Monday, December 15, 2008

ಪ್ರವಾಸ ಕಥನ: ತೊಗರೆ ಹಂಕಲ್ ತೋಟ

ನಾವು ಆಫೀಸಿಂದ ಚಿಕ್ಕಮಗಳೂರಿನ ಹತ್ತಿರ ಇರುವ ಹಂಕಲ್ ತೋಟ ಎನ್ನುವ ಜಾಗಕ್ಕೆ ಹೋಗಿದ್ದೆವು.
ಅಲ್ಲಿನ ಕೆಲವು ಸಂಗತಿಗಳು:
ಹೊರಟಿದ್ದು:
ಬೆಳಗ್ಗೆ ೫ ಗಂಟೆಗೆ ಹೊರಡ್ಬೇಕಿತ್ತು. ಅದಕ್ಕೆ ೪ ಗಂಟೆಗೆ ಅಲಾರ್ಮ್ ಇಟ್ಟು ೧.೩೦ ಗೆ ಮಲಕ್ಕೊಂಡೆ.೩ ಗಂಟೆಗೆ ಎಚ್ರ ಆದ್ರೂ, ಅಲಾರ್ಮ್ ಆಗೋದನ್ನೇ ಕಾಯ್ತಾ ಸುಮ್ನೇ ಬಿದ್ಕೊಂಡಿದ್ದೆ. ೩.೩೦ಕ್ಕೆ ನನ್ ಟೀಮ್ ಮೇಟ್ ಬಾಲ ಫೋನ್ ಮಾಡಿ ಎಬ್ಬಿಸ್ದ. ಸರಿ ಇನ್ನೇನ್ ಮಲಕ್ಕೊಳ್ಳೋದು ಅಂತ ಎದ್ದೆ. ಆಮೇಲೆ ಹೊರಟು ತರುಣ್ ಬರೋದು ಕಾಯ್ತಾ ಕೂತಿದ್ದೆ.ಅಂತೂ ಇಂತೂ ೪.೪೫ ಕ್ಕೆ ಆಫೀಸ್(ಬನ್ನೇರ್ಘಟ್ಟ ರೋಡ್) ಹತ್ರ ತಲುಪಿದ್ವಿ. ಎಲ್ಲರೂ ಬಂದು ಹೊರಡೋದು ೫.೩೦ ಆಗೋಯ್ತು. ೧೮ ಜನ ಕೂರೋವಂತ ಬಸ್ಸು. ನಾವು ಹೊರಟಿದ್ದು ಒಟ್ಟು ೧೭ ಜನ ಮತ್ತು ೩ ಮಕ್ಕಳು.
ಹೋಗ್ತಾ ಬಸ್ಸಲ್ಲಿ ಆರಾಮಾಗಿ ನಿದ್ದೆ ಮಾಡ್ಬಹುದು ಅಂತ ಅಂದ್ಕೊಂಡಿದ್ದೆ. ಆದ್ರೆ ನಿದ್ದೆ ಮಾಡಕ್ಕೆ ಆಗಿಲ್ಲ! ಆಗಿಲ್ಲ ಅಂತ ಹೇಳೋದಕ್ಕಿಂತ ಯಾರೂ ನಿದ್ದೆ ಮಾಡಕ್ಕೆ ಬಿಡ್ಲಿಲ್ಲ ಅನ್ನೋದೇ ಜಾಸ್ತಿ ಸರಿಯಾಗತ್ತೆ. ಯಾರೋ ಬರ್ತೀನಿ ಅಂತ ಹೇಳಿ ಬಂದಿರ್ಲಿಲ್ಲ. ಆವ್ರನ್ನೂ ಸ್ವಲ್ಪ ಮಿಸ್ ಮಾಡ್ಕೊತಿದ್ದೆ!
ಹೋಗ್ತಾ ಮಕ್ಕಳ ಜೊತೆ ಆಟ ಆಡ್ತಾ ಹೋದ್ವಾ, ಆಗ ಸೋನಿ ಬಾಲಂಗೆ ಪ್ರಪೋಸ್ ಮಾದಿದ್ಳು. ಮುದ್ಮುದ್ದಾಗಿ "Will you marry me" ಅಂತ ಕೇಳಿದ್ಳು. ಬಾಲಂಗೆ ಅಂತೂ ಇಂತು ಒಂದ್ ಹುಡುಗಿ ಸಿಕ್ಕಿದ್ಳಲ್ಲಾ ಅಂತ ಆಡ್ಕೊಂಡು ಮುಂದೆ ಹೋದ್ವಿ.

ಹಂಕಲ್ ತೋಟದಲ್ಲಿ:
ಅಲ್ಲಿಗೆ ತಲುಪೋವಾಗ ಗಂಟೆ ೧೨ ಆಗಿತ್ತು. ಹೋದ್ ಕೂಡ್ಲೇ ಕಾಫಿ ಕೊಟ್ರು, ನಂತ್ರ ಫ್ರೆಶ್ ಆಗಿ ಊಟ ಮಾಡಿದ್ವಿ. ಊಟ ತುಂಬಾ ಚೆನ್ನಾಗಿತ್ತು. ಆಮೇಲೆ ಹುಡುಗ್ರು ಕ್ರಿಕೆಟ್ ಆಡಕ್ಕೆ ಶುರು ಮಾಡಿದ್ರು. ನಾನು ಸುಮ್ನೇ ನೋಡ್ತಾ ಕೂತಿದ್ದೆ. ಜಾಗನೆಲ್ಲ ಒಂದ್ ಸರ್ತಿ ಸರ್ವೇ ಮಾಡ್ದೆ. ನೋಡಕ್ಕೆ ತುಂಬಾ ಚೆನ್ನಾಗಿದೆ ಜಾಗ! ಎಲ್ಲಿ ನೋಡಿದ್ರೂ ಹಸಿರು, ಕಾಫೀ ತೋಟ. ಅಲ್ಲಿ ನಾವಿದ್ದಿದ್ ಮನೇನೂ ಅಷ್ಟೇ ಸ್ವಚ್ಚವಾಗಿ, ಸುಂದರವಾಗಿ ನೋಡ್ಕೊಂದಿದಾರೆ. ಎರಡ್ ದಿನ ಕಂಪ್ಯೂಟರ್ ಮುಖ ನೊಡ್ದೆ, ಆರಾಮಾಗಿ ಇರ್ಬೇಕು ಅಂದ್ರೆ ಸೂಪರ್ ಜಾಗ. ಅಲ್ಲಿ ಒಂದ್ ಮರಕ್ಕೆ ಹಗ್ಗದ ಏಣಿ ಹಂಗೆ ಇನ್ನೊಂದು ಮರದ್ ಏಣಿ ಇಟ್ಟಿದ್ರು. ನಾವೆಲ್ಲ ಮರದ್ ಏಣಿ ಹತ್ಕೊಂಡ್ ಮೇಲೆ ಬಂದ್ರೆ ರಾಜುಲು, ಅಮಿತ್ ಹಗ್ಗದ್ ಏಣಿಲಿ ಮೇಲೆ ಬಂದ್ರು. ಆಮೇಲೆ ನಾನು, ಸ್ವಾತಿ, ಸೋನಾಕ್ಶಿ ಮೇಲಿಂದ ಕ್ರಿಕೆಟ್ ನೋಡ್ತಾ ಇದ್ವಿ. ಮತ್ತೆ ಕಾಫಿ ಸಮಯ! ಆಟಾನೂ ಮುಗೀತು.


ಮುಳ್ಳಯನ ಗಿರಿ:
ಆಮೇಲೆ ಸನ್ ಸೆಟ್ ನೋಡಕ್ಕೆ ಮುಳ್ಳಯನ ಗಿರಿಗೆ ಹೋಗೋದು ಅಂತ ಹೊರಟ್ವಿ. ಹೋಗ್ತಾ ಅಂತಾಕ್ಷರೀ ಆಡಿದ್ವಿ. ನಾನು, ಅಮಿತ್, ಸ್ವಾತಿ ಬೇರೆ ಯಾರಿಗೂ ಅವಕಾಶ ಕೊಡ್ದೆ ಹಾಡಿದ್ವಿ.
ಮುಳ್ಳಯನ ಗಿರೀನೂ ಅಷ್ಟೇ, ಸಖತ್ತಾಗಿದೆ. ಕರ್ನಾಟಕದ ಅತಿ ಎತ್ತರದ ಜಾಗ ಅಂತೆ ಮುಳ್ಳಯನ ಗಿರಿ. ನಾವು ಹೋದಾಗ ಸೂರ್ಯನ ಒಂದೇ ಒಂದು ಗೆರೆ ಕಾಣಿಸ್ತಾ ಇತ್ತು. ಸೂರ್ಯ ಮುಳುಗೋದನ್ನ ನೋಡಿದ್ವಿ. ಅಲ್ಲಿ ಒಂದು ದೇವಸ್ತಾನಾನು ಇದೆ. ಒಳಗಡೆ ಹೋಗಕ್ಕಾಗಿಲ್ಲ. ಲೇಟ್ ಆಗ್ತಿತ್ತು ಅಂತ ಅಲ್ಲಿಂದ ಹೊರಟ್ವಿ. ಆದ್ರೆ ಅಲ್ಲಿಂದ ನೋಡಿದ ಗುಡ್ಡ ಬೆಟ್ಟಗಳು, ಸೂರ್ಯ ಮಾತ್ರ ನೋಡ್ಲೇಬೇಕಾದ ದೃಶ್ಯ. ವಾಪಸ್ ಬರ್ಬೇಕಿದ್ರೆ ಮಾತ್ರ ತುಂಬಾ ಭಯ ಆಗೋಯ್ತು. ಕೆಳಗಡೆ ನೋಡಿದ್ರೆ ಪ್ರಪಾತ. ರೋಡ್ ಅಲ್ಲಿ ಒಂದ್ ಬಸ್ ಹೋಗೋವಷ್ಟ್ ಜಾಗ ಮಾತ್ರ ಇತ್ತು. ಇನ್ನೋದ್ ಕಡೆ ಇಂದ ಕಾರ್ ಗೀರ್ ಏನಾದ್ರೂ ಬಂದ್ರೆ ದೇವ್ರೇ ಗತಿ! ತರುಣ್ ಅಂತೂ ಸಕತ್ ಹೆದ್ರ್ ಕೊಂಡ್ರು. ಮತ್ತೆ ನಮ್ ಹಾಡು ಶುರು. ಹೋಗ್ತಾ ಬರ್ತಾ ೨-೩ ಗಂಟೆ ಬರೀ ಹಾಡಿದೀವಿ. ವಾಪಸ್ ತೋಟ ತಲುಪೋವಾಗ ೮ ಗಂಟೆ ಆಗಿತ್ತು. ಹೊರಗಡೆ ಬೆಂಕಿ ಹಾಕಿದ್ರು(camp fire). ಚಳಿ ಅಷ್ಟೇನೂ ಇರ್ಲಿಲ್ಲ. ಆದ್ರೂ ಊಟ ಮಾಡಿ ಬಂದು ಎಲ್ಲಾರು ಅಲ್ಲೇ ಕುಳಿತ್ವಿ. ಸ್ವಲ್ಪ ಹೊತ್ತು ಮಾತಾಡಿದ್ ಮೇಲೆ ಅಲ್ಲೇ ಒಂದು ವಾಕಿಂಗ್ ಹೋದ್ವಿ. ಬೆಳದಿಂಗಳ ನಡಿಗೆ ಅಂತಾನೆ ಹೇಳ್ಬಹುದು. ಆ ಹೊತ್ತಲ್ಲಿ ತೋಟ ಇನ್ನೂ ಚೆನ್ನಾಗಿ ಕಾಣಿಸ್ತಿತ್ತು. ನೀವೂ ಎಲ್ಲಾದ್ರೂ ಹಂಕಲ್ ತೋಟಕ್ಕೆ ಹೋದ್ರೆ ರಾತ್ರಿ ಹೊತ್ತು ಜೀಪ್ ರೀಡೆಗೆ ಖಂಡಿತಾ ಹೋಗ್ ಬನ್ನಿ.

ಮರು ದಿನದ ಟ್ರೆಕಿಂಗ್:
ಬೆಳಗ್ಗೆ ಎಲ್ಲಾರು ಎದ್ದು ಕಾಫಿ ಕುಡಿಯೋದು ೭ ಘಂಟೆ ಆಗಿತ್ತು. ಸುಮಾರು ೭.೩೦ ಗೆ ಒಂದಷ್ಟ್ ಜನ ಟ್ರೆಕಿಂಗ್ ಹೊರಟ್ವಿ. ಟ್ರೆಕಿಂಗ್ ಅಂದ್ರೆ ಅದೇ ತೋಟದ ಒಳಗೆ ನಡ್ಕೊಂಡ್ ಹೋಗೋದು. ಎಲ್ಲೋ ಒಂದು ನೀರಿನ ಬುಗ್ಗೆ(water fall ಅನ್ನೋದನ್ನ ಈ ತರ ಅನುವಾದಿಸಿದೀನಿ!) ಇದೆ ಅಂತ ನಮ್ ಗೈಡ್ ಹೇಳಿದ್ದ. ಅದನ್ನೇ ನಂಬ್ಕೊಂಡು ನಾವೂ ನಡೆದ್ವಿ, ನಡೆದ್ವಿ, ನಡೆದ್ವಿ... ತೋಟದ ಒಳಗಡೆ ತಂಪಾಗಿತ್ತು. ತೋಟ ಮುಗೀತು, ಗುಡ್ಡ ಶುರುವಾಯ್ತು, ಕಲ್ಲು, ಮುಳ್ಳು ಇತ್ಯಾದಿಗಳನ್ನ ದಾಟ್ಕೊಂಡು ಎಷ್ಟ್ ನಡೆದ್ರೂ ಆ ನೀರು ಸಿಗ್ಲೇ ಇಲ್ಲ. ಹೆಚ್ಚೂ ಕಮ್ಮಿ ೬ ಕಿ.ಮೀ. ಆದ್ರೂ ನಡ್ದಿದೀವಿ. ಆ ನೀರನ್ನ ನಂಬಿಕೊಡು ನಾವ್ಯಾರೂ ನೀರೂ ತಂದಿರ್ಲಿಲ್ಲ :-(. ಸಾಕ್ ಸಾಕಾಗಿತ್ತು. ನಮ್ ಕಥೇನೆ ಹಿಂಗಾದ್ರೆ ಪಾಪ ಸೋನಾಕ್ಷಿ(ಇನ್ನೂ ೬ ವರ್ಷ) ಅದ್ ಹೆಂಗ್ ನಡೆದ್ಲೋ ಆಶ್ಚರ್ಯ ಆಗ್ತಿದೆ. ಹಸಿವು ಬಾಯಾರಿಕೆಗಳಿಂದ ನಾವೆಲ್ಲ ಒದ್ದಾಡಕ್ಕೆ ಶುರು ಮಾಡಿದ್ವಿ. ಶಿವಪ್ಪಾ ಕಾಯೋ ತಂದೆ ಹಾಡು ಹಾಡೊಡೊಂದೇ ಬಾಕಿ. ಇನ್ನ್ ನಡಿಯಕ್ಕೆ ಆಗಲ್ಲ ಅಂತ ಜೀಪ್ ಕರ್ಸಿದ್ವಿ. ಅದ್ರಲ್ಲೇ ಕೆಳಗಡೆ ಬಂದಾಯ್ತು. ೧೨ ಗಂಟೆಗೆ ತಣ್ಣಗಾದ ಇಡ್ಲಿ ವಾಡೆ ನಮ್ಮನ್ನೇ ಕಾಯ್ತಿತ್ತು!!!

ಪ್ರಯಾಣ:
ಸರಿ ಸ್ನಾನ ಗೀನ ಮಾಡಿದ್ ಮೇಲೆ ಊಟದ್ ಸಮಾಯನೂ ಆಯ್ತು. ತುಂಬಾ ರುಚಿಯಾದ ಊಟ. ಊಟ ಆದ್ ಕೂಡ್ಲೇ ನಾವು ಹೊರಡ್ ಬೇಕಿತ್ತು. ಎಲ್ಲಾರೂ ಬೇಗ ಬೇಗ ಪ್ಯಾಕ್ ಮಾಡಿದ್ವಿ. ಆಮೇಲೆ ನಮ್ ಪ್ರಯಾಣ ಶುರು!
ಪಾಪ ರಾಜುಲು ಬಾನ್ಸುರಿಗೆ ಅದೆಷ್ಟ್ ತೊಂದ್ರೆ ಕೋಟ್ವೋ. ಅಮಿತ್ ಗೆ ಕೊನೇ ತನ್ಕನೂ ಒಂದೇ ಒಂದ್ ಸ್ವರ ನುಡ್ಸಕ್ಕೆ ಆಗ್ಲಿಲ್ಲ :P.
ಹಾಸನದ್ ತನಕ ಹೆಚ್ಚಿನವರು ನಿದ್ದೆ ಮಾಡಿದ್ರು. ನಾನು, ಬಾಲ ಮತ್ತೆ ಸ್ವಾತಿ ಮಾತ್ರ ಹಾಡ್ ಹೇಳ್ತಾ ಇದ್ವಿ. ಬಾಲ ಹಿನ್ನಲೆ ಸಂಗೀತಾನೂ(background music) ಕೊಟ್ಟ! ಎಲ್ಲರಿಗೂ ಮತ್ತೆ ಜೋಶ್ ಬರಕ್ಕೆ ಒಂದ್ ಕಾಫಿ ಬೇಕಾಗಿತ್ತು.
ಕಾಫಿ ಕುಡಿದು ಅಲ್ಲಿಂದ ಹೊರಟ್ ಮೇಲೆ ಬಸ್ಸಲ್ಲಿ dumb charads(ಮೂಕಾಭಿನಯ ಅಂತ ಹೇಳ್ಬಹುದಾ?) ಆಡಿದ್ವಿ ಅಲ್ಲಿಂದ ವಾಪಸ್ ಬೆಂಗ್ಳೂರು ಬರೋವರೆಗೂ! ಏನೇನ್ ಸಿನಿಮಾ ಎಲ್ಲಾ ಮಾಡಿದ್ವಿ ಅಂತ ಈಗ ನೆನಪಿಸ್‌ಕೊಂಡ್ರೆ ಈಗ ಆಶ್ಚರ್ಯ ಆಗತ್ತೆ, ಜೊತೆಗೆ ನಗೂನೂ ಬರತ್ತೆ. Philadelphia, Reshma ki jawani, if only, victoria no203, manorama 6 feet under, ಇನ್ನೂ ಸುಮಾರು!! ರಾಜುಲು ಜೂ(zoo) ಆದ್ರು. ಹರಿ ಬಗ್ಗೆ ಹೇಳ್ದೇ ಇರೋದೇ ವಾಸಿ ;-)!
ವಾಪಸ್ ಬರ್ತಾ ಮಾತ್ರ ಸಕತ್ ಮಜಾ ಮಾಡಿದ್ವಿ!

ಮರಳಿ ಮನೆಗೆ:
ಮರಳಿ ಮಣ್ಣಿಗೆ ಅಲ್ಲ :P. ಬೆಂಗ್ಳೂರ್ ತಲಪೋವಾಗ ೧೧ ಗಂಟೆ ಆಗಿತ್ತು. ಆಮೇಲೆ ತರುಣ್ ಮನೆ ತಲಪಿಸಿದ್ರು. ೧೧.೩೦ಗೆ ಮನೆ ಸೇರಿ, ಫೋನ್ ಅಲ್ಲಿ ಸ್ವಲ್ಪ ಮಾತಾಡಿ ೧೨ ಘಂಟೆಗೆ ಮಾಲಕ್ಕೊಂಡೆ. ಇಲ್ಲಿಗೆ ನಮ್ ಪ್ರವಾಸ ಮುಗೀತು!

ಮರುದಿನ ಏಳೋವಾಗ ೧೧ ಆಗಿತ್ತು. ಮೈ ಕೈ ಎಲ್ಲ ಎಷ್ಟ್ ನೋವಾಗ್ತಿತ್ತು ಅಂದ್ರೆ ಆಫೀಸ್ಗೂ ಚಕ್ಕರ್ ಹಾಕಿ ಮತ್ತೆ ಮಾಲಕ್ಕೊಂಡೆ.

ಚಿತ್ರಗಳು ಇಲ್ಲಿವೆ: http://picasaweb.google.com/iamjyothi/HunkalWoods#

4 comments:

PaLa said...

>>ಕೆಳಗಡೆ ನೋಡಿದ್ರೆ ಪ್ರಪಾತ
ಸುಳ್ಳು

>>ಅಂತೂ ಇಂತೂ ೪.೪೫ ಕ್ಕೆ ಆಫೀಸ್(ಬನ್ನೇರ್ಘಟ್ಟ ರೋಡ್) ಹತ್ರ ತಲುಪಿದ್ವಿ

ಹನಿವೆಲ್ಲಾ?

Anonymous said...

ಪಾಲ ಅವರೇ,
ನಾನು ನೋಡಿದ ಹಾಗೆ ಅಲ್ಲಿದ್ದದ್ದು ಪ್ರಪಾತವೆ, ಯಾಕೆ ಸುಳ್ಳು ಅಂತ ಹೇಳುತ್ತಿದೀರ?
ನಮ್ಮ ಆಫೀಸ್ ಸುಬ್ರಮಣ್ಯ ಆರ್ಕೆಡ್ ಅಲ್ಲಿ ಇದೆ, ಸಿಸ್ಕೋ.

PaLa said...

ಸುಮ್ನೆ ತಮಾಷೆಗಂದೆ ಅಷ್ಟೆ,, ಗುಡ್ಡದ್ ಪಕ್ಕ ಪ್ರಪಾತ/ಕಣಿವೆ ಇರೋದು ಸಹಜ ಅಲ್ವಾ ಅದಿಕ್ಕೆ.

Anonymous said...

ಓಹ್, ಸರಿ :-)