Sunday, December 21, 2008

ಕಳೆದ ವಾರ ನೋಡಿದ ಸಿನೆಮಾಗಳು

1. Rab ne bana di Jodi
ನಾವು 5 ಜನ Inox ಗೆ ಹೋಗಿ ಈ ಸಿನಿಮಾ ನೋಡಿದ್ವಿ. ನನ್ friend ಒತ್ತಾಯ ಮಾಡಿದ್ದಕ್ಕೆ ನೊಡ್ಬೇಕಾಯ್ತು.
ಶಾರುಖ್ ಖಾನ್ ಅಜ್ಜನ್ ತರ ಕಾಣಿಸ್ತಾನೆ(ಅಜ್ಜಾನೆ ಅಂತೀರಾ?). ಹುಡುಗಿ ನೋಡೋಕೆ ಚೆನ್ನಾಗಿದಾಳೆ, ಸಕತ್ತಾಗಿ ಡ್ಯಾನ್ಸ್ ಮಾದ್ತಾಳೆ. ಸಿನಿಮಾ ಬಗ್ಗೆ ಹೇಳಕ್ಕೆ ಇನ್ನೇನೂ ಇಲ್ಲ :P
ಕಥೆ ಅಂತೂ ಏನೂ ಇಲ್ಲ ಅನ್ಬಹುದು. ಶಾರುಖ್ ಖಾನ್ ಗೆ ಎಲ್ಲೋ split personality ಆಗಿದೆಯಾ ಇಲ್ಲ ನಂಗೆ ತಲೆ ಕೆಟ್ಟೋಗಿದೆಯಾ ಅಂತ ಅನುಮಾನ ಆಗ್ತಿತ್ತು!
ಕತೆ ಹೇಳಾಣ ಅಂದ್ರೆ, ಶಾರುಖ್(ಸೂರಿ) ಅನುಷ್ಕ(ತಾನಿ) ಮದುವೆಗೆ ಅಂತ ಹೋಗಿರ್ತಾನೆ. ಅಲ್ ನೋಡಿದ್ರೆ ದಿಬ್ಬಣ ಬರ್ತಿದ್ದ ಬಸ್ಸು ಅಫಗಾತ ಆಗಿ ಬಸ್ಸಲ್ಲಿ ಇರೋರೆಲ್ಲ ಸತ್ತೋಗ್ತಾರೆ. ತಾನಿ ಅಪ್ಪ ತಾನಿ ಕೈಯನ್ನ ಸೂರಿ ಕೈಯಲ್ಲಿ ಇಟ್ಟು ಅವ್ನೂ ಶಿವನ್ ಪಾದ ಸೇರ್‌ಕೋತಾನೆ.
ಮದುವೆ ಆಗಿ ಅವ್ಳನ್ನ ಅಮೃತಸರ್ ಕರ್ಕೊಂಡ್ ಬರ್ತಾನೆ. ಅವ್ಳು ಅಂತಾಳೆ "ನಂಗೆ ಸ್ವಲ್ಪ ಟೈಮ್ ಕೊಟ್ರೆ ನಾನು ಹಳೆ ತಾನಿ ನ ಸಾಯ್ಸಿ ಹೊಸ ತಾನಿ ಆಗ್ತೀನಿ. ಒಳ್ಳೇ ಹೆಂಡ್ತಿ ಆಗ್ತೀನಿ, ಆದ್ರೆ ನಿಮ್ಮನ್ ಪ್ರೀತಿ ಮಾಡಕ್ಕೆ ಮಾತ್ರ ಆಗಲ್ಲ." ಶಾರುಖ್ ಯಾವಾಗ್ಲೂ ದೇವರ ಪಾತ್ರಾನೇ ತಾನೇ ಮಾಡೋದು. ಸರಿ ಅಂತಾನೆ ಅವ್ನೂವೇ. ಆದ್ರೆ ಮನ್ಸ್ ತುಂಬಾ ಪ್ರೀತಿ!
ಅವ್ಳನ್ನ ಹೆಂಗಾದ್ರೂ impress ಮಾಡ್ಬೇಕು ಅಂತ full look change! ಕೂದ್ಲನ್ನ ಸ್ವಲ್ಪ ಬೇರೆ ತರ ಬಾಚ್‌ಕೊಂಡು, ಕನ್ನಡಕ ಹಾಕ್ಕೊಂಡ್ರೆ ಮುಖ ಗುರ್ತ್ ಹಿಡೀದಿರೊವಷ್ಟು ಬೇರೆ ಕಾಣ್ಸತ್ತೆ ಅನ್ನೋ ಓಬೀರಾಯನ ಕಾಲದ concept. ಅವ್ಳು ಸೇರ್‌ಕೊಂಡ್ dance class ಗೆ ಇವ್ನೂ ಸೇರ್‌ಕೋತಾನೆ. ಅಲ್ಲಿ ನೊಡಿದ್ರೆ salsa partner ಆಗಿ ಇವ್ನೇ ಜೊತೆಯಾಗ್ತಾನೆ(ಅವ್ಳು ಗುರ್ತ್ ಹಿಡಿಯೋದೇ ಇಲ್ಲ!). ಮುಂದೆ ಅವ್ಳಿಗೆ ಎಷ್ಟೆಲ್ಲಾ ತಲೆ ಕೆಡಿಸ್ತಾನೆ ಅನ್ನೋದನ್ನ ನೀವೇ ನೋಡಿ! ಮಜಾ ಮಾಡಿ!:P
ನನ್ನ Rating: 1/5

2. Dasvidaniya
ತುಂಬಾ ಚೆನ್ನಾಗಿದೆ ಈ ಪಿಕ್ಚರ್! ವಿನಯ್ ಪಾಠಕ್ ತಾನು ತುಂಬಾ ಚೆನ್ನಾಗಿ acting ಮಾಡ್ತೀನಿ ಅನ್ನೋದನ್ನ ಮತ್ತೆ ತೋರ್ಸಿದಾರೆ.
ಇದ್ರಲ್ಲಿ ಕತೆ ಏನಪ್ಪಾ ಅಂದ್ರೆ ವಿನಯ್ ಪಾಠಕ್(ಅಮರ್) ಒಬ್ಬ ಸಾಮಾನ್ಯ ಮನುಷ್ಯ (ನಮ್ಮ ನಿಮ್ಮೆಲರ ಹಾಗೆ). ದಿನಾ ಈ ದಿನ ಏನೇನ್ ಮಾಡ್ಬೇಕು ಅನ್ನೋದನ್ನ Things to do list ಅಲ್ಲಿ ಬರೀಯೋದು ಅಭ್ಯಾಸ. ಇರೋದು ಅಮ್ಮನ ಜೊತೆ. ಕೆಲಸ: account manager. ಕತ್ತೆ ತರ ದುಡಿದ್ರೂ ದಿನಾ boss ಹತ್ರ ಬೈಸ್ಕೊಳ್ಳೋದು ಅಭ್ಯಾಸ ಆಗಿರತ್ತೆ. ಹೊಟ್ಟೆಯಲ್ಲಿ ಏನೋ ನೋವು ಅಂತ ಅದೇನೇನೋ test ಮಾಡ್ಸಿದಾಗ ಗೊತ್ತಾಗತ್ತೆ ಹೊಟ್ಟೆಲಿ ಕ್ಯಾನ್ಸರ್ ಇದೆ ಅಂತೆ ಅದೂ ಕೊನೇ ಹಂತದಲ್ಲಿ. ಇನ್ನ್ ಮೂರೇ ತಿಂಗ್ಳೂ ಬದುಕಿ ಇರೋದು ಅಂತ. ಮತ್ತೆ office ಹೋಗಾಕ್ ಮುಂಚೆ list ಮಾಡೊವಾಗ ಅನ್ಸತ್ತೆ, ಎಷ್ಟೊಂದೆಲ್ಲ ಆಸೆ ಇತ್ತು, ಏನೂ ಮಾಡ್ಲೇ ಇಲ್ಲ ಇಲ್ಲಿ ತನ್ಕ. ಸಾಯೋಕ್ ಮುಂಚೆ ಏನೇನ್ ಮಾಡ್ಬೇಕು ಅಂತ ಆವಾಗ list ಮಾಡಕ್ ಶುರು ಮಾಡ್ತಾನೆ. ಮುಂದೆ ತುಂಬಾ ಚೆನ್ನಾಗಿದೆ.
ನೋಡಿ ಮಜಾ ಮಾಡಿ :-)
ಇದನ್ ನೋಡಿದ್ ಮೇಲೆ ನಂಗೂ "Things to do before I die" list ಮಾಡಾಣ ಅಂತ ಅನಿಸ್ತಿದೆ.
ಜೊತೆಗೆ ಈ video ನೆನಪಾಯ್ತು
ನನ್ನ Rating: 3.5/5

3. Oye Lucky Lucky Oye
ಇದೂ ಅಷ್ಟೇ. ಇಷ್ಟ ಆಯ್ತು ಸಿನಿಮಾ. ಇದ್ರಲ್ಲಿ Lucky ಒಬ್ಬ ಕಳ್ಳ. ಅಷ್ಟೊಂದ್ ಕಥೆ ಇಲ್ದೇ ಇದ್ರೂ ಒಂತರಾ ಚೆನ್ನಾಗಿದೆ.
ಅವ್ನು ಅದ್ ಹೆಂಗ್ ಕಳ್ಳ ಆಗ್ತಾನೆ, ಅದ್ ಹೆಂಗ್ ಕಳ್ತನ ಮಾಡ್ತಾನೆ ಅಂತ ಚೆನ್ನಾಗ್ ತೆಗ್ದಿದಾರೆ. ನಿಜ ಅಂತ ಅನಿಸ್ದೆ ಇದ್ರೂ acting ಸೂಪರ್. ಕಳ್ತನ ಅದ್ ಹೆಂಗ್ ಚಟ ಆಗ್ ಬಿಡತ್ತೆ ಅನ್ನೋದನ್ನೂ ಚೆನ್ನಾಗ್ ತೆಗ್ದಿದಾರೆ.
ನೋಡ್ಲೇಬೇಕಾದ movie.
ನನ್ನ Rating: 4/5


ಯಾಕೆ ಚೆನ್ನಾಗಿಲ್ದೆ ಇರೋ movie ಬಗ್ಗೆ ಜಾಸ್ತಿ ಬರ್ದಿದೀನಿ ಅಂತ ನೀವ್ ಕೇಳ್ಬಹುದು. ನನ್ ತರ ನೀವೂ ಸಮಯ ಹಾಗೂ ದುಡ್ಡು ದಂಡ ಮಾಡ್ದೇ ಇರ್ಲಿ ಅನ್ನೋ ಸದಾಭಿಪ್ರಾಯ!
ಇದನ್ನ ಓದಿದ್ ಮೇಲೂ ನೀವ್ ಹೋದ್ರೆ ಅದು ನನ್ ತಪ್ಪಲ್ಲ!
ಅದಕ್ಕೆ ನೀವೇ ಹೊಣೆಗಾರರು :P.
ಮಜಾ ಮಾಡ್ತಾ ಇರಿ!

6 comments:

ಸಿಮೆಂಟು ಮರಳಿನ ಮಧ್ಯೆ said...

ರಬ್ ನೆ ಬನಾದಿ ಜೋಡಿ.. ಸಾಮಾನ್ಯವಾಗಿದೆ...
ಉಳಿದವುಗಳನ್ನ ನೋಡಲಾಗಲಿಲ್ಲ...
ನಿಮ್ಮ ವಿಮರ್ಶೆ ಚೆನ್ನಾಗಿದೆ
ಬರವಣಿಗೆ ಕೂಡ...
ಧನ್ಯವಾದಗಳು....

shivu K said...

ಜ್ಯೋತಿ ಮೇಡಮ್,

ನೀವು ನನ್ನ ಬ್ಲಾಗಿಗೆ ಬಂದದ್ದು ಖುಷಿಯಾಯಿತು. ಜೊತೆಗೆ ನನ್ನ ಬ್ಲಾಗನ್ನು ನೀವು ಹಿಂಬಾಲಿಸುತ್ತಿರುವುದು ಕೂಡ ಖುಷಿಯಾಯಿತು. ನಿಮ್ಮ ಬ್ಲಾಗಿನಲ್ಲಿರುವ ನಿಮ್ಮ ಸಿನಿಮಾ ರಿವ್ಯೂ ಓದಿದೆ. oye lucky lucky oye. ಸಿನಿಮಾ ನಾನು ನೋಡ ಬೇಕೆನಿಸಿದೆ. ನಿಮ್ಮ ರಿವ್ಯೂ ಚೆನ್ನಾಗಿದೆ...
ಮತ್ತು ಇನ್ನೊಂದು ವಿಚಾರವನ್ನು ನಾನು ಹೇಳಬೇಕಿದೆ. ನನ್ನ ಮತ್ತೊಂದು ಬ್ಲಾಗ್ "ಛಾಯಾಕನ್ನಡಿ" ಯಲ್ಲಿ ನಾನೊಂದು ಸಿನಿಮಾ ಬಗ್ಗೆ ರಿವ್ಯೂ ಹಾಕಿದ್ದೇನೆ. ಆ ಸಿನಿಮಾವಂತೂ ನೋಡಲೇ ಬೇಕಾದಂತ ಸಿನಿಮಾ. ಅದನೊಮ್ಮೆ ನೀವು ಓದಿದರೆ ನಿಮಗೂ ಖುಷಿಯಾಗಬಹುದು ಅನ್ನಿಸುತ್ತ್ತೆ. ಮತ್ತು ಅಲ್ಲಿರುವ ಇತರ ಲೇಖನಗಳನ್ನು ಓದಿ. ಮತ್ತೆ ನಿಮ್ಮ ಬ್ಲಾಗನ್ನು ನಾನು ಲಿಂಕಿಸಿಕೊಳ್ಳುತ್ತೇನೆ....ಹೀಗೆ ಬರುತ್ತಿರಿ......

ಸಂತೋಷ್ ಚಿದಂಬರ್ said...

3 ಸಿನಿಮಾನು ಒಂದೇ ದಿನ ನೋಡಿರೂ ಹಾಗಿದೆ .. :)

ಜ್ಯೋತಿ said...

@ಸಂತೋಷ್
ಒಂದೇ ದಿನ ಎಲ್ಲಾ ನೋಡಿದ್ರೆ ಖಂಡಿತಾ ಬರಿಯಕ್ಕಾಗ್ತಿರ್ಲಿಲ್ಲ!

ಜ್ಯೋತಿ said...

ಶಿವು ಅವರೇ,
ನಿಮ್ಮ ಎರಡೂ ಬ್ಲಾಗ್ ಗಳು ತುಂಬಾ ಚೆನ್ನಾಗಿವೆ.
"Children of Heaven" ಬಗ್ಗೆ ಓದಿದೆ.
ಆದಷ್ಟು ಬೇಗ ಸಿನಿಮಾ ನೋಡಿ ಅಭಿಪ್ರಾಯ ತಿಳಿಸುತ್ತೇನೆ.
ಹೀಗೇ ಬಂದು ಓದಿ ಸಲಹೆ ನೀಡುತ್ತಾ ಇರಿ. :-)

ಜ್ಯೋತಿ said...

ಪ್ರಕಾಶ್ ಅವರೇ,
ಧನ್ಯವಾದಗಳು :-)