Sunday, February 8, 2009

ಭಯಾನಕ ರಾತ್ರಿ

ಅವತ್ತು ನಾನು ರೂಮಿನಲ್ಲೇ ಒಬ್ಬಳೇ ಇದ್ದೆ. ಆಗಷ್ಟೆ ಘಂಟೆ ೧೨ ಕಳೆದಿತ್ತು.
ಹೊರಗಡೆ ನಾಯಿಗಳು ಏನನ್ನೋ ನೋಡಿ ಬೊಗಳುತ್ತಿದ್ದವು, ಬೀದಿಯಲ್ಲಿದ್ದ ಎಲ್ಲಾ ನಾಯಿಗಳೂ ಸೇರಿದ್ದವು ಎನ್ನುವಷ್ಟು ಜೋರಾಗಿ ಅವು ಬೊಗಳುವುದು ಕೇಳಿಸುತ್ತಿತ್ತು.
ರೂಮಿನಲ್ಲಿ ಯಾವುದೋ ಪ್ಲಾಸ್ಟಿಕ್ ಚೀಲವನ್ನು ಯಾರೋ ಆ ಕಡೆ ಈ ಕಡೆ ಎಳೆದಾಡುತ್ತಿದ್ದಾರೆ ಅನ್ನುವ ಹಾಗೆ, ಮೇಲ್ಗಡೆ ಯಾರೋ ನಡೆದಾಡುತ್ತಿದ್ದಾರೆ ಅನ್ನುವ ಹಾಗೆ, ಹೊರಗಡೆ ಯಾರೋ ಚೀರಿದ ಹಾಗೆ, ಇನ್ನೂ ಏನೇನೋ ಶಬ್ದಗಳು..

ನಾನು ಮೊದಲೇ ಅಂಜುಬುರುಕಿ, ಹೇಗೋ ಧೈರ್ಯ ಮಾಡಿ ರೂಮಿನಲ್ಲಿದ್ದ ಚಿಕ್ಕ bulb ಒಂದನ್ನು on ಮಾಡಿ ಮುಸುಕು ಹಾಕಿ ಮಲಗಿದೆ.
ಬೆಳಕಿದ್ದ ಕಾರಣ ಭಯ ಕಡಿಮೆ ಆಗಿತ್ತು. ಸ್ವಲ್ಪ ನಿದ್ದೆ ಬಂತು ಅಂದಾಗ ಯಾರೋ ರೂಮಿನ ಬಾಗಿಲನ್ನು ತೆಗೆದರು, ದಡ್ ಅನ್ನುವ ದೊಡ್ದ ಶಬ್ದ ಬೇರೆ! ನನ್ನ ಹೃದಯದ ಬಡಿತ ನನಗೇ ಕೇಳಿಸುತ್ತಿತ್ತು.

ಅಷ್ಟರಲ್ಲಿ ದೀಪ ಆರಿಸಿದ ಸದ್ದು ಕೇಳಿಸಿತು, ಕಣ್ಣು ಬಿಟ್ಟರೆ ಎಲ್ಲಾ ಕತ್ತಲು. ಆಮೇಲೆ ಏನೂ ಸದ್ದಿಲ್ಲ. ದೀಪ ಆರಿಸಿದ ಸದ್ದೇ ಕೊನೆಯದು. ತುಂಬು ಮೌನ(pin drop silence ಅಂತಾರಲ್ಲ ಹಾಗೇ). ಇನ್ನೇನು ಮಾಡೋದು ಗೊತ್ತಾಗ್ತಿಲ್ಲ. ಎದ್ದು ನೋಡಲೂ ಭಯ, ಮಲಗಿರಲೂ ಆಗುತ್ತಿಲ್ಲ.

ಅಷ್ಟೋ ಇಷ್ಟೋ ಧೈರ್ಯ ಮಾಡಿ, ಮೊಬೈಲ್ ನಲ್ಲಿದ್ದ torch on ಮಾಡಿ ನೋಡಿದೆ, ರೂಮಿನಲ್ಲಿ ಯಾರೂ ಕಾಣಿಸುತ್ತಿಲ್ಲ. ಮುಂದೇನು ಮಾಡುವುದು? ಈ ಶಬ್ದಗಳು ನನಗೆ ಮಾತ್ರ ಕೇಳಿದ್ದೋ ಅನ್ನುವುದನ್ನ ಖಚಿತ ಪಡಿಸಿಕೊಳ್ಳಬೇಕಿತ್ತು. ಸರಿ ಅಂತ ಹೊರಗೆ ಮಲಗಿದ್ದ ನನ್ನ ಗೆಳತಿಗೆ ಮಲಗಿದಲ್ಲಿಂದಲೇ ಫೋನ್ ಮಾಡಿದೆ.

ಮುಂದೇನಾಯಿತು ಅಂತ ಯೋಚಿಸುತ್ತಿದ್ದೀರಾ? ಅವಳು ತಾನೇ ಬಲ್ಬ್ on ಮಾಡಿ off ಮಾಡಲು ಮರೆತೆ ಅಂದುಕೊಂಡು ಬಂದು off ಮಾಡಿ ಹೋಗಿದ್ದಳಂತೆ!!!! ಹೋದ ಜೀವ ಮತ್ತೆ ಬಂತು. ನನ್ನ ಸ್ತಿಥಿ ನೋಡಿ ನನಗೇ ನಗು ಬಂತು.
ಮತ್ತೆ ಮಲಗಿ ನಿದ್ದೆ ಮಾಡಿದೆ :-)
ಈಗ ದಿನಾ ಮಲಗುವ ಮುಂಚೆ ಅವಳಿಗೆ light off ಮಾಡಬೇಡ ಅಂತ ಹೇಳುವುದನ್ನು ಮಾತ್ರ ಮರೆಯುವುದಿಲ್ಲ.

15 comments:

shivu said...

ಜ್ಯೋತಿ ಮೇಡಮ್,

ಈಗಿನ ಕಾಲದಲ್ಲೂ ಇಷ್ಟೊಂದು ಹೆದರಿದ್ರೆ ಹೇಗೆ ...?

ಜ್ಯೋತಿ said...

ಏನ್ ಮಾಡೋದು ಸಾರ್, ಧೈರ್ಯ ಕಡ್ಮೆ! ಹೆದರ್ಕೋಬಾರ್ದು ಅಂತ ಎಷ್ಟ್ ಅಂದ್ಕೊಂಡ್ರೂ ಭಯ ಆಗತ್ತೆ!

Ashok Uchangi said...

ನಿಮ್ಮ ಗೆಳತಿಯನ್ನು ನೋಡಿ ಕಲೀರ್ರಿ...ದೀಪವಾರಿಸಿ ಕತ್ತಲಲ್ಲೇ ನಡೆದು ಹೋಗಿ ಮಲಗಿದ್ರಲ್ಲಾ!
ಬೆಂಗಳೂರಲ್ಲಿ ಹೆದರಬೇಕು...ತಪ್ಪೇನಿಲ್ಲಾ...
ಅಶೋಕ ಉಚ್ಚಂಗಿ

ಸಿಮೆಂಟು ಮರಳಿನ ಮಧ್ಯೆ said...

ನಾನು ಸಣ್ಣವನಿದ್ದಾಗ ಇದೇ ಥರಹ ಹೆದರಿತ್ತಿದ್ದೆ...

ಸಣ್ಣ ಬೆಳಕು ಇರಬೇಕಿತ್ತು...

ಹೆಚ್ಚಿನ ಹೆದರಿಕೆಗಳು..
" ಮಾನಸಿಕ" ಅಲ್ಲವಾ..?

ಚಂದದ ಬರಹಕ್ಕೆ
ಅಭಿನಂದನೆಗಳು...

ಶಿವಪ್ರಕಾಶ್ said...

Darna mana hai. :)

ಜ್ಯೋತಿ said...

ಅಶೋಕ್ ಅವರೇ,
ಅವಳೇ ತಾನೇ ನನ್ನನ್ನು ಹೆದರಿಸಿದ್ದು :P

ಪ್ರಕಾಶಣ್ಣ,
ಭಯ ಮಾನಸಿಕವೇ! ಸ್ವಲ್ಪ ಬೆಳಕಿದ್ದರೂ ಸಾಕು, ಭಯ ಓಡಿಸಲಿಕ್ಕೆ.

ಶಿವಪ್ರಕಾಶ್ ಅವರೇ,
ಮುಂದೆ Darna zaroori hai ಅಂತಾನೂ ಸಿನೆಮಾ ಬಂದಿದೆ, ಅಲ್ವಾ?

Greeshma said...

hahaha! room mate ಇಲ್ಲದೆ ಇಪ್ಪದು ಬಾರಿ problem ಆಯ್ದು ನಿನಗೆ

pradeep said...

evado horror cinema nodeda hage prateete aythu :P.

ಸಂದೀಪ್ ಕಾಮತ್ said...

ಯಾವುದಕ್ಕೊ ಒಂದು ಸಲ ರಾಮ್ ಗೋಪಾಲ್ ವರ್ಮಾಗೆ ಹೇಳಿಬಿಡಿ!

ರಾಘವೇಂದ್ರ ಕೆಸವಿನಮನೆ. said...

ಬರಹ ತುಂಬಾ ಚೆನ್ನಾಗಿದೆ. ಯಾವುದೋ ಹಾರರ್ ಸಿನಿಮಾ ಓಪನಿಂಗ್ ತರ ಓದಿಸಿಕೊಂಡು ಹೋಯಿತು.
ಪೇಟೆಲೇ ಇಷ್ಟು ಹೆದರೋರು ಹಳ್ಳಿ ಕಡೆ ಬಂದ್ರೆ ಏನ್ ಕಥೆ!!!???
- ರಾಘವೇಂದ್ರ ಕೆಸವಿನಮನೆ

ಜ್ಯೋತಿ said...

@ಗ್ರೀಷ್ಮಾ,
ಅಪ್ಪು ಮಾರಾಯ್ತಿ, ಈ ರೂಮ್ ಮೇಟ್ ಯಾವ್ಗ ವಾಪಸ್ ಬತ್ತಾ.

@Pradeep
I experienced it :P


ಸಂದೀಪ್ ಅವರೇ,
ನನ್ನನ್ನು ಭೂತದ role ಮಾಡಲು select ಮಾಡಿದ್ರೆ ಕಷ್ಟ!
ಹೀಗೇ ಬರ್ತಾ ಇರಿ.

ರಾಘವೇಂದ್ರ ಅವರೇ,
ನನ್ನ ಬ್ಲಾಗಿಗೆ ಸ್ವಾಗತ.
ಊರಲ್ಲಿ ನಮ್ಮದು ತುಂಬಾ ಹಳೇ ಮನೆ. ಅಲ್ಲಿಯದು ಇನ್ನೂ ಒಂದಷ್ಟು ಕತೆಗಳಿವೆ!
ಮುಂದೆ ಬರೆಯುತ್ತೇನೆ.
ಹೀಗೇ ಬರುತ್ತಾ ಇರಿ.

gore said...

ಚೆನ್ನಾಗಿದೆ ನಿಮ್ಮ ಭಯಾನಕ ರಾತ್ರಿ...
ನನ್ನ ಭೂತದ ಕಥೆಯನ್ನ ಇಲ್ಲಿ ಓದಿ...:-)

http://ravikanth-gore.blogspot.com/2008/06/blog-post_19.html

http://ravikanth-gore.blogspot.com/2008/10/blog-post.html

ಸುರೇಶ್ said...

ನಿಜವಾಗಿಯೂ ಭಯ ಆಯ್ತಾ ಅಥವಾ ಅದು ಕನಸೋ

ಜ್ಯೋತಿ said...

ನಿಜವಾಗಿಯೂ ಭಯ ಆಗಿತ್ತು!

Kinjalkini Bhat said...

I understand that fear! No matter what it doesn't go away