Thursday, March 5, 2009

ಬೆಕ್ಕಿಗೇನು ಚಿಂತೆ?



ವರುಣ್ ತೆಗೆದ ಫೋಟೊ, ಅವನ ಅನುಮತಿ ಇಲ್ಲದೆ ಹಾಕುತ್ತಿದ್ದೇನೆ!
ಈ ಬೆಕ್ಕಿಗೆ ಏನು ಆಲೋಚನೆ ಇರಬಹುದು ಎನ್ನುವುದೇ ನನಗೆ ಚಿಂತೆಯಾಗಿದೆ!!
ಇದಕ್ಕೆ ಹಾಲಿಗೆ ಕೊರತೆ ಉಂಟಾಗಿರಬಹುದಾ, ಇಲ್ಲಾ ಮನೆಯೊಡತಿ ಹಾಕುವ ಅನ್ನ ಕಡಿಮೆ ಮಾಡಿರಬಹುದಾ?
ಮನೆಯಲ್ಲಿ ಇಲಿಗಳ ಸಂಖ್ಯೆ ಕಡಿಮೆಯಾಗಿರಬಹುದಾ ಅಥವಾ ಮನೆಯೊಡೆಯ ಇನ್ನೊಂದು ಬೆಕ್ಕನ್ನು ಸಾಕಲು ತಂದಿರಬಹುದಾ?
ಇದಕ್ಕೇನು ಆರ್ಥಿಕ ಹಿಂಜರಿತದಿಂದಾಗ ಮನೆ ನಡೆಸಲು ಕಷ್ಟವಾಗಿದೆಯಾ?
ಮನೆಯವರ ಮೇಲೆ ಸಿಟ್ಟು ಮಾಡಿ ಟೂ ಬಿಟ್ಟಿರಬಹುದಾ?
ಬೆಳಗ್ಗೆ ಹೊರಗಡೆ ಹೋದ ಮನೆಯವರಿಗಾಗಿ ದಾರಿ ಕಾಯುತ್ತಿರಬಹುದಾ?
ಆಟ ಆಡಲು ಹೋದ ಮಕ್ಕಳನ್ನು(ಮರಿ ಬೆಕ್ಕುಗಳು) ದೂರದಿಂದಲೇ ನೋಡುತ್ತಿರಬಹುದಾ?
ಇಲ್ಲಾ ಬಾಲ ಹೇಳಿದ ಹಾಗೆ ಸೂರ್ಯ ನಮಸ್ಕಾರ ಮಾಡುತ್ತಿರಬಹುದಾ?
ಇಂದ್ರ ಪದವಿಗಾಗಿ ತಪಸ್ಸು ಮಾಡುತ್ತಿದೆಯಾ? ಯೋಗ, ಧ್ಯಾನದಲ್ಲಿ ನಿರತವಾಗಿದೆಯಾ?
ಏನಾಗಿರಬಹುದು?



ಏನಾದರೆ ನಿನಗೇನು?
ನಿನ್ನ ಕೆಲಸ ನೀನು ನೋಡಿಕೋ, ನನ್ನ ತಂಟೆಗೆ ಬರಬೇಡ ಅನ್ನುವ ಹಾಗೆ ನೋಡುತ್ತಿದೆ ಮುಂದಿನ ಫೋಟೋದಲ್ಲಿ!

15 comments:

shivu said...

ಜ್ಯೋತಿ ಮೇಡಮ್,

ಬೆಕ್ಕಿಗೆ ಅದರ ಪಾಡಿಗೆ ಅದು ಇರಲು ಬಿಡುವುದು ಬಿಟ್ಟು ನೀವ್ಯಾಕೆ ಇಷ್ಟೋಂದು ತಲೆಕೆಡಿಸಿಕೊಂಡಿದ್ದೀರಿ....
ಕೊನೆಗೆ ಇದರಲ್ಲೂ ಪಾಸಿಟೀವ್ ಆಗಿ ನೋಡಿದರೆ ತಲೆಕೆಡಿಸಿಕೊಳ್ಳುವುದರಲ್ಲೂ ಇಷ್ಟೊಂದು ವೈರೈಟಿ ಇದೆ ಅಂತ ತಿಳಿಯುವುದು....
ಫೋಟೊ ಚೆನ್ನಾಗಿದೆ....ಥ್ಯಾಂಕ್ಸ್...

ಮಲ್ಲಿಕಾರ್ಜುನ.ಡಿ.ಜಿ. said...

ಮೇಡಂ,
ಫೋಟೋ ಚೆನ್ನಾಗಿದೆ.
"ನನ್ನ ಹಾಡು ನನ್ನದು...ನನ್ನ ರಾಗ ನನ್ನದು...
ನನ್ನ ಪಾಡು ನನ್ನದು..."
ಅದು ಏನು ಯೋಚಿಸುತ್ತಿರಬಹುದು ಎಂದು ಯೋಚಿಸುವುದೇ ...?
ಆಲೋಚನೆಗಳು ಎಲ್ಲೆಲ್ಲೋ ಹರಿದಾಡುತ್ತವೆ.

ಸಿಮೆಂಟು ಮರಳಿನ ಮಧ್ಯೆ said...

ಜ್ಯೋತಿಯವರೆ...

ನಿಮ್ಮ ಲೇಖನ ಓದಿದಮೇಲೆ..

ನಮ್ಮನೆ ಅಂಗಳದಲ್ಲಿ ಬೆಕ್ಕೊಂದನ್ನು ನೋಡಿ ..
ನಿಮ್ಮಂತೆಯೇ ವಿಚಾರ ಬಂತು..
ನಗುವೂ ಬಂತು..

ಫೋಟೊ ಚೆನ್ನಾಗಿದೆ..

ಸಂದೀಪ್ ಕಾಮತ್ said...

ಪಕ್ಕದಲ್ಲಿ ಖಾಲಿ ಸೈಟ್ ಇದೆ ಮನೆ ಕಟ್ಟಿದ್ರೆ ಹೆಂಗೆ ಅಂತ ಯೋಚಿಸ್ತಾ ಇರಬಹುದು.
ಅದೂ ಇಲ್ಲಾಂದ್ರೆ ರಿಸೆಶನ್ ಬಂತಲ್ವಾ ಏನ್ ಮಾಡೋದು ಅಂತ ಯೋಚಿಸ್ತಾ ಇರಬಹುದು..

bhavanalahari9 said...

ಜ್ಯೋತಿ ಅಕ್ಕ
ಪಾಪ ಆ ಬೆಕ್ಕನ್ನು ಯೋಚನೆ ಮಾಡಲು ಬಿಡಿ.ನಾಳೆಯ ಬಜೆಟನ್ನು ಆ ಬೆಕ್ಕು ತಾನೆ ಮಂಡಿಸಬೇಕು. ಅದಿಕ್ಕೆ ಅದರ ಪಾಡಿಗೆ ಅದನ್ನ ಬಿಟ್ಟು ಬಿಡಿ ಅದರ ಬಗ್ಗೆ ಯೋಚನೆ ಮಾಡಿ ನೀವು ತಲೆ ಕೆಡಿಸಿಕೋಳ್ಳ ಬೇಡಿ.

ಜ್ಯೋತಿ said...

ಶಿವೂ ಅವರೇ,
ಸುಮ್ಮನೆ ಫೋಟೋ ನೋಡಿದಾಗ ನನ್ನ ತಲೆಯಲ್ಲಿ ಓಡಾಡಿದ್ದೆಲ್ಲವನ್ನೂ ಬರೆದಿದ್ದೇನೆ ಅಷ್ಟೇ!

ಮಲ್ಲಿಕಾರ್ಜುನ್ ಅವರೇ,
ಹೌದಲ್ಲಾ! ಬೆಕ್ಕಿಗೂ ಬ್ಲಾಗ್ ಬರೆದು ತುಂಬಾ ದಿನ ಆಯಿತು, ಈ ಪರಿಸರದ ಮೇಲೆ ಬರೆಯೋಣಾ ಅಂತ ಅನಿಸಿದ್ದರೂ ಇರಬಹುದು!

ಜ್ಯೋತಿ said...

ಪ್ರಕಾಶಣ್ಣ,
ಬೆಕ್ಕು ಸರ್ವ ವ್ಯಾಪಿ!

ಸಂದೀಪ್,
ಮನೆ ಕಟ್ಟುವ ಯೋಚನೆ! ಆಹಾ! ಎಂತಾ ಯೋಚನೆ ನಿಮ್ಮದು :-)

ಜ್ಯೋತಿ said...

ಭಾವನಾ,
ಈಗ ಇರುವ ಮಂತ್ರಿಗಳಿಗಿಂತ ಬೆಕ್ಕೇ ಉತ್ತಮ ಬಜೆಟ್ ಮಂಡಿಸಬಹುದು, ಆಲ್ವಾ?

Greeshma said...

ಹ್ಹಾ.. ಹ್ಹಾ!
ಪಾಪ, ತಿಂಬಲೆ ಎಂತಾರು ಸಿಕ್ಕುತ್ತಾ ಹೇಳಿ ಆಚೆ ಈಚೆ ನೋಡ್ತಾ ಇದ್ದಿಕ್ಕು .
ಎರಡನೆ ಫೋಟೋ ಲಿ.... ನೀ ಎಂತಾರು ಕೊಡ್ತೆಯ ಹೇಳಿ ನೋಡ್ತಾ ಇದ್ದಿಕ್ಕು ;)

ಜ್ಯೋತಿ said...

ಗ್ರೀಷ್ಮ,
ಆದಿಕ್ಕು, ಇಂದು ಹೊಸಾ ಯೋಚನೆ ಬಂದದ್ದು.. ಮಗಳ ಮದುವೆಗೆ ವರದಕ್ಷಿಣೆ ಹೇಂಗೆ ಹೊಂದಿಸುದು ಹೇಳಿ ಯೋಚನೆ ಮಾಡ್ತಾ ಇಕ್ಕು!

Rajesh Manjunath - ರಾಜೇಶ್ ಮಂಜುನಾಥ್ said...

ಜ್ಯೋತಿ,
ಫೋಟೋ ಮತ್ತು ಜೊತೆಗಿನ ನವಿರಾದ ವಿಶ್ಲೇಷಣೆ ಸೊಗಸಾಗಿವೆ.

Prabhuraj Moogi said...

ಒಂದು ಬೆಕ್ಕಿನ ಚಿತ್ರದ ಹಿಂದೂ ಎಷ್ಟೆಲ್ಲ ಯೊಚನೆಗಳಿವೆಯಲ್ಲ... ಅವವರವರ ಭಾವಕೆ ತಕ್ಕ ಹಾಗೆ ಯೊಚನೆಗಳು ಹರಿದಾಡಿವೆ...

gore said...

Huh... jyothiyavrige aata...Bekkige praanasankata.... Aalochane chennagide.. :-)

ಸುಧೇಶ್ ಶೆಟ್ಟಿ said...

ಚೆನ್ನಾಗಿದೆ ಬೆಕ್ಕಿನ ಸ್ವಗತ:)

ಪ್ರಸಾದ್ ಟಿ ಎಂ said...

ಕೂತಿರೋ ಸೀನ್ ನೋಡಿದ್ರೆ ಯಾಕೋ ಲವ್ ಫೀಲಿಂಗ್ ಅಲ್ಲಿ ಇರೋಹಾಗಿದೆ