Friday, January 16, 2009

ನಾಯಿಗಳೂ, ಹಸುಗಳೂ...

ಮೊದಲು ನಾಯಿಗಳ ಬಗ್ಗೆ ಮಾತಾಡೋಣ:
ನಾನು ದಿನಾ ಆಫೀಸ್ ಕ್ಯಾಬ್ ಹಿಡಿಯಕ್ ಹೋಗೋ ದಾರೀಲಿ ಏನಿಲ್ಲಾ ಅಂದ್ರೂ 10-15 ಬೀದಿ ನಾಯಿಗಳ ಕಾಟ.
ಅವುಗಳು ಆಡೋದ್ ನೊಡಿದ್ರೆ ಒಂದೊಂದು ಗಲ್ಲಿನೂ ಒಂದೊಂದು ನಾಯಿಗ್ ಸೇರಿದ್ದು ಅಂತ ಅನ್ಸತ್ತೆ. ಅಪ್ಪಿ ತಪ್ಪಿ ಆ ಬೀದಿ ನಾಯಿ ಈ ಬೀದಿಗ್ ಬಂತು ಅಂದ್ರೆ ಆವಾಗ್ ಜಗ್ಳ ಶುರು. ಒಂದು ಇನ್ನೊಂದನ್ನು ನೋಡಿ ಬೊಗಳೊದೇನೋ, ಆ ಕಡೆಯಿಂದ ಈ ಕಡೆ ಅಟ್ಟಿಸ್‌ಕೊಂಡ್ ತಾನೂ ಓಡೋದೇನೋ!
ಒಂಥರಾ ಒಂದ್ ಬೀದೀಗೆ ಒಂದ್ ಡಾನ್, ಅಲ್ವಾ?
ಆದ್ರೆ ರಾತ್ರಿ ಎಲ್ಲಾ ಒಂದೇ party! ಎಲ್ಲ ಜೊತೆಗೇ ಬೊಗಳ್ತವೆ, ಊಳಿಡ್ತವೆ! ನಿದ್ದೇನೂ ಹಾಳು.

ಇನ್ನು ಹಸುಗಳ ಬಗ್ಗೆ ಮಾತಾಡೋಣ:
ನಾನ್ ಹೊರಡೋದೋ ಕ್ಯಾಬ್ ಗೆ ಇನ್ನೇನ್ 2 ನಿಮಿಷ ಇರ್ಬೇಕು ಅನ್ನೋವಾಗ. 0.5 ಕಿ.ಮೀ. ಓಡ್ಕೊಂಡ್ ಹೋಗ್ಬೇಕು. ಆದ್ರೆ ಈ ಹಸುಗಳು ದಾರಿ ಬಿಡ್ಬೇಕಲ್ಲಾ. ಅಷ್ಟ್ ಬೆಳಗ್ಗೇನೇ ಆವ್ರದ್ದೂ ಹುಲ್ಲ್ ಹುಡುಕೋ ಕೆಲ್ಸಾ ಶುರು ಆಗತ್ತೆ ಅನ್ಸತ್ತೆ. ಅವಕ್ಕೇನು ಕ್ಯಾಬ್ ಮಿಸ್ ಆಗೋ ತಲೆನೋವಾ, ಅವಕ್ಕೆ ಎಷ್ಟ್ ಬೇಕೋ ಅಷ್ಟ್ ನಿಧಾಆಆಆನಕ್ಕೆ ಹೋಗ್ತಿರತ್ವೆ. ಮುಂದೆ ಹೋಗಕ್ಕೆ ದಾರಿ ಬಿಡಲ್ಲ, ಸರಿ ಅವುಗಳ ಬಲಗಡೆಯಿಂದ ಹೋಗೋಣ ಅಂದ್ರೆ ವಾಹನಗಳ ಕಾಟ! ಪಾಪ ನಮ್ ಕ್ಯಾಬ್ ಡ್ರೈವರ್ ಒಳ್ಳೆಯವರು, ನಂದೇ ಮೊದಲ ಪಿಕಪ್ ಆಗಿರೋದಿಂದ ಕಾಯ್ತಾರೆ! ಇಲ್ಲ ಅಂದಿದ್ರೆ ದಿನಾ ಕ್ಯಾಬ್ ಗೆ ಟಾಟಾ ಹೇಳ್ಬೇಕಾಗ್ತಿತ್ತು.

ಅದಕ್ಕೆ ಇನ್ಮೇಲೆ ಹಸುಗಳಿಗೆ traffic rules ಹೇಳ್ಕೊಡ್ಬೇಕು ಹಾಗೂ ಪೋಲೀಸರು ನಾಯಿ ಡಾನ್ ಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು ಅಂತ strike ಮಾಡೋಣ ಅಂತ ಯೋಚಿಸ್ತಿದೀನಿ. ಏನಂತೀರಿ?

5 comments:

shivu said...

ಜ್ಯೋತಿ ಮೇಡಮ್,

ನೀವು ನಾಯಿ ಮತ್ತು ಹಸುಗಳನ್ನು ಕಂಪ್ಲೇಂಟ್ ಮಾಡುವ ಮೊದಲು ಒಂದು ಹತ್ತು ನಿಮಿಷ ಬೇಗ ಮನೆ ಬಿಟ್ಟರೆ ನಿಮಗೆ ಇವುಗಳಿಂದ ಖಂಡಿತ ತೊಂದರೆ ಇಲ್ಲ.....ಮತ್ತು ನೀವು ಇನ್ನೂ ನಿದಾನವಾಗಿ ಅವುಗಳ ಮತ್ತಷ್ಟು ದಿನಚರಿಯನ್ನು ಗಮನಿಸಲು ಸಾಧ್ಯವಾಗಿ ನಮಗೆ ಇನ್ನಷ್ಟು ಹೊಸ ವಿಚಾರಗಳು ನಿಮ್ಮ ಬ್ಲಾಗಿನಿಂದ ತಿಳಿಯಬಹುದು ಏನಂತೀರಿ.......

ಮತ್ತೆ ನನ್ನ ಬ್ಲಾಗಿನಲ್ಲಿ ನಾನು ಇದುವರೆಗೂ ಬರೆದಿರುವುದರಲ್ಲೇ ಅತ್ಯಂತ ಭಾವುಕವೆನಿಸುವ ಲೇಖನವನ್ನು ಹಾಕಿದ್ದೇನೆ....ನೀವು ಬಿಡುವು ಮಾಡಿಕೊಂಡು ಬಂದು ನೋಡಿ......ಥ್ಯಾಂಕ್ಸ್...

Anonymous said...

ಶಿವು ಅವರೇ,
ಬೆಳಗ್ಗೆ 10 ನಿಮಿಷ ಬೇಗ ಹೊರಡುವುದು ಕಷ್ಟ ಅಲ್ಲ, ಆದ್ರೆ ಬೆಳಗ್ಗೆ 10 ನಿಮಿಷ ಬೇಗ ಏಳ್ಬೇಕಲ್ವಾ, ಅದೇ ತುಂಬಾ ಕಷ್ಟ!

ನಿಮ್ಮ ಬ್ಲಾಗ್ ಓದಿದೆ, ಏನು ಹೇಳೋದೋ ಗೊತ್ತಾಗ್ಲಿಲ್ಲ.
ಮನ ಮುಟ್ಟುವಂತಾ ಲೇಖನ.
ನನಗೂ ಕಳೆದು ಹೋದ ದಿನಗಳು ನೆನಪಾಗುತ್ತಿವೆ.
ದಿನ ಹೋದಂತೆ ಎಲ್ಲಾ ದುಖ ತಾನೇ ತಾನಾಗಿ ಕಡಿಮೆ ಆಗುತ್ತದೆ ಅನ್ನುವುದು ನನ್ನ ಸ್ವಂತ ಅನುಭವ. ಕಾಲಾಯ ತಸ್ಮೈ ನಮಃ
ಈಗ ವಿಂಧ್ಯಾ ತಂಗಿಯಾಗಿ ಬಂದಿರುವುದರಿಂದ ನೋವು ಮರೆತು ಆನಂದವಾಗಿರಿ.
ಮುಂದೆ ಏನು ಹೇಳುವುದಕ್ಕೂ ನನಗೆ ಮಾತು ಬರುತ್ತಿಲ್ಲ.

Lakshmi S said...

strike aa ? naanu serkotini :) naanu kelsa maadalla ellu...aadru, for the sake of "naayi bhaya" , nim jote idini :)

Anonymous said...

ಲಕ್ಷ್ಮಿ ಅವರೇ,
ನಿಮ್ಮ ಸಹಕಾರಕ್ಕೆ ತುಂಬು ಹೃದಯದ ಕೃತಜ್ಞತೆಗಳು. :-)
ಎಲ್ಲರೂ ಕೈ ಒಂದಾಗಿಸಿದರೆ ಭಯೋತ್ಪಾದಕಾರನ್ನೇ ಮಟ್ಟ ಹಾಕಬಹುದಂತೆ, ಇನ್ನು ನಾಯಿಗಳೇನು ಬಿಡಿ!

ಅಸತ್ಯ ಅನ್ವೇಷಿ said...

ನಾಯಿಗಳನ್ನು ಮುಟ್ಟಿದ್ರೆ ಜಾಗ್ರತೆ...!!!

ನಾವಿದ್ದೀವಿ ಬೊಗಳೋರ ಪರ!!!

ನಮಗೂ ನಾಯಿ-ದನ ಕಾಟ ಇದ್ದೇ ಇದೆ ಅಂತ ಯಾರಿಗೂ ಹೇಳ್ಬೇಡ್ರೀ ಮತ್ತೆ...