Sunday, February 15, 2009

ಹಾಡು ಹಳೆಯದಾದರೇನು..

ಹಳೆಯ ಹಾಡುಗಳನ್ನು ಕೇಳಿದರೆ ಹಾಡುಗಾರರಿಂದ ಹೆಚ್ಚು ನಟ/ನಟಿಯರೇ ಕಣ್ಣ ಮುಂದೆ ಕಾಣಿಸುತ್ತಿದ್ದರು.
ಒಂದಷ್ಟು ಉದಾಹರಣಗಳು:
"ಮೇರೇ ನೈನಾ ಸಾವನ್.." ಅಂತ ಹಾಡು ಕೇಳಿದಾಗ ಮೊದಲು ರಾಜೇಶ್ ಖನ್ನಾ, ನಂತರ ಕಿಶೋರ್ ಕುಮಾರ್ ತಾನೇ ಕಾಣಿಸುವುದು.
"ಕಿ ಪಘ್ ಘುಂಗರೂ ಬಾಂದ್, ಮೀರಾ ನಾಚೀ ಥೀ.." ಅಂತ ಹಾಡಿದ್ದು ಅದೇ ಕಿಶೋರ್ ಕುಮಾರ್, ಆದರೆ ಕಣ್ಣಿಗೆ ಕಾಣಿಸುವುದು ಅಮಿತಾಭ್ ಬಚ್ಚನ್ ಅಲ್ವಾ?
"ತಾರೀಫ್ ಕರೂಂ ಕ್ಯಾ ಉಸ್ ಕೀ.." ಅಂದರೆ ಮೊಹಮ್ಮದ್ ರಫೀಗಿಂತ ಹೆಚ್ಚು ಶಮ್ಮೀ ಕಪೂರ್ ಕಾಣಿಸುತ್ತಾರೆ ಅಲ್ವಾ?
"ಕಭೀ ಕಭೀ ಮೇರೇ ದಿಲ್ ಮೇ.." ಅಂತ ಅಂದ್ರೆ ಅಮಿತಾಭ್ ಬಚ್ಚನಾ ಇಲ್ಲಾ ಮುಕೇಶಾ ನೀವೇ ಹೇಳಿ?
"ಪಿಯಾ ತೂ ಅಬ್ ತೊ ಆಜಾ.." ಇದು ಆಶಾ ಭೋಸ್ಲೆನಾ ಇಲ್ಲಾ ಹೆಲೆನ್ಆ?

ಆದರೆ ಈಗ ಹಾಡುಗಳನ್ನು ಕೇಳಿ:
"ಅನಿಸುತಿದೆ ಯಾಕೋ ಇಂದು.." ಹಾಡು ಕೇಳಿದರೆ ಬರೀ ಸೋನು ನಿಗಮ್ ಕಾಣಿಸುತ್ತಾರೆ, ಗಣೇಶ್ ಅಂತ ಗೊತ್ತಾಗೋದು ಸಿನೆಮಾ ನೋಡಿದ ಮೇಲೇನೇ.
"ದಿಲ್ ಯೆ ದಿಲ್, ದೀವಾನಾ.." ಇದು ಶಾರುಖ್ ಖಾನ್ ಗೋಸ್ಕರ ಹಾಡಿದ್ದು ಅಂತ ನನಗೆ ಯಾವತ್ತೂ ಅನಿಸಲಿಲ್ಲ, ಹಾಡನ್ನು ಕಲ್ಪಿಸಲು ಹೊರಟರೆ ಬರೀ ಸೋನು ನಿಗಮ್ ಕಾಣಿಸುತ್ತಾರೆ.
"ಓ ಮಿತ್ವಾ, ಸುನ್ ಮಿತ್ವಾ.." ಇದು ಉದಿತ್ ನಾರಾಯಣ್ ತಾನೇ? ಅಮೀರ್ ಖಾನ್ ಕಾಣಿಸುತ್ತಾರಾ?
"ಆಮೀ ಝೇ ತುಮಾರೋ.." ಅಂದರೆ ಶ್ರೇಯಾ ಘೋಶಾಲ್ ಬಿಟ್ಟು ವಿದ್ಯಾ ಬಾಲನ್ ಕಲ್ಪಿಸುವುದು ನನಗಂತೂ ಸಾಧ್ಯವಿಲ್ಲ.

ಈಗಿನ ಹಾಡುಗಳೂ ಚೆನ್ನಾಗಿವೆ, ಆದರೆ ಮೊದಲು ನಟ/ನಟಿಯರಿಗೋಸ್ಕರ ಹಾಡುತ್ತಿದ್ದರು, ಈಗಿನವರು ಬರೀ ತಮಗಾಗಿ ಹಾಡುತ್ತಿದ್ದಾರೆ ಅಂತ ನನಗೆ ಅನಿಸುತ್ತದೆ! ನಿಮಗೆ?

20 comments:

ಸಿಮೆಂಟು ಮರಳಿನ ಮಧ್ಯೆ said...

ಜ್ಯೋತಿಯವರೆ ..
ನನಗೆ ಕೆಲವೊಮ್ಮೆ ಹಾಡುಗಾರು ನೆನಪಾಗುತ್ತಾರೆ..
ಅರ್ಥ ಸಿನೇಮಾದಲ್ಲಿ..
"ತುಮ್ ಇತನಾ ಜೊ,, ಮುಸ್ಕುರಾರಹೇಹೊ,,.."
ನನಗೆ ಜಗಜಿತ್ ನೆನಪಾಗುತ್ತಾರೆ..

ಸತ್ಯಮ್ ಶಿವಮ್ ಸುಂದರಮ್ ಹಾಡಿನಲ್ಲಿ ಲತಾ ನೆನಪಾಗುತ್ತಾರೆ..

"ಶೀಷಾ ಹೋಯಾ ದಿಲ್ ಹೋ.. ಟೂಟ ಜಾತಾ ಹೇ.." ದಲ್ಲಿ ಲತಾ...

ತುಮ್ಸೆ ನಾರಾಜ್ ನಹೀ ಜಿಂದಗೀ ಹೈರಾನ್ ಹೂ..ಮೈ..
ನನಗೆ ಕಿಶೋರ್ ನೆನಪಾಗುತ್ತಾರೆ..

ಕನ್ನಡ ನಾಡಿನ ವೀರರಮಣಿಯ.. ಹಾಡಿನಲ್ಲಿ ಪಿಬಿಎಸ್ ನೆನಪಾಗುತ್ತಾರೆ..

ಸ್ವಾಮಿ ದೇವನೆ ಲೋಕ ಪಾಲನೇ" ಹಾಡಿನಲ್ಲಿ "ಸಿನೇಮಾ" ನೆನಪಾಗುತ್ತದೆ..

ಕೆಲವೊಮ್ಮೆ ..
ಸಂಗೀತ ಸಂಯೋಜಿಸಿದವರೂ ನೆನಪಾಗುತ್ತಾರೆ,,

ಕೆಲವೊಮ್ಮೆ..

ಹಾಡು ಬರೆದವರೂ ನೆನಪಾಗುತ್ತಾರೆ..

ಹಾಗೇ ..

ನಟರೂ ಕೂಡಾ ನೆನಪಾಗುತ್ತಾರೆ..

ಅಲ್ಲವೇ...?

ಇದರ ಮೂಲಕ ಮತ್ತೆ ಒಳ್ಳೆಯ ಹಾಡುಗಳು ನೆನಪಾದವು...

ಚಂದದ ಲೇಖನಕ್ಕೆ ಧನ್ಯವಾದಗಳು...

ಮಲ್ಲಿಕಾರ್ಜುನ.ಡಿ.ಜಿ. said...

ಮ್ಯಾಜಿಕ್ ಹಾಡುಗಳ ಬಗ್ಗೆ ನಿಮ್ಮ ಲಾಜಿಕ್ ಒಪ್ಪುವಂತದೇ.
ನನಗೆ ಕೆಲ ಹಾಡುಗಳು ಕೇಳಿದಾಗ ಆ ಫಿಲಂ ನೋಡಿದ ಸಂಧರ್ಭ ನೆನಪಿಗೆ ಬರುತ್ತದೆ.ಅಮೀರ್ಖಾನ್ ನ "ಪೆಹಲಾ ನಶಾ..."ಹಾಡು ಬರುತ್ತಿದ್ದಂತೆ, ಚಿಕ್ಕಮಗಳೂರಿನ ಅನುಪಮಾ ಥಿಯೇಟರ್...

Anonymous said...

ಪ್ರಕಾಶಣ್ಣ,
ಕೆಲವೊಂದು ಹಳೇ ಹಾಡುಗಳಲ್ಲಿ ಹಾಡುಗಾರರೂ ಇಣುಕಿ ನೋಡುತ್ತಾರೆ, ಆದರೆ ಅವುಗಳ ಸಂಖ್ಯೆ ತೀರಾ ಕಡಿಮೆ ಎಂಬುವುದು ನನ್ನ ಅನಿಸಿಕೆ.
"ತುಝ್ ಸೆ ನಾರಾಝ್ ನಹೀ ಜಿಂದಗೀ.." ಹಾಡು ಕಿಶೋರ್ ಕುಮಾರ್ ಹಾಡಿರುವುದೇ ಅಲ್ಲಾ ಅಲ್ವಾ?

Greeshma said...

ಎನಗೆ ಒಂದು ಪದ್ಯವನ್ನ ಪುನಃ ಪುನಃ ನೂರ್ ಸರ್ತಿ ಕೇಳೋ ಅಭ್ಯಾಸ ಇದ್ದ ಕಾರಣ, ಪದ್ಯ ಕೇಳ್ತಿದ್ದ ಸಂಧರ್ಭ ನೆನಪಪದ್ದೆ ಹೆಚ್ಚು. jab we met ದು "yeh ishq hai" ಇಂದು ಕೇಳಿದರೂ ಮುಂಬೈ ಗೆ ಹೋಪ excitement feel ಆವುತ್ತು.
ನೀನು ಹೇಳ್ತಾ ಇಪ್ಪಂಗೆ ಈಗಿನ ಕೆಲವು ಪದ್ಯಕ್ಕೆ actors picturise ಆವುತ್ತಿಲ್ಲೆ.

ಸಿಮೆಂಟು ಮರಳಿನ ಮಧ್ಯೆ said...

ಜ್ಯೋತಿಯವರೆ..
ನಿಜ ಅದು ಕಿಶೋರ್ ಹಾಡಿದ್ದಲ್ಲ...

"ತುಮ್ ಕೋ ದೆಖಾ.. ತೋ .. ಯೇ.. ಖಯಾಲ್ ..ಆಯಾ..
ಜಿಂದಗೀ ಧೂಪ್ ತುಮ್ ಘನಾ ಸಾಯ"

ಈ ಹಾಡು ಕೇಳಿದರೆ "ಜಗಜಿತ್ " ನೆನಪಾಗುವದಿಲ್ಲ..

ನನಗೆ..

" ನನ್ನಾಕೆ " ನೆನಪಾಗುತ್ತಾರೆ...!!

ಹ್ಹಾ..ಹ್ಹಾ..!

ನಾನು ನೋಡಲು ಹೋದಾಗ ಹಾಡಿದ್ದರು..!!

ಮತ್ತೆ ಹಳೆಯ ನೆನಪುಗಳು..

ಧನ್ಯವಾದಗಳು...!

shivu said...

ಜ್ಯೋತಿ ಮೇಡಮ್,

ನಿಮ್ಮ ನಿಜವೆನಿಸುತ್ತದೆ......ಆಗ ಹಾಡುಗಳನ್ನು ನಟರ ರಾಗಕ್ಕೆ ತಕ್ಕಂತೆ ಬದಲಿಸಿ ಹಾಡುತ್ತಿದ್ದರು....
ರಾಜ್‌ಕುಮಾರ್‌ಗಾಗಿ ಪಿ.ಬಿ.ಶ್ರೀನಿವಾಸ್, ಅಂಬರೀಶ್, ವಿಷ್ಟುವರ್ಧನ್‌ರವರಿಗಾಗಿ ಎಸ್.ಪಿ.ಬಾಲಸುಬ್ರಮಣ್ಯಂ

ಅದರೆ ಈಗ ಹಾಡುಗಾರರ ದ್ವನಿಯನ್ನೇ ಜನರು ಹೆಚ್ಚು ಮೆಚ್ಚುತ್ತಿರುವುದರಿಂದ ಮತ್ತು ನಟರು ಒಂದೊಂದು ಸಿನಿಮಾಗೆ ಮಾಯವಾಗುತ್ತಿರುವುದರಿಂದ ಹೀಗೆ ಆಗುತ್ತಿರಬಹುದು.....ಏನಂತೀರಿ....

ಜೋಮನ್ said...

.............:)

Anonymous said...

ಶಿವು ಅವರೇ,
ಹೌದು, ನೀವು ಹೇಳುವುದು ನಿಜ ಅಂತ ಅನಿಸುತ್ತಿದೆ.
ನಟರು ಒಂದೊಂದೇ ಸಿನಿಮಾ ಮಾಡಿ ಮಾಯವಾಗುವುದು ಕಾರಣ ಇರಬಹುದು.
ಆದರೆ ಈಗಾಗಲೇ ನೆಲೆ ನಿಂತ ಕೆಲವರಿಗೆ(ಉದಾಹರಣೆಗೆ ಶಿವರಾಜ್‍ಕುಮಾರ್, ಪುನೀತ್, ಗಣೇಶ್..) ಅವರದ್ದೇ ಛಾಪು ಮೂಡಿಸುವ ಹಾಗೆ ಹಾಡಬಹುದಲ್ಲಾ?

ಜೋಮನ್,
ನನ್ನ ಬ್ಲಾಗಿಗೆ ಸ್ವಾಗತ. :-)
ಹೀಗೇ ಬರುತ್ತಿರಿ.

Anonymous said...

ಪ್ರಕಾಶಣ್ಣ,
ಹಲವಾರು ನೆನಪುಗಳು ನಿಜವಾಗಿಯೂ ಮಧುರ :-)

Keshav Kulkarni said...

ನನಗೆ ಹಾಡು ಕೇಳುವಾಗ ನಟ ಕಣ್ಣ ಮುಂದೆ ಬರುವುದೇ ಇಲ್ಲ.

"ಮೇರೆ ನೈನಾ..." ಹಾಡನ್ನು ನೋಡಲೇಬಾರದು, ನೋಡಿದರೆ ಆ ಪದ್ಯದಲ್ಲಿನ ಅಮೂರ್ತತೆ ಮಾಯ!

"ಕಭೀ ಕಭೀ ಮೆರೆ ದಿಲ್ ಮೆಂ" ನನಗೆ ಮುಕೇಶ್ ಬಿಟ್ಟು ಇನ್ನಾರೂ ಕಾಣಿಸುವುದಿಲ್ಲ.

"ಸಿಮೆಂಟು ಮರಳಿನ ಮಧ್ಯ"ದವರೇ,
"ತುಝ್ ಸೆ ನಾರಾಜ್" ಹಾಡಿದ್ದು ಕಿಶೋರ್ ಅಲ್ಲ, ಭೂಪಿಂದರ್.

ನನಗೆ ಹಾಡುಗಾರರ ಜೊತೆ ಜೊತೆಗೇ ಸಂಗೀತ ನಿರ್ದೇಶಕರೂ ನೆನಪಾಗುತ್ತಾರೆ. "ಚಿನ್ನ ಚಿನ್ನ ಆಸೈ.." ಅನ್ನುತ್ತಿದ್ದಂತೆ ಕಣ್ಣ ಮುಂದೆ ಬರುವುದು ಎ ಆರ್ ರೆಹೆಮಾನ್ ಮತ್ತು ಮಣಿರತ್ನಂ, ಮಿನ್-ಮಿನಿ ಅಥವಾ ಮಧು ಅಲ್ಲ.

"ಏಕ್ ಅಕೆಲಾ ಇಕ್ ಶೆಹೆರ ಮೇ" ಹಾಡು ಕೇಳುವಾಗ ನೆನಪಾಗುವುದು ಹಾಡು ಬರೆದ ಗುಲ್ಜಾರ್, ನನಗಿನ್ನೂ ಆ ಹಾಡಿನ ಸಂಗೀತ ನಿರ್ದೇಶಕ, ಹೀರೋ ಯಾರು ಅಂತ ಗೊತ್ತಿಲ್ಲ.

ಚಿಕ್ಕವರಿರುವಾಗ ಹಾಡುಗಾರ-ಸಂಗೀತಗಾರ-ರಚನೆಗಾರ-ರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಸಿನೆಮಾ ನೋಡಿ, ಹಳೆ ಸಿನೆಮಾದ ಹಾಡುಗಳಿಗೆ ನೀವು ಹೀರೋ ಅಥ್ವಾ ಹಿರೋಯಿನ್ನನ್ನು ನೆನಪಿಸಿಕೊಳ್ಳುತ್ತೀರ ಅನಿಸುತ್ತದೆ.

- ಕೇಶವ (www.kannada-nudi.blogspot.com

Anonymous said...

ಕೇಶವ ಕುಲಕರ್ಣಿಯವರೇ,
ನನ್ನ ಬ್ಲಾಗಿಗೆ ಸ್ವಾಗತ :-)
ನಾನು ಇದುವರೆಗೆ "ಮೇರೇ ನೈನಾ.." ಹಾಡನ್ನು ನೋಡಿಲ್ಲ!! ಕಿಶೋರ್ ಕುಮಾರ್ ಹಾಡಿರುವ ರೀತಿಯನ್ನು ಕೇಳಿ ಅದು ರಾಜೇಶ್ ಖನ್ನಾನೇ ಇರಬೇಕು ಅಂತ ಹೇಳಿದ್ದು.

ಶಿವಪ್ರಕಾಶ್ said...

ಜ್ಯೋತಿಯವರೆ..
ಹಿಂದಿನ ಕಾಲದಲಿ ಸಿನಿಮಾ ತೆರೆಕಂಡ ಮೇಲೆ ಹಾಡುಗಳು ಪ್ರಚಲಿತವಾಗುತ್ತಿದ್ದವು.
ಆದರೆ ಈಗಿನ ಪರಿಸ್ಥಿತಿಯೇ ಬೇರೆ.
ಹಾಡುಗಳನ್ನು Release ಮಾಡಿ, ಪ್ರಚಾರ ಪಡೆದ ಮೇಲೆ ಸಿನಿಮಾ ತೆರೆ ಕಾಣುತ್ತದೆ.
ಈಗಿನ ಕಾಲದಲ್ಲಿ ಹಾಡುಗಳನ್ನು ಪ್ರಚಾರ ಮಾಡಲು ಸಾಕಷ್ಟು ಮಾದ್ಯಮಗಳು ಇದ್ದಾವೆ.
Like, Radio FM.
ಹಾಗಾಗಿ ಹಾಡು ಕೇಳಿದಾಗ, " ಇದು ಯಾರು ಹಾಡಿದ್ದು? " ಎಂಬ ಪ್ರೆಶ್ನೆ ಮೂಡಿ, ಹಾಡುಗಾರನ ನಾಮಾಂಕಿತ ಕೇಳಿ, ಹಾಡು ಕೇಳುವಾಗ ಹಾಡುಗಾರ ನಮ್ಮ ಕಣ್ಣ ಮುಂದೆ ಬರುತ್ತಾನೆ.
ನಂತರ ಸಿನಿಮಾದಲ್ಲಿ ಹಾಡಿನ ಚಿತ್ರೀಕರಣ ಚನ್ನಾಗಿದ್ದರೆ, ನಾಯಕ ಕಣ್ಣ ಮುಂದೆ ಬರುತ್ತಾನೆ.
ನೀವೇನಂತಿರಿ ?

Anonymous said...

ಶಿವಪ್ರಕಾಶ್ ಅವರೇ,
ಹ್ಮ್, ಇರಬಹುದು. ಆದರೆ ನಾನು ಹೇಳಿದ್ದು ಮೊದಲು ಹಾಡುಗಾರರು ನಟನಟಿಯರಿಗೆ ಅನುಗುಣವಾಗಿ ಹಾಡುತ್ತಿದ್ದರು(They had different style when they would sing for different actor).
ಉದಾಹರಣೆಗೆ
"ಜಿಂದಗೀ ಏಕ್ ಸಫರ್.." ಹಾಗೂ "ಓ ಸಾಥೀರೇ.." ಹಾಡುಗಳನ್ನು ಗಮನಿಸಿ. ಎರಡನ್ನೂ ಹಾಡಿರುವುದು ಕಿಶೋರ್ ಕುಮಾರ್. ಆದರೆ ಎರಡನ್ನೂ ಹಾಡಿರುವ ರೀತಿಯಲ್ಲಿ ಎಷ್ಟೊಂದು ವ್ಯತ್ಯಾಸ ಇದೆ, ಅಲ್ವಾ?
ರಾಜೇಶ್ ಖನ್ನಾ/ಅಮಿತಾಭ್ ಬಚ್ಚನ್ ಹಾಡುತ್ತಿದ್ದಾರೆ ಅಂತ ಒಂದು ಕ್ಷಣವಾದರೂ ಅನಿಸಿಯೇ ಅನಿಸುತ್ತದೆ,ಅಲ್ವಾ?

ಶಿವಪ್ರಕಾಶ್ said...

ಹೌದು... ಅ ಅರ್ಥದಲ್ಲಿ ಹೇಳುವುದಾದರೆ ನೀವು ಹೇಳಿದ್ದು Correct.
ಕಿಶೋರ್ ಕುಮಾರ್ is Legend.

gore said...

khare helidri...

Aadre nangyako kishore kumar haadu keltha idre adyava hero kooda nenpaagode illa nodi... Except AANAND film...

Pramod said...

ಈಗೀಗ ಹಾಡುಗಾರರೂ ಸೆಲೆಬ್ರಿಟಿಗಳು ಅಲ್ಲವೇ..ಅದ್ಕೆ..ಹಾಗೆ ನಮ್ಮ ಕಣ್ಣ ಮು೦ದೆ ಬರ್ತಾರೆ..ನೀವು ಹೇಳಿದ್ದು ಸತ್ಯ - 'ಈಗಿನವರು ಬರೀ ತಮಗಾಗಿ ಹಾಡುತ್ತಿದ್ದಾರೆ'

siddu said...

ಹಾಯ್
ಹಾಡು ಹಳೆದು ಆದರೆ
ನಿಮ್ಮ ಬ್ಲಾಗು ನನಗೆ ನವನವೀನ
ತುಂಭಾ ಚೆಂದಾಗಿದೆ
ಧನ್ಯವಾದಗಳು

Rajesh Manjunath - ರಾಜೇಶ್ ಮಂಜುನಾಥ್ said...

ಜ್ಯೋತಿ ಮೇಡಂ,
ನಿಮ್ಮ ಬ್ಲಾಗಿನವರೆಗೆ ಹೇಗೆ ತಲುಪಿದೆ ನಾನೀಗ ಅಂತ ನೆನಪಿಲ್ಲ, ಆದರೆ ಇಲ್ಲಿ ಬಂದು ನನ್ನ ಬ್ಲಾಗಿನ ಲಿಂಕ್ ನೋಡಿ ಅತೀವ ಆನಂದವಾಯಿತು. ನಿಮಗೆ ಹೃತ್ಪೂರ್ವಕ ಧನ್ಯವಾದಗಳು.
ನಿಮ್ಮ ಈ ಬರಹಕ್ಕೆ ನನ್ನ ಸಹಮತವಿದೆ, ಹಿಂದೆ ಚಿತ್ರದ ಪಾತ್ರ ಮುಖ್ಯವಾಗುತ್ತಿತ್ತು, ಮತ್ತು ಪಾತ್ರಕ್ಕೆ ಸರಿ ಹೊಂದುವ ಗಾಯಕರು ಹಾಡುತ್ತಿದ್ದರು. ಆದರೆ ಈಗ ಬಹುತೇಕ ಎಲ್ಲರಿಗು ಒಬ್ಬರೇ ಗಾಯಕರಾಗಿದ್ದಾರೆ, ಮತ್ತು ಪಾತ್ರದ ಬದಲು ಗಾಯಕ ಕಣ್ಣೆದುರಿಗೆ ಮಿಂಚಿ ಮಾಯವಾಗುತ್ತಾನೆ, ಇದು ಪಾತ್ರದ ಸೋಲೋ ಇಲ್ಲ ಗಾಯಕನ ಗೆಲುವೋ ಅರ್ಥವಾಗುತ್ತಿಲ್ಲ...

Bit Hawk said...

The only reason I can think of is the amount of visibility that the singers are getting nowadays. The moment his/her first song becomes a hit, he/she is shown in the music video(and that too as a big superstar) Alwa? To support this theory, answer this simple question, how many present day singers do you know whose videos you have not seen? :)

ನಾವಡ said...

ನಮಸ್ಕಾರ,
ಲೇಖನ ಖುಷಿ ಕೊಟ್ಟಿತು.ಮುಕೇಶ್ ರ "ದಿಲ್ ಜಲ್ತಾ ಹೈ ತೋ ಜಲ್ನೇ ದೋ..." ಈಹಾಡು ಸಿಕ್ಕರೆ ಕೇಳಿ. ವಿಷಾದವನ್ನು ತೀರಾ ಆಪ್ತವಾಗಿಸುತ್ತ ಕಣ್ಣ ಭಾರಗೊಳಿಸುವ ಹಾಡು.ನನಗೂ ನೀವು ಪಟ್ಟಿ ಮಾಡಿದ ಹಲವು ಹಾಡುಗಳು ಇಷ್ಟ.ಅಂದ ಹಾಗೆ ಯೇಸುದಾಸ್ ಹಾಡಿದ ಹಲವು ಹಿಂದಿ ಹಾಡುಗಳು ಅಜರಾಮರ.
ಶುಕ್ಲವರ್ಣಿ