Wednesday, December 10, 2008

ಬೆಂಗಳೂರಿನಲ್ಲಿ ಆಟೋಗಳು!

ಹ್ಮ್! ಮಲೆಗಳಲ್ಲಿ ಮದುಮಗಳು, ಜೊತೆ ಪ್ರಾಸಬಧ್ಧವಾಗಿರ್ಲೀ ಅಂತ ಈ ಹೆಸ್ರು ಇಟ್ಟಿದೀನಿ.
ಕ್ಯಾಬ್ ಎರಡು ದಿನ ಇರ್ಲಿಲ್ಲ. ಆಗ ಆಟೋ ಹಿಡಿಯಕ್ಕೋಗಿ ತಲೆ ಕೆಟ್ಟೊಯ್ತು!
ಎಲ್ಲಿಗ್ ಕೇಳಿದ್ರೂ ಬರಲ್ಲ ಅಂತಾರೆ!
ಯಾಕ್ ಬರಲ್ಲ ಅಂತ ನನ್ ಗೆಳೆಯ ಒಬ್ಬ ಹೇಳ್ತಿದ್ದ. ನಾವೆಲ್ಲ ಹೇಗೆ ಸೋಮಾರಿಗಳ ತರ ಕೆಲ್ಸಾ ತಪ್ಪಿಸ್‌ಕೊಂಡು ಓಡಾಡ್ತೀವೋ, ಆವ್ರೂ ಅದೇ ತರ ಅಂತ! ಇನ್ನೂ ಅಪ್ಪಿ ತಪ್ಪಿ ದೋಡ್ ಮನಸ್ ಮಾಡಿ ಬರಕ್ ಒಪ್ಕೊಂಡ್ರೆ ಬಾಯಿಗ್ ಬಂದ್ ರೇಟ್ ಹೇಳ್ತಾರೆ!
ಹೆಚ್ಚೂ ಕಡ್ಮೆ ಆಟೋ ರೇಟೇ ಹೇಳ್ತಾರೆ ಅನ್ಸತ್ತೆ! ೫ ಕಿಲೋ ಮೀಟರ್ ಇದ್ರೂ ಸಾಕು, ೭೫ ರೂಪಾಯಿ ಅಂತಾರೆ! ಮೀಟರ್ ಹಾಕು ಅಂದ್ರೆ ಮೀಟರ್ ಮೇಲೆ ಹತ್ತೋ ಇಪ್ಪತ್ತೋ ಕೊಡಬೇಕಂತೆ. ಇನ್ನೂ ಆ ಮೀಟರ್ ಗಳೋ, ದೇವ್ರಿಗೇ ಪ್ರೀತಿ. ಏನಿಲ್ಲ ಅಂದ್ರೂ ೫ ಕಿಲೋ ಮೀಟರ್ ಗೆ ಹತ್ತ್ ರೂಪಾಯಿ ಅಂತೂ ಜಾಸ್ತಿ ಓಡತ್ತೆ.
ಅಷ್ಟೆಲ್ಲಾ ಜಾಸ್ತಿ ಕೊಟ್ರೂ, ಚಿಲ್ರೇ ಇಲ್ಲ ಅಂತ ಇನ್ನೊ ಐದೋ, ಹತ್ತೋ ನುಂಗ್ತಾರೆ.
ಇವರ ಮೇಲೆ ದೂರು ಕೊಡೋಣ ಅಂತ ಅಂದ್ರೆ ಎಲ್ ಕೊಡ್ಬಹುದು ಅಂತ ಎಲ್ಲೂ ಮಾಹಿತಿ ಸಿಗ್ತಾ ಇಲ್ಲ.
ನನ್ ಜೊತೆ ಕ್ಯಾಬ್ ಅಲ್ಲಿ ಬರೋ ಇನ್ನೊಬ್ರೂ ಕ್ಯಾಬ್ ಇಲ್ದಿದ್ ದಿನ ನಡ್ಕೊಂಡೇ ಆಫೀಸ್ ಬಂದ್ರಂತೆ(ಏನಿಲ್ಲ ಅಂದ್ರೂ ೬ ಕಿಲೋ ಮೀಟರ್).
ಆಟೋ ಡ್ರೈವರ್ ಜೊತೆ ಜಗಳ ಆಡೋದಕ್ಕಿಂತ ಅದೇ ದಾರಿ ಹಿಡಿಯೋದು ವಾಸಿ ಅಲ್ವಾ?

2 comments:

ಅಸತ್ಯ ಅನ್ವೇಷಿ said...

ನಿಮ್ ಬೆಂಗಳೂರಿಗಿಂತ ನಮ್ ಬೊಗಳೂರೇ ವಾಸಿ...

ಮೀಟರು ಇದ್ರೂ ಸರಿ ಇಲ್ಲ ಅನ್ನುತ್ತವೆ...
ಮೀಟರು ಹಾಕು ಅಂದ್ರೆ ಸುತ್ತಿ ಸುತ್ತಿ ಕರೆದೊಯ್ಯುತ್ತವೆ...
ವಾಗ್ವಾದ ಮಾಡಿ ಚರ್ಚೆ ಮಾಡಿ ಕಡಿಮೆಗೆ ಒಪ್ಪಿಸಿದ್ರೆ... ತನ್ನ ಆಟೋ ಹಾಳಾದರೂ ಪರವಾಗಿಲ್ಲ, ಒಳಗೆ ಕೂತವನ ಎಲುಬು ಪುಡಿಯಾಗಬೇಕು ಅನ್ನೋ ಧಾವಂತದಲ್ಲಿ ಇದ್ದ ಹೊಂಡಾ ಗುಂಡಿಯ ಮೇಲೇ ಆಟೋಗಳನ್ನು ಓಡಿಸುತ್ತವೆ... ಅದ್ರಲ್ಲಿ ಬದುಕಿ ಉಳಿದ್ರೆ, ಹಣ ಕಿತ್ಕೊಳ್ಳತ್ವೆ...

shivu K said...

ಮೇಡಮ್.

ಆಟೋಗಳ ಬಗ್ಗೆ ನಿಮ್ಮ ಅಭಿಪ್ರಾಯ ಸರಿಯಾಗಿದೆ. ನನಗೂ ಇಂಥ ಅನುಭವಗಳು ತುಂಬಾ ಆಗಿವೆ. ಮತ್ತು ಬೇಸರವೂ ಅಗಿದೆ....