Saturday, December 6, 2008

ಕನ್ನಡದಲ್ಲಿ ಗಾಯಕ/ಗಾಯಕಿಯರಿಗೆ ಬರ ಬಂದಿದ್ಯಾ?

ನಮ್ ಕನ್ನಡದವರು ಹಾಡೋ ಕಾಲ ಮುಗ್ದೇ ಹೋಯ್ತು ಅನ್ಸತ್ತೆ. ಯಾವ ಎಫ್.ಎಂ. ಚ್ಯಾನೆಲ್ ಕೇಳಿದ್ರೂ ಬರೀ ಹಿಂದ್ ಗಾಯಕರು ಕನ್ನಡಾನ ದಿನಾ ಕೊಲೆ ಮಾಡ್ತಾ ಇದಾರೆ. ನನ್ ಗೆಳೆಯ ಒಬ್ಬ ತಮಾಷೆ ಮಾಡ್ತಾ ಇದ್ದ್-"ಕನ್ನಡ ಗಾಯಕರ ಸಂಘದ ಮುಖ್ಯಸ್ಥ ಸೋನು ನಿಗಮ್ ಅಂತ". ಅದು ನಿಜ ಆಗೋ ಕಾಲನೂ ದೂರ ಇಲ್ಲ ಅನ್ಸತ್ತೆ.
ಒಂದ್ ವಿಷ್ಯ ಮಾತ್ರ ಇನ್ನೂ ಅರ್ಥ ಆಗ್ತಿಲ್ಲ. ಹಿಂದಿಯವರಿಗೆ ಅಷ್ಟೊಂದ್ ದುಡ್ಡ್ ಸುರ್ದು, ಕನ್ನಡಾನ ಹಿಂದಿಲೋ ಇಂಗ್ಲಿಷ್ ಅಲ್ಲೋ ಬರ್ಕೊಟ್ಟೂ ಸಮಾಯಾನೂ ಜಾಸ್ತಿ ದಂಡ ಮಾಡೋ ಬದ್ಲು ಕನ್ನಡದಲ್ಲೇ ಹುಡುಕಿದ್ರೆ ಒಳ್ಳೇ ಗಾಯಕರು ಸಿಗಲ್ವಾ? ಸೋನು ನಿಗಮ್ ಒಳ್ಳೇ ಗಾಯಕ ಇರ್ಬಹ್ದು. ಆದ್ರೆ ರಾಜೇಶ್ ಕೃಷ್ಣನ್ ಏನ್ ಕಡ್ಮೆ? ಮನೋ ಮೂರ್ತಿಯವರಿಗೆ ಒಂದು ಮಾತು. ನಿಮ್ಮ ಮೊದಲ ಸೂಪರ್ ಹಿಟ್ ಹಾಡು ನೂರು ಜನ್ಮಕೂ ಅಲ್ವಾ? ಅದನ್ ಹಾಡಿದ್ದು ನಮ್ ರಾಜೇಶ್ ಕೃಷ್ಣನ್ನೇ ಅಲ್ವಾ?
ಸೋನು ನಿಗಮ್ ಕನ್ನಡಾನೆ ಕಲ್ತಕೊಂಡ್ ಬಿಡ್ತಾರೆ ಅನ್ಸತ್ತೆ!
ಆದ್ರೆ ಉದಿತ್ ನಾರಾಯಣ್ , ಶಾನ್, ಕುನಾಲ್ ಗಾಂಜಾವಾಲಾ, ಶ್ರೇಯ ಘೋಶಾಲ್ ಕನ್ನಡಾನಾ ಸಾಯ್ಸೇ ಬಿಡ್ತಾರೆ!
ಇಷ್ಟೊಂದೆಲ್ಲ ರಿಯಾಲಿಟಿ ಶೋಗಳನ್ ಮಾಡ್ತಿದಾರೆ, ಅವ್ರಲ್ಲಿ ಒಬ್ರೂ ಚೆನ್ನಾಗಿಲ್ವ? ಯಾಕೆ ಅವ್ರಿಗೆ ಅವಕಾಶ ಕೊಡಲ್ಲ?
ನೋಡೋಣ, ಇನ್ನು ಮುಂದೇನಾದ್ರೂ ಕನ್ನಡದವ್ರಿಗೆ ಅವಕಾಶ ಕೊಡ್ತಾರಾ ಅಂತ.

1 comment:

Rajesh Manjunath - ರಾಜೇಶ್ ಮಂಜುನಾಥ್ said...

ಜ್ಯೋತಿ,
ಕಾಕತಾಳೀಯವೆಂಬಂತೆ ಇದೇ ಡಿಸೆಂಬರ್ ತಿಂಗಳಿನಲ್ಲಿ ನಾನು ಈ ಬಗ್ಗೆ ಒಂದು ಬರಹ ಬರೆದಿದ್ದೆ, ಅದೆಷ್ಟು ಬೇಸರವಾಗುತ್ತೆ ಅಲ್ವ ಈ ಪರ ಬಾಷೆ ಗಾಯಕರ ಕನ್ನಡ ಹಾಡು ಕೇಳಲು.
ನೋಡೋಣ ಏನಾಗುತ್ತೆ ಅಂತ...