೋ ಕಳ್ಳರು ರಾತ್ರಿಯೇ ಬಂದು ಎಲ್ಲಾ tagಗಳನ್ನೂ ಕದ್ದಿದ್ದರು! ರೂಮಿನ ಕಿಟಕಿ ತೆರೆದೇ ಇದ್ದ ಕಾರಣ ಶಬ್ದ ಜೋರಾಗಿ ಕೇಳಿದೆ!
ಛೆ, ನಾನು ಸ್ವಲ್ಪ ಧೈರ್ಯ ಮಾಡಿದ್ದರೆ ಒಂದು ಕಳ್ಳತನವನ್ನು ತಪ್ಪಿಸಬಹುದಿತ್ತು. ಆದರೂ ನನಗಿರುವ ಒಂದೇ ಒಂದು ಅನುಮಾನ, ನಾವೆಲ್ಲಾ ಮಲಗಿದ್ದರೂ ನಮ್ಮ ಹಾಸ್ಟೆಲಿಗೆ ಗಸ್ತು ತಿರುಗುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಗೆ ಈ ಶಬ್ದ ಯಾಕೆ ಕೇಳಲಿಲ್ಲ?
12 comments:
ಜ್ಯೋತಿ..
ನಮ್ಮನ್ನೂ ನಿಮ್ಮ ಹಾಸ್ಟೆಲ್ ದಿನಗಳಿಗೆ ಕರೆದೊಯ್ದು..
ನಿಮ್ಮ ಅನುಭವ ನಮ್ಮದು ಅನ್ನಿಸಿಬಿಟ್ರಿ...
ಕಾಯುವವರೆ ಕಳ್ಳರಾಗುವ ಸಾಧ್ಯತೆ ಹೆಚ್ಚು...
ಚಂದದ ಬರವಣಿಗೆ...
ಅಭಿನಂದನೆಗಳು...
ಜ್ಯೋತಿ,
ಆಗಿದ್ದು ಆಗಿ ಹೋಗಿದೆ, ಬೇಸರಿಸ ಬೇಡಿ... ಇನ್ನೂ ಮುಂದೆ ಪ್ರತಿ ವಿಚಾರದಲ್ಲೂ ತುಸು ಧೈರ್ಯ ತೋರಿಸಿ. ಬರಹದ ವಿವರಣಾ ಶೈಲಿ ತುಂಬಾ ಚೆನ್ನಾಗಿದೆ.
ಪಾಪ ನೀನು! ಪುಣ್ಯ ಅರ್ಧ ರಾತ್ರಿಲಿ, ಕರೆಂಟ್ ಇಲ್ಲದೆ ಇಪ್ಪ ಹೊತ್ತಿಲ್ಲಿ, ಎನ್ನ ಎಬ್ಸಿದಿಲ್ಲೆ!
ಆದರೂ, ರಜ್ಜ ಧೈರ್ಯ ಮಾಡಿ, ಕಿಟಕಿ ಇಂದ ನೋಡಿತ್ತಿದರೆ, ಉದಿಯಪ್ಪಗ ದೊಡ್ಡ star ಆವುತ್ತಿದ್ದೆ ;)
ಛೆ ! ಏನ್ರೀ ನೀವು... ಸ್ವಲ್ಪ ಧೈರ್ಯ ಮಾಡಿ ಎಳೋದ್ ತಾನೆ... ಪುಣ್ಯಕ್ಕೆ ನಿಮ್ಮ ಹಾಸ್ಟೆಲ್ ನ ಸೆಕ್ಯುರಿಟಿ ಗಾರ್ಡ್ ನನ್ನೇ ಕದ್ದುಕೊಂಡು ಹೋಗಿಲ್ಲ ಆ ಕಳ್ಳರು :-) ...
ಪ್ರಕಾಶಣ್ಣ,
ಧನ್ಯವಾದಗಳು :-)
ನೀವು ಹೇಳುವ ಹಾಗೆ ಕಾಯುವವರು ಕಳ್ಳರಾಗುವ ಸಾಧ್ಯತೆ ಇದೆ.
ಆದರೆ ನಮ್ಮ ಸೆಕ್ಯೂರಿಟಿ ಗಾರ್ಡ್ ಹೆಚ್ಚಿನಂಶ ನನ್ನ ಹಾಗೆ ಹೆದರಿಕೊಂಡು ಕುಳಿತಿದ್ದರೋ ಏನೋ!
ರಾಜೇಶ್ ಅವರೇ,
ಧನ್ಯವಾದಗಳು. ಹೌದು, ಇನ್ನು ಮುಂದೆ ಆದಷ್ಟು ಧೈರ್ಯ ಮಾಡುತ್ತೇನೆ. :-)
ಗ್ರೀಷ್ಮ,
ಅಪ್ಪೆ, ಆನು ದೊಡ್ಡ star ಅಪ್ಪ chance miss ಆತು.
ನಿನ್ನ eLsiddare ನೀನು star ಆವ್ತಿತ್ತೆ!
ರವಿಕಾಂತ್ ಗೋರೆ ಅವರೇ,
ಹೌದಲ್ಲ! ಸೆಕ್ಯೂರಿಟಿ ಗಾರ್ಡ್ ಅನ್ನಾ ಕದ್ದಿದ್ದಾರೆ! ನಮ್ಮ ಹಾಸ್ಟೆಲಿನವರ ಹತ್ತಿರ ಹೀಗೆ ಹೇಳಿದರೆ ತುಂಬಾ ಖುಷಿಯಾಗುತ್ತಾರೆ!
ಸ್ವಲ್ಪ ಧೈರ್ಯ ಮಾಡಿದ್ದರೆ.. ಛೆ....
ಜ್ಯೋತಿ ಮೇಡಮ್,
ಕೆಲವೊಮ್ಮೆ ನಿಜವಾಗಿ ನಡೆಯುವುದು ಕನಸಿನಂತೆ ಕಾಣುತ್ತದೆ. ನೀವು ಸ್ವಲ್ಪ ದೈರ್ಯವಹಿಸಿದ್ದರೆ ದೊಡ್ಡ ಸಾಹಸ ನಿಮ್ಮ ಗೆಳತಿಯರ ಜೊತೆ ಮಾಡಬಹುದಿತ್ತು....ಮತ್ತೆ ಆಗುವ ಅನಾಹುತ ತಪ್ಪಿಸಬಹುದಿತ್ತು...
ಮತ್ತೆ ನನ್ನ ಬ್ಲಾಗಿನ ಹೊಸ ಲೇಖನಕ್ಕೆ ನೀವು ಬರೆದ ಕಾಮೆಂಟಿನಿಂದಾಗಿ ಒಂದು ಉತ್ತಮ ಚರ್ಚೆಗೆ ಅವಕಾಶವಾಯಿತು....ಅದಕ್ಕೆ ಧನ್ಯವಾದಗಳು..
ಶಿವೂ ಅವರೇ,
ನೀವು ಹೇಳುವುದು ನಿಜ.
ನಾನೂ ಹಲವು ಬಾರಿ ಇದೇ ರೀತಿ ಅಂದುಕೊಂಡಿದ್ದೇನೆ.
ಆದರೆ ಆ ಸಂದರ್ಭದಲ್ಲಿ ಧೈರ್ಯ ತಂದುಕೊಳ್ಳುವುದು ಸ್ವಲ್ಪ ಕಷ್ಟ!
ಉತ್ತಮ ಚರ್ಚೆಯಾದರೂ ನನ್ನ ಅಭಿಪ್ರಾಯವನ್ನು ಕೇಳಿ ಹಲವರ ಮನಸ್ಸಿಗೆ ನೋವಾಯಿತು, ಇನ್ನು ಮೇಲೆ ನನ್ನ ಅಭಿಪ್ರಾಯ ವ್ಯಕ್ತ ಪಡಿಸುವಾಗ ಬೇರೆಯವರ ಬಗ್ಗೆಯೂ ಸ್ವಲ್ಪ ಯೋಚಿಸುತ್ತೇನೆ.
ನೀವು ಎಲ್ಲರನ್ನೂ ಪ್ರಾಮಾಣಿಕವಾಗಿ ಪ್ರೋತ್ಸಾಹಿಸುತ್ತಿರುವುದ್ದಕ್ಕಾಗಿ ಧನ್ಯವಾದಗಳು :-)
Dear Jyothi,
Do you c HoRRoR movies. :-) :-)
Saamaanyavaagi thrill anta girls hostel hudugeeru horror cinema nodi amele kattalaadamele coridor nalli odadodakkoo hedarkoltaare. adakke kelde. :-)
Thank you for visiting my blog. I have included ur blog in my blog list. keep visiting my blog.
Ganesh K.
ಚೆನ್ನಾಗಿದೆ. ಬರಹ.ಹೀಗೆ ಬರೆಯುತ್ತ ಇರಿ
ಹಾಯ್ ಜ್ಯೋತಿ,
ನಿಮ್ಮ ಬರಹ , ಅದರ ಶೈಲಿ ಚೆನ್ನಾಗಿ ಇದೆ.. ಒಬ್ಬರೇ ಇರಬೇಕಾದ್ರೆ ಹೆದರಿಕೊಳ್ಳೋದು ಸಹಜ, ಆದರೆ ನೀವು ಜೋತೆನಲ್ಲಿ ಇರಬೇಕಾದರೆ,, ಅಸ್ಟೊಂದು ಹೆದರಿಕೊಳ್ಳುವ ಅಗತ್ಯ ಇರಲಿಲ್ಲ...
ಚೆನ್ನಾಗಿ ಇದೆ ಬರಹ,, ಹೀಗೆ ಬರಯುತ್ತಿರಿ,
ಒಮ್ಮೆ ನನ್ನ ಬ್ಲಾಗಿಗೂ ಬಂದು ಹೋಗಿ.....
ಗುರು
punchline ಅವರೇ,
ನಾನು horror movies ನೋಡುವುದನ್ನು ಆದಷ್ಟು avoid ಮಾಡುತ್ತೇನೆ!
ಹೌದು, ಒಂದಷ್ಟು ಹುಡುಗಿಯರು ಹಾಗೆ ಇರುತ್ತಾರೆ, ಆದರೆ ಕೆಲವೊಂದು ಹುಡುಗರೂ ಅದೇ ರೀತಿ ಇರುವುದು ಅಷ್ಟೇ ನಿಜ ಅಲ್ವ?
ಮಾಲಾ ಅವರೇ,
ಧನ್ಯವಾದಗಳು. ಹೀಗೆ ಬರುತ್ತಾ ಇರಿ.
ಗುರು ಅವರೇ,
ಧನ್ಯವಾದಗಳು. :-)
ಹೌದು, roommates ಇರುವಾಗ ಭಯ ಆಗಬಾರದಿತ್ತು. ಆದರೆ ಅವರ ಕಡೆಯಿಂದ ಯಾವುದೇ reaction ಇರಲಿಲ್ಲ. ಅದಕ್ಕೆ ಭಯ ಆಯಿತು.
ಪಾಪ ಸೆಕ್ಯೂರಿಟಿಗೆ ನಿದ್ದೆ ಬರದೆ ಇರೋ ವಯಸ್ಸು ಮುಗಿದಿತ್ತು ಅನಿಸುತ್ತೆ... ತುಂಬ ಚೆನ್ನಾಗಿದೆ ಮುಂದುವರಿಸಿ
Post a Comment