Wednesday, January 21, 2009

ನಾನೂ CCNA!!

ಕೊನೆಗೂ ನಾನು ಸಿಸ್ಕೋ ಪ್ರಮಾಣೀಕರಿಸಿದ ಜಾಲಬಂಧ ಭಾಗೀದಾರ(Cisco Certified Network Associate)!
ಒಂದು ಸರ್ತಿ ಪರೀಕ್ಷೆಯಲ್ಲಿ just fail ಆದ ಮೇಲೆ ಎರಡನೇ ಪ್ರಯತ್ನದಲ್ಲಿ just pass ಆಗಿರುವುದು ಮನಸ್ಸಿಗೆ ಖುಶಿ ತಂದಿದೆ :-)
ಪಾಸ್ ಆಗಲು 825 ಅಂಕಗಳು ಬೇಕು. ಮೊದಲನೇ ಪ್ರಯತ್ನದಲ್ಲಿ 822 ಬಂದರೆ ಎರಡನೇ ಬಾರಿ 871.
ಇನ್ನು ಮುಂದೆ ಯಾವುದೇ ಪರೀಕ್ಷೆ ಬರೆಯಬಾರದು ಅಂತ ಅದರ ಜೊತೆಗೇ ನಿರ್ಧಾರವನ್ನೂ ತೆಗೆದುಕೊಂಡಿದ್ದೇನೆ :P
ಅಂತೂ ಈ ಪರೀಕ್ಷೆ ತೆಗೆದುಕೊಂಡು ಪಾಸಾಗಿರುವ ಲಕ್ಷಾಂತರ ಜನರಲ್ಲಿ ನಾನೂ ಒಬ್ಬಳು ಅಂತ ಹೇಳಲು ನನಗೆ ತುಂಬಾ ತುಂಬಾ ಖುಶಿಯಗುತ್ತಿದೆ :-)

15 comments:

Harish - ಹರೀಶ said...

ಜ್ಯೋತಿ ಅವರೇ.. ಅಭಿನಂದನೆಗಳು.

ಇನ್ನು ಯಾವ ಪರೀಕ್ಷೆ ಬರೆಯೊಲ್ಲ ಅನ್ನೋದೇನೋ ಸರಿ.. ಆದರೆ ಯಾವ ಪರೀಕ್ಷೆಯನ್ನೂ ಪಾಸಾಗಲ್ಲ ಅಂತ ನಿರ್ಧಾರ ಮಾಡ್ಬೇಡಿ.. ಜೀವನವೇ ಒಂದು ದೊಡ್ಡ ಪರೀಕ್ಷೆ :-)

pradeep said...

Congrats jyothi!!! :)

ಜ್ಯೋತಿ said...

ಹರೀಶ್,
ಧನ್ಯವಾದಗಳು :-)
ನನ್ನ ಬ್ಲಾಗಿಗೆ ಸ್ವಾಗತ!

ನೀವು ಹೇಳೋದೂ ನಿಜ. ಆದ್ರೂ ಜೀವನದ್ ಪರೀಕ್ಷೇನ evaluate ಯಾರ್ ಮಾಡ್ತಾರೆ?

ಹೀಗೇ ಬರ್ತಾ ಇರಿ

@Pradeep
Thanks :-)

Lakshmi S said...

ಅಭಿನಂದನೆಗಳು ಜ್ಯೋತಿಯವರೇ...ಅಂತು ನಾವಿಬ್ಬರೂ ಒಂದೊಂದು ಪರೀಕ್ಷೆಯಲ್ಲಿ ಪಾಸ್ ಆಗಿದ್ದೇವೆ ! :-)

Ashok Uchangi said...

ಅಭಿನಂದನೆಗಳು!
ಸಾಫ್ಟವೇರ್ ಬಿದ್ದಿದೆ.ಹಾರ್ಡ್ವೇರ್ ಮತ್ತು ನೆಟ್ವರ್ಕಿಂಗ್ ಓಕೆ ಅಲ್ಲವೇ....ಸಂತಸಪಡಬೇಕಾದ ವಿಷಯ ತಾನೇ?
ಅಶೋಕ ಉಚ್ಚಂಗಿ
http://mysoremallige01.blogspot.com/

ಸಿಮೆಂಟು ಮರಳಿನ ಮಧ್ಯೆ said...

ಜ್ಯೋತಿಯವರೆ..

ಪರೀಕ್ಷೆಯಲ್ಲಿ ಪಾಸಾಗಿದ್ದಕ್ಕೆ..

ಅಭಿನಂದನೆಗಳು...

ಸುಧೇಶ್ ಶೆಟ್ಟಿ said...

Jyothi avare

nimma blogige nanna modala bheti... thumba istavaayithu nimma barahagalu..

"avanu hodaaga" odi manasu bhaaravaayithu.. aadare neevu aa dukhavannu metti nintha reethige Hats off...

heege bareyuththiri....

ಜ್ಯೋತಿ said...

ಹೌದು ಲಕ್ಶ್ಮಿಯವರೇ, ಆದರೆ ನಿಮ್ಮಷ್ಟು ಓದಿಲ್ಲ!

ಧನ್ಯವಾದಗಳು ಪ್ರಕಾಶ್ ಸರ್ :-)

ಅಶೋಕ್ ಅವರೇ,
ನನ್ನ ಬ್ಲಾಗಿಗೆ ಸ್ವಾಗತ :-)
ಸಧ್ಯಕ್ಕೆ networking ಪರ್ವಾಗಿಲ್ಲ, ಆದರೆ ಎಲ್ಲಾ ಬ್ಯಾಂಕ್ ಗಳು ಇದೇ ರೀತಿ ನೆಲಕಚ್ಚುತ್ತಿದ್ದರೆ ನಾವೂ ಮುಳುಗಬೇಕಾಗತ್ತೆ, ಅಲ್ವಾ?

ಸುಧೇಶ್ ಅವರೇ,
ನನ್ನ ಬ್ಲಾಗಿಗೆ ಬಂದದ್ದು ಸಂತೋಷ.
ಕೆಲವೊಂದು ವಿಷಯಗಳು ನಮ್ಮ ಕೈಯಲ್ಲಿ ಇಲ್ಲ, ಕಾಲವೇ ಎಲ್ಲದಕ್ಕೂ ಪರಿಹಾರ ಕೊಡೊತ್ತದೆ.
ಹೀಗೇ ಬರುತ್ತಾ ಇರಿ. ನಿಮ್ಮ ಬ್ಲಾಗನ್ನು ನಾನು ಓದುವ ಬ್ಲಾಗುಗಳಿಗೆ ಸೇರಿಸುತ್ತೇನೆ.

shivu said...

ಜ್ಯೋತಿ ಮೇಡಮ್,

ಅಭಿನಂದನೆಗಳು........

quirkygirl said...

Congratulations!! gathered that you became the CCNA since it was it in english.Wish i could read the whole blog!!do you use that translator tool? do you have the posts written in english?

ಜ್ಯೋತಿ said...

ಧನ್ಯವಾದಗಳು ಶಿವು. :-)

@Aparna,
Thanks :-)
Initially I started writing in English, but I realized that I am more comfortable with Kannada. I use http://quillpad.in/kannada/ or Google Translator or Baraha to type in kannada.

Greeshma said...

antu pass aadeya?! good good :)
batte bloge ge sadayadalle celebrate maaDuva ;)

ಅಸತ್ಯ ಅನ್ವೇಷಿ said...

ಕಂಗ್ರಾಟ್ಸ್
ಇನ್ನು ಮುಂದೆ ಪರೀಕ್ಷೆ ಬರೆಯೋ ಕೆಲಸ ಇಲ್ಲ. ಏನಿದ್ದರೂ ಕ್ಲಿಕ್ ಮಾಡಿ answer choose ಮಾಡೋ ಪರೀಕ್ಷೆಗಳು ಮಾತ್ರ. ಲಕ್ಷಾಂತರ ಜನರಲ್ಲಿ ಒಬ್ಬರಾಗಿದ್ದೀರಿ... ನಾವೆಲ್ಲಾ ಪರೀಕ್ಷೆ ಬರೆಯದ ಕೋಟ್ಯಂತರ ಜನರಲ್ಲಿ ಸೇರಿಹೋಗಿದ್ದೇವೆ. :)

Shrinidhi Hande said...

congrats!..

ಗಿರೀಶ ರಾಜನಾಳ said...

congrats....
sorry for the late reply....
keep writing....