Sunday, January 11, 2009

Cinema cinema!

ಕೆಲವು ಸಿನಿಮಾ ನೊಡಿದ್ರೆ, ಯಾಕಾದ್ರೂ ಈ ಸಿನಿಮಾ ಬಿಡುಗಡೆ ಮಾಡಿದ್ರೋ ಅಂತ ಅನ್ಸತ್ತೆ.
ಸಿನಿಮಾ ಕತೆ ಸ್ವಲ್ಪ ಚೆನ್ನಾಗಿದೆ ಅಂತ ಅನ್ಸಿದ್ರೂ ಅದನ್ನ edit ಮಾಡೋರಿಗೆ ಅದ್ರ ಹಣೆಬರಹ ಗೊತ್ತಾಗ್ಬೇಕು ಅಲ್ವಾ?
ಅದೂ ಸರಿ ಇದೆ ಅಂತ ಅನ್ಸಿದ್ರೂ ಆಮೇಲೆ ಅದ್ರ premier show ನೋಡೋವಾಗ ಆದ್ರೂ ಗೊತ್ತಾಗ್ಬೇಕು ಅಲ್ವಾ?
ಆಮೇಲೂ ಅದನ್ನ ಬಿಡುಗಡೆ ಯಾವ್ ಧೈರ್ಯದ ಮೇಲೆ ಮಾಡ್ತಾರೆ ಅನ್ನೋದು ಇವತ್ತಿಗೂ ಅರ್ಥ ಆಗ್ತಿಲ್ಲ!
ನೀವು ಈ ಸಿನಿಮಾಗಳನ್ನು ನೋಡಿದ್ದರೆ ನನ್ನ ಮಾತನ್ನು ಖಂಡಿತಾ ಒಪ್ಪುತ್ತೀರಿ: Jaani Dushman - Ek anokhi kahani, Jaal- The trap, Baaz - A bird in danger, ಮುಂತಾದವು.
ಕೆಲವೊಂದನ್ನ ನೋಡಿದರೆ ತಮಾಷೆ ಅನ್ನಿಸಿದರೆ ಇನ್ನೂ ಕೆಲವನ್ನ ಜೈಲಿನಲ್ಲಿ 3rd degree torture ಅಂತಾರಲ್ಲ, ಅದಕ್ಕೆ ಉಪಯೋಗಿಸಬಹುದು.
ಹೆಚ್ಚಿನ ಸಿನೆಮಾಗಳು ನೆಲಕಚ್ಚಲು ಈ ತರದ ಕಥೆಗಳೇ ಕಾರಣ, ಅಲ್ವಾ?

4 comments:

anil said...

cinema cinema , jote jote ali ;-) You have written quite a lot , hmmmm

shivu K said...

ನಿಮ್ಮ ಅಭಿಪ್ರಾಯ ಸರಿಯಿದೆ.....ನಿಮಗನ್ನಿಸಿದ್ದೆ ನಾನು ಅಂದುಕೊಳ್ಳುತ್ತೇನೆ.....ಈ ಸಿನಿಮಾ ತೆಗೆಯುವವರಿಗೆ ನಾವೆಲ್ಲ ಆಷ್ಟು ದಡ್ಡರೆಂದುಕೊಳ್ಳುತ್ತಾರೇನೋ....

NilGiri said...

ನೀವು ಹೇಳೋದು ಕರೆಕ್ಟ್! ಒಮ್ಮೊಮ್ಮೆ ಕೆಲವು ಸಿನೆಮಾಗಳಂತೂ, ಕೈಗೆ ಸಿಕ್ಕಿದ್ದು ಬಿಸಾಕುವಷ್ಟು ದರಿದ್ರವಾಗಿರುತ್ತವೆ.

ಮನಸ್ವಿ said...

ಹ್ಮ್.. ನಿಜ.. ಅದಕ್ಕೆ ಸ್ಲೋಗನ್ನುಗಳನ್ನ ಹಾಕಿಕೊಂಡಿರ್ತಾರೇನೋ.. ಬುದ್ದಿವಂತರಿಗೆ ಮಾತ್ರ.. ಪ್ರೀತ್ಸೋರಿಗೆ ಮಾತ್ರ ಅಂತ... ಪಾಪ ಎಡಿಟ್ ಮಾಡುವಾತನ ಹೊಟ್ಟೆ ಪಾಡು, ಸರಿ ಇಲ್ಲ ಎಡಿಟ್ ಮಾಡೋಲ್ಲ ಅನ್ನೋಕೆ ಆಗೋಲ್ಲ.. ಹೆತ್ತವರಿಗೆ ಹಗ್ಗಣ ಮುದ್ದು ಅಂತಾರಲ್ಲಾ ಹಾಗೇ ಇದು... ಧೈರ್ಯ ತಗೋಳಿ ಅಂತ ನಿರ್ದೇಶಕ (ಅ)ಭಯ ಕೊಟ್ಟಿರ್ತಾನೋ ಏನೋ?!.. ಆದ್ರೂ ನೋಡುಗರಿಗೆ ಹಿಂಸೆ ಕೊಡೋ ಸಿನೆಮಾ ತಿಗಿಬಾರ್ದು ಅಂತಾ ಯಾವಾಗ ಗೊತ್ತಾಗತ್ತೋ ಈ ಸಿನೇಮಾ ಮಂದಿಗೆ.. ಆದರೂ ಅನೇಕರು ಅಧ್ಬುತ ಚಿತ್ರಗಳನ್ನು ತೆಗೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ ಉದಾಹರಣೆಗೆ... A wednesday... ಆದ್ರೂ ದಟ್ಟ ದರಿದ್ರವಾದ ಚಲನಚಿತ್ರ ನೋಡೋ ಕರ್ಮ ನೋಡುಗರಿಗೆ ಮಾತ್ರ ತಪ್ಪಿಲ್ಲ.. ಓಳ್ಳೆಯ ಬರಹ.. ಹೀಗೆ ಬರಿತಾ ಇರಿ.