Sunday, February 1, 2009

ಯೆ ಹೈ.. ವಿವಿಧ್ ಭಾರತಿ..

ಮೈಸೂರಿನಲ್ಲಿ ಇದ್ದಾಗ ಗಣಕಯಂತ್ರ ಕೆಟ್ಟಿದ್ದಾಗ ನನ್ನ ರೂಮ್ ಮೇಟ್ ಮೊಬೈಲ್ ಫೋನೇ ನಮಗೆ ಹಾಡು ಕೇಳುವ ಸಾಧನ!
ಅದೂ ಅದರಲ್ಲಿ mp3 player ಇರಲಿಲ್ಲ, ಬೆಂಗಳೂರಿನಲ್ಲಿ ಇರುವಂತೆ ಹತ್ತಾರು F.M. channel ಗಳೂ ಇರಲಿಲ್ಲ, ಬರೀ ಆಕಾಶವಾಣಿ ಮೈಸೂರು. ಅದರಲ್ಲಿ ಬೆಳಗ್ಗೆ 10 ರಿಂದ 11 ರವರೆಗೆ ಬರುವ ತಮ್ ನಮ್ ಕನ್ನಡ ಚಿತ್ರಗೀತೆಗಳು ಹಾಗೂ 11 ರಿಂದ 12 ರವರೆಗೆ ಬರುವ ಝನಕ್ ಝನಕ್(ಕಾರ್ಯಕ್ರಮದ ಹೆಸರು ಸರಿಯಾಗಿ ನೆನಪಿಲ್ಲ) ಹಿಂದೀ ಚಿತ್ರಗೀತೆಗಳೇ ನಮಗೆ entertainment package!

ಆದರೆ ನನಗೆ ಮಧ್ಯಾಹ್ನ ವಿವಿಧ ಭಾರತಿ ಸಹಪ್ರಸಾರದಲ್ಲಿ ಬರುತ್ತಿದ್ದ ಮೇರೀ ಸಹೇಲೀ ಹಾಗೂ ಇನ್ನೂ ಕೆಲವು ಕಾರ್ಯಕ್ರಮಗಳು ಹೆಚ್ಚು ಇಷ್ಟವಾಗಿದ್ದವು. ಈಗ ಮತ್ತೆ ವಿವಿಧ್ ಭಾರತಿ(102.9) ಕೇಳುತ್ತಿದ್ದೇನೆ, ಅದು ಬಿಟ್ಟರೆ FM Rainbow(101.3). ಕನ್ನಡ ಹಾಗೂ ಹಿಂದಿಯಲ್ಲಿ ನಾವು ಹೆಚ್ಚು-ಕಡಿಮೆ ಮರೆತೇ ಬಿಟ್ಟಿರುವಂತ ಹಾಡುಗಳೆಲ್ಲ ಹಾಕುತ್ತಾರೆ. ಅದರಲ್ಲಿ ಪ್ರಸಾರವಾಗುವ ಜಾಹೀರಾತುಗಳು ತುಂಬಾ ತಮಾಷೆಯಾಗಿರುತ್ತವೆ, ಅದರಲ್ಲಿ ಬರುವ ಸಂವಾದಗಳು ಇನ್ನೂ ಮಜ! :-)
ಇತ್ತೀಚೆಗೆ ನಡೆದ ಕೆಲವು ಸಂಗತಿಗಳು:

ವಿಷಯ 1:
ವಿಷಯ: ಇಂದಿನ ಯುವಜನತೆಯಲ್ಲಿ ಮೌಲ್ಯಗಳು ಇವೆಯೇ?
ಒಬ್ಬ ವ್ಯಕ್ತಿ call ಮಾಡಿ ಇಂದಿನ ಯುವಜನತೆಯಲ್ಲಿ ಮೌಲ್ಯಗಳು ಇಲ್ಲ, ಎಲ್ಲಾ ಬರೀ ಪಬ್, ಕ್ಲಬ್ ಅಂತ ಓಡಾಡುತ್ತಾರೆ, ಹೀಗೇ ಇನ್ನೂ ಏನೇನೋ ಹೇಳಿ ಕೊನೆಗೆ ಇನ್ನು ಯಾವ ಹಾಡು ಪ್ರಸಾರ ಮಾಡುತ್ತೀರಾ ಅಂತ ಕೇಳಿದ್ರು. ಅದಕ್ಕೆ host ಇನ್ನು ಮಿಲನ ಚಿತ್ರದ ನಿನ್ನಿಂದಲೇ ಹಾಡನ್ನು ಹಾಕುತ್ತೇವೆ ಎಂದಿದ್ದಕ್ಕೆ, ಅದು ಬೇಡ, ನಮಗೆ ಅನಾಥ ಮಗುವಾದೆ ಹಾದು ಇಷ್ಟ, ಅದನ್ನೇ ಹಾಕಿ ಎನ್ನಬೇಕೆ! ಪಾಪ host ಇಲ್ಲ, ನಿಮ್ಮ ಮೆಚ್ಚಿನ ಚಿತ್ರಗೀತೆಗಳ ಸಮಯ ಮುಗಿದು ಹೋಯಿತು. ಒಂದಷ್ಟು ಹಾಡುಗಳನ್ನು ಮೊದಲೇ ಆಯ್ಕೆ ಮಾಡಿರುತ್ತೇವೆ. ಅದನ್ನೇ ಹಾಕುತ್ತೇವೆ ಅಂತ ಹೇಳಿ phone ಇಟ್ಟು ನಿನ್ನಿಂದಲೇ ಹಾಡನ್ನು ಪ್ರಸಾರ ಮಾಡಿದರು!

ವಿಷಯ 2:
ಬಸವ ಭವನದಲ್ಲಿ ನಡೆದ KSIC vintage saaree collection & exhibition ಅಲ್ಲಿ ಒಬ್ಬರು ನೇರವಾಗಿ ಅಲ್ಲಿ ನಡೆಯುತ್ತಿರುವುದನ್ನೆಲ್ಲಾ ಹೇಳುತ್ತಿದ್ದರು. ಸುಮಾರು ಒಂದು ವಾರ ಬರೀ ಸೀರೆಗಳದ್ದೇ ಮಾತು!! ಪಾಪ ಅವರಿಗೆ ಬೇರೆ ಇನ್ನೇನೂ ಸಿಗಲಿಲ್ಲ ಅನ್ಸತ್ತೆ! ಅದರಲ್ಲಿ ತುಂಬಾ ಚೆನ್ನಾಗಿ ತೆಗೆದಿಟ್ಟ ಅತ್ಯಂತ ಹಳೆಯ ಸೀರೆಗಳಿಗೆ ಬಹುಮಾನ ಬೇರೆ ಇತ್ತು. 1948ರಲ್ಲಿ ಖರೀದಿಸಿದ ಸೀರೆಗೆ ಮೊದಲ ಬಹುಮಾನ ಬಂತು. 50 ವರ್ಷ ಹಳೆಯದಾದ ಸೀರೆ! ಆರ್ಯಾಂಬ ಪಟ್ಟಾಭಿಯವರಿಗೆ ಈ ಬಹುಮಾನ ಬಂದಿತ್ತು. ಅವರನ್ನು ಮಾತನಾಡಿಸುವಾಗ ಸೀರೆಯನ್ನು ಬಿಟ್ಟು ಅವರ ಕಾದಂಬರಿಗಳು, ಕಪ್ಪು-ಬಿಳುಪು ಸಿನೆಮಾದ ಬಗ್ಗೆಯೇ ಹೆಚ್ಚು ಮಾತನಾಡಿದ್ದರು! KSIC ಸೀರೆಗಳ ಬಗ್ಗೆ ನಡೆಯಬೇಕಿದ್ದ ಕಾರ್ಯಕ್ರಮ ಮತ್ತೆಲ್ಲೋ! ರೇಡಿಯೋದಲ್ಲಿ ಈ ತರ ಆಗುವುದು ಸಹಜ ಎನ್ನುತ್ತೀರಾ?

ವಿಷಯ 3:
ಆದಿತ್ಯವಾರ ಬೆಳಗ್ಗೆ ವಿವಿಧ ಭಾರತಿ ಕೇಳಬೇಕು, ದಿನದ ಆರಂಭವೇ ಶೋಕಗೀತೆಗಳಿಂದ!! ಬೆಳಗ್ಗೆ ಎದ್ದ ಕೂಡಲೇ "ದುನಿಯಾ ಬನಾನೇವಾಲೇ" ಅಥವಾ "ಈ ದೇಹದಿಂದ ದೂರನಾದೆ" ಅಂತ ಹಾಡು ಕೇಳಿದರೆ ದಿನ ಹೇಗಿರಬೇಕು? ಹಾಗೇ ಸಂಜೆ ಹೊತ್ತಲ್ಲಿ ಬರುವ ಜಯಮಾಲ ಕಾರ್ಯಕ್ರಮದಲ್ಲೂ ಹೆಚ್ಚಾಗಿ ಶೋಕಗೀತೆಗಳು ಬರುತ್ತವೆ. ಇದು ಸೈನಿಕರ ಮೆಚ್ಚಿನ ಹಾಡುಗಳ ಕಾರ್ಯಕ್ರಮ. ಅವರು ಬರೀ ಶೋಕಗೀತೆಗಳನ್ನೇ ಕೇಳುತ್ತಾರಾ?

ನನಗೆ ಆದರೂ ಉಳಿದ F.M. stationಗಳಿಗಿಂತ ವಿವಿಧಭಾರತಿಯೇ ಹೆಚ್ಚು ಇಷ್ಟ. ನಾನು ಕೇಳದೇ ಇದ್ದಂತಹ ಅನೇಕ ಹಳೆ ಹಾಡುಗಳನ್ನು ಪರಿಚಯಿಸಿ ಕೊಟ್ಟಿದೆ, ಸಿಹಿ ಸಿಹಿ ಹಾಡುಗಳನ್ನೂ ಪ್ರಸಾರ ಮಾಡುತ್ತದೆ. ಸಂಜೆ ನಾನು ಏಕಾಂಗಿಯಾಗಿ ಸಮಯ ಕಳೆಯುವಾಗ ನನ್ನ ಸಂಗಾತಿ-ವಿವಿಧ ಭಾರತಿ(ಈ ರೀತಿ ಪ್ರಾಸಬದ್ಧವಾಗಿ ಮಾತನಾಡುವುದನ್ನೂ ಅಲ್ಲಿಂದಲೇ ಕಲಿತಿರುವೆ!) ಎಂದರೆ ತಪ್ಪಾಗಲಾಗದು.
ನೀವೂ ಕೇಳಿ-ಅಭಿಪ್ರಾಯ ಹೇಳಿ(ಮತ್ತೆ ಪ್ರಾಸ!! :-P)!

6 comments:

shivu said...

ಸಾರ್,

ನಿಮ್ಮ ಅಂದಿನ ಮೈಸೂರು ರೇಡಿಯೋ ಪುರಾಣ ಚೆನ್ನಾಗಿದೆ.....ಇದೆಲ್ಲಾ ತಮಾಷೆಗಳು ಇದ್ದರೂ ನಿಮಗೆ ಅದೇ ಇಷ್ಟವಾಗುತ್ತದೆಂದರೆ ನೀವು ಗ್ರೇಟ್....

ನಮಗೆ ಬೆಂಗಳೂರಿನಲ್ಲಿ ಸ್ವಲ್ಪ ಹೊತ್ತು ಕೇಳಿದರೆ ಬೋರ್ ಆಗಿ ನಾವು ಖಾಸಗಿ FM ಕೇಳುತ್ತೇನೆ.....

Greeshma said...

ಹೌದೇ!ಆ ಮೈಸೂರ್ ಎಫ್.ಎಂ ಕಾರ್ಯಕ್ರಮಕ್ಕೆ ಎಷ್ಟ್ ಕಾಯ್ತಾ ಕೂರ್ತಿತ್ತು.
ಈಗ big fm ಮತ್ತೆ S fm ಬಂದು ಇನ್ನೊಂದಿಷ್ಟು options ಹೆಚ್ ಆಯ್ದು . ಆದರೆ i still prefer ಆಕಾಶವಾಣಿ :)

Anonymous said...

ಶಿವು ಅವರೇ,
ಖಾಸಗಿ ಚಾನೆಲ್ ಕೇಳಿದರೆ R.J.ಗಳ ಅಬ್ಬರ ಹೆಚ್ಚು, ಅದಕ್ಕೇ ಅವು ಅಷ್ಟೊಂದು ಇಷ್ಟವಾಗುವುದಿಲ್ಲ, ಪ್ರತೀ ಹಾಡಿನ ಮಧ್ಯೆ ಸುಮಾರು ಅರ್ಧ ಗಂಟೆಯ ಚಿಕ್ಕ ವಿರಾಮ ಬೇರೆ ಇರುತ್ತದೆ ಅಲ್ವಾ? ಅದನ್ನೆಲ್ಲಾ ಕೇಳಿದರೆ ವಿವಿಧ ಭಾರತಿ ಎಷ್ಟೋ ವಾಸಿ. ನಿಮ್ಮನ್ನು ಮತ್ತೆ ಮಧುರ ಚಿತ್ರಗೀತೆಗಳ ಕಾಲಕ್ಕೆ ಕೊಂಡೊಯುತ್ತದೆ. ಜಿಂಕೆ ಮರೀನಾ ಹಾಡಿನ ಬದಲು ತೆರೆದಿದೆ ಮನೆಯಂತಾ ಅದ್ಭುತ ಹಾಡುಗಳು ಮನಸ್ಸಿಗೆ ಮುದ ನೀಡುತ್ತವೆ ಅಲ್ವಾ?

@Greeshma
ಆಕಾಶವಾಣಿ programs ಕೊಟ್ಟಷ್ಟು ಮಜಾ ಬೇರೆ ಯಾವ ಸ್ಟೇಷನಿಂಗೂ ಕೊಡ್ಲೆ ಎಡಿತ್ತಿಲ್ಲೆ. ಆ ಹಿಂದಿ ಹಾಡು ಟೈಮಿಲಿ ಮುಕೇಶ್ ಇಂದ ಹಿಡುದು ಸೋನು ನಿಗಮ್ ವರೆಗೆ ಎಲ್ಲಾ ಕಾಲದ ಪದ್ಯಂಗ ಹಾಕಿಯೊಂಡು ಇತ್ತವಲ್ದಾ. ಆ R.J. ಗ ಮಾತಾಡುವ ಮಜಾವೇ ಬೇರೆ! :-)

Ashok Uchangi said...

ನೀವು ಹೇಳೋದು ನಿಜ.ನನಗೂ ತಮ್ ನಮ್,ಝನಕ್ ಝನಕ್ ತುಂಬಾ ಇಷ್ಟ.ಖಾಸಗಿ ಚಾನೆಲ್ ಈಗ ಮೈಸೂರಿಗೂ ಬಂದಿವೆ. R.J.ಗಳ ಅಬ್ಬರ ಕೇಳುವ ಬದಲಿಗೆ ಸುಮ್ಮನಿರೋದೇ ವಾಸಿಯೆನ್ನುವಂತಿದೆ.ರಾತ್ರಿ ೧೨ ಗಂಟೆ ಮೇಲೆ ಚೆನ್ನಾಗಿರುತವೆ ಇವು.ಮೈಸೂರು ಆಕಾಶವಾಣಿಯೂ ಈಗ ಬದಲಾಗಿದೆ.ಆದರೆ ತನ್ನ ಸೊಗಡನ್ನು ಉಳಿಸಿಕೊಂಡಿದೆ.ಹೆಚ್ಚು ಹೆಚ್ಚು ಹಾಡುಗಳನ್ನು ಪ್ರಸಾರ ಮಾಡುತ್ತಿದೆ.ನವಿಲುಗರಿ ಎಂಬ ಸಂಗೀತ ಪ್ರಧಾನ ಸಿನಿಮಾಗೀತೆಗಳ ಕಾರ್ಯಕ್ರಮ ಜನಪ್ರಿಯವಾಗಿದೆ.ಮೈಸೂರಿಗೆ ಬಂದಾಗ ಕೇಳಿ ಆನಂದಿಸಿ.
ಅಶೋಕ ಉಚ್ಚಂಗಿ
http://mysoremallige01.blogspot.com/

ಸಿಮೆಂಟು ಮರಳಿನ ಮಧ್ಯೆ said...

ಜ್ಯೋತಿಯವರೆ...

ನನಗೆ ವಿವಿಧ ಭಾರತಿ ಇಷ್ಟ..

ಕನ್ನಡ ಚಂದವಾಗಿ ಮಾತಾಡುತ್ತಾರೆ...

ಹಳೆಯ ಹಾಡುಗಳನ್ನೂ ಪ್ರಸಾರ ಮಾಡುತ್ತಾರೆ...

ಒಂದುಸಾರಿ "ದೀಪಾವಳಿಯ " ದಿನ ಬೆಳಿಗ್ಗೆ

" ಸೋಗಯಾ... ಯೇ ...ಜಹಾಂ....

ಸೋಗಯಾ.. ಆಸಮಾನ್.."

ಹಾಡು ಹಾಕಿ ಬಿಟ್ಟಿದ್ರು...

ಲೇಖನ ಚೆನ್ನಾಗಿದೆ...

Anonymous said...

ಅಶೋಕ್ ಅವರೇ,
ಝನಕ್ ಝನಕ್ ಕಾರ್ಯಕ್ರಮ ಇನ್ನೂ ಚೆನ್ನಾಗಿ ಮೂಡಿ ಬರುತ್ತಿದೆ ಎಂದು ಕೇಳಿ ಸಂತೋಷವಾಯಿತು, ಮುಂದಿನ ಸರ್ತಿ ಮೈಸೂರಿಗೆ ಬಂದಾಗ ಖಂಡಿತಾ ಕೇಳುತ್ತೇನೆ :-)

ಪ್ರಕಾಶ್ ಸರ್,
ವಿವಿಧ ಭಾರತಿಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ಬರುತ್ತಿದೆ, ಅಲ್ವಾ? ಬೇರೆ ಖಾಸಗಿ F.M. ಕೇಳಿದರೆ ಕಾರ್ಯಕ್ರಮಗಳ ಹೆಸರು ಬದಲಾದರೂ ಹಾಡುಗಳ ಪುನರಾವರ್ತನೆ ಆಗುತ್ತಲೇ ಇರುತ್ತದೆ. ಇದರಲ್ಲಿ ಹೊಸ ಹಾಗೂ ಹಳೆಯ ಹಾಡುಗಳು ಪ್ರಸಾರ ಆಗುತ್ತಿರುತ್ತವೆ. ಮೊನ್ನೆ ಬೆಳಗ್ಗೆ "ಲೇಕೆ ಪೆಹೆಲಾ ಪೆಹೆಲಾ ಪ್ಯಾರ್" ಹಾಡು ಬಂದಾಗ ಮತ್ತೆ ಮೊದಲಿನ ಕಾಲಕ್ಕೇ ಹೋದ ಅನುಭವ :-)