Sunday, December 21, 2008

ಕಳೆದ ವಾರ ನೋಡಿದ ಸಿನೆಮಾಗಳು

1. Rab ne bana di Jodi
ನಾವು 5 ಜನ Inox ಗೆ ಹೋಗಿ ಈ ಸಿನಿಮಾ ನೋಡಿದ್ವಿ. ನನ್ friend ಒತ್ತಾಯ ಮಾಡಿದ್ದಕ್ಕೆ ನೊಡ್ಬೇಕಾಯ್ತು.
ಶಾರುಖ್ ಖಾನ್ ಅಜ್ಜನ್ ತರ ಕಾಣಿಸ್ತಾನೆ(ಅಜ್ಜಾನೆ ಅಂತೀರಾ?). ಹುಡುಗಿ ನೋಡೋಕೆ ಚೆನ್ನಾಗಿದಾಳೆ, ಸಕತ್ತಾಗಿ ಡ್ಯಾನ್ಸ್ ಮಾದ್ತಾಳೆ. ಸಿನಿಮಾ ಬಗ್ಗೆ ಹೇಳಕ್ಕೆ ಇನ್ನೇನೂ ಇಲ್ಲ :P
ಕಥೆ ಅಂತೂ ಏನೂ ಇಲ್ಲ ಅನ್ಬಹುದು. ಶಾರುಖ್ ಖಾನ್ ಗೆ ಎಲ್ಲೋ split personality ಆಗಿದೆಯಾ ಇಲ್ಲ ನಂಗೆ ತಲೆ ಕೆಟ್ಟೋಗಿದೆಯಾ ಅಂತ ಅನುಮಾನ ಆಗ್ತಿತ್ತು!
ಕತೆ ಹೇಳಾಣ ಅಂದ್ರೆ, ಶಾರುಖ್(ಸೂರಿ) ಅನುಷ್ಕ(ತಾನಿ) ಮದುವೆಗೆ ಅಂತ ಹೋಗಿರ್ತಾನೆ. ಅಲ್ ನೋಡಿದ್ರೆ ದಿಬ್ಬಣ ಬರ್ತಿದ್ದ ಬಸ್ಸು ಅಫಗಾತ ಆಗಿ ಬಸ್ಸಲ್ಲಿ ಇರೋರೆಲ್ಲ ಸತ್ತೋಗ್ತಾರೆ. ತಾನಿ ಅಪ್ಪ ತಾನಿ ಕೈಯನ್ನ ಸೂರಿ ಕೈಯಲ್ಲಿ ಇಟ್ಟು ಅವ್ನೂ ಶಿವನ್ ಪಾದ ಸೇರ್‌ಕೋತಾನೆ.
ಮದುವೆ ಆಗಿ ಅವ್ಳನ್ನ ಅಮೃತಸರ್ ಕರ್ಕೊಂಡ್ ಬರ್ತಾನೆ. ಅವ್ಳು ಅಂತಾಳೆ "ನಂಗೆ ಸ್ವಲ್ಪ ಟೈಮ್ ಕೊಟ್ರೆ ನಾನು ಹಳೆ ತಾನಿ ನ ಸಾಯ್ಸಿ ಹೊಸ ತಾನಿ ಆಗ್ತೀನಿ. ಒಳ್ಳೇ ಹೆಂಡ್ತಿ ಆಗ್ತೀನಿ, ಆದ್ರೆ ನಿಮ್ಮನ್ ಪ್ರೀತಿ ಮಾಡಕ್ಕೆ ಮಾತ್ರ ಆಗಲ್ಲ." ಶಾರುಖ್ ಯಾವಾಗ್ಲೂ ದೇವರ ಪಾತ್ರಾನೇ ತಾನೇ ಮಾಡೋದು. ಸರಿ ಅಂತಾನೆ ಅವ್ನೂವೇ. ಆದ್ರೆ ಮನ್ಸ್ ತುಂಬಾ ಪ್ರೀತಿ!
ಅವ್ಳನ್ನ ಹೆಂಗಾದ್ರೂ impress ಮಾಡ್ಬೇಕು ಅಂತ full look change! ಕೂದ್ಲನ್ನ ಸ್ವಲ್ಪ ಬೇರೆ ತರ ಬಾಚ್‌ಕೊಂಡು, ಕನ್ನಡಕ ಹಾಕ್ಕೊಂಡ್ರೆ ಮುಖ ಗುರ್ತ್ ಹಿಡೀದಿರೊವಷ್ಟು ಬೇರೆ ಕಾಣ್ಸತ್ತೆ ಅನ್ನೋ ಓಬೀರಾಯನ ಕಾಲದ concept. ಅವ್ಳು ಸೇರ್‌ಕೊಂಡ್ dance class ಗೆ ಇವ್ನೂ ಸೇರ್‌ಕೋತಾನೆ. ಅಲ್ಲಿ ನೊಡಿದ್ರೆ salsa partner ಆಗಿ ಇವ್ನೇ ಜೊತೆಯಾಗ್ತಾನೆ(ಅವ್ಳು ಗುರ್ತ್ ಹಿಡಿಯೋದೇ ಇಲ್ಲ!). ಮುಂದೆ ಅವ್ಳಿಗೆ ಎಷ್ಟೆಲ್ಲಾ ತಲೆ ಕೆಡಿಸ್ತಾನೆ ಅನ್ನೋದನ್ನ ನೀವೇ ನೋಡಿ! ಮಜಾ ಮಾಡಿ!:P
ನನ್ನ Rating: 1/5

2. Dasvidaniya
ತುಂಬಾ ಚೆನ್ನಾಗಿದೆ ಈ ಪಿಕ್ಚರ್! ವಿನಯ್ ಪಾಠಕ್ ತಾನು ತುಂಬಾ ಚೆನ್ನಾಗಿ acting ಮಾಡ್ತೀನಿ ಅನ್ನೋದನ್ನ ಮತ್ತೆ ತೋರ್ಸಿದಾರೆ.
ಇದ್ರಲ್ಲಿ ಕತೆ ಏನಪ್ಪಾ ಅಂದ್ರೆ ವಿನಯ್ ಪಾಠಕ್(ಅಮರ್) ಒಬ್ಬ ಸಾಮಾನ್ಯ ಮನುಷ್ಯ (ನಮ್ಮ ನಿಮ್ಮೆಲರ ಹಾಗೆ). ದಿನಾ ಈ ದಿನ ಏನೇನ್ ಮಾಡ್ಬೇಕು ಅನ್ನೋದನ್ನ Things to do list ಅಲ್ಲಿ ಬರೀಯೋದು ಅಭ್ಯಾಸ. ಇರೋದು ಅಮ್ಮನ ಜೊತೆ. ಕೆಲಸ: account manager. ಕತ್ತೆ ತರ ದುಡಿದ್ರೂ ದಿನಾ boss ಹತ್ರ ಬೈಸ್ಕೊಳ್ಳೋದು ಅಭ್ಯಾಸ ಆಗಿರತ್ತೆ. ಹೊಟ್ಟೆಯಲ್ಲಿ ಏನೋ ನೋವು ಅಂತ ಅದೇನೇನೋ test ಮಾಡ್ಸಿದಾಗ ಗೊತ್ತಾಗತ್ತೆ ಹೊಟ್ಟೆಲಿ ಕ್ಯಾನ್ಸರ್ ಇದೆ ಅಂತೆ ಅದೂ ಕೊನೇ ಹಂತದಲ್ಲಿ. ಇನ್ನ್ ಮೂರೇ ತಿಂಗ್ಳೂ ಬದುಕಿ ಇರೋದು ಅಂತ. ಮತ್ತೆ office ಹೋಗಾಕ್ ಮುಂಚೆ list ಮಾಡೊವಾಗ ಅನ್ಸತ್ತೆ, ಎಷ್ಟೊಂದೆಲ್ಲ ಆಸೆ ಇತ್ತು, ಏನೂ ಮಾಡ್ಲೇ ಇಲ್ಲ ಇಲ್ಲಿ ತನ್ಕ. ಸಾಯೋಕ್ ಮುಂಚೆ ಏನೇನ್ ಮಾಡ್ಬೇಕು ಅಂತ ಆವಾಗ list ಮಾಡಕ್ ಶುರು ಮಾಡ್ತಾನೆ. ಮುಂದೆ ತುಂಬಾ ಚೆನ್ನಾಗಿದೆ.
ನೋಡಿ ಮಜಾ ಮಾಡಿ :-)
ಇದನ್ ನೋಡಿದ್ ಮೇಲೆ ನಂಗೂ "Things to do before I die" list ಮಾಡಾಣ ಅಂತ ಅನಿಸ್ತಿದೆ.
ಜೊತೆಗೆ ಈ video ನೆನಪಾಯ್ತು
ನನ್ನ Rating: 3.5/5

3. Oye Lucky Lucky Oye
ಇದೂ ಅಷ್ಟೇ. ಇಷ್ಟ ಆಯ್ತು ಸಿನಿಮಾ. ಇದ್ರಲ್ಲಿ Lucky ಒಬ್ಬ ಕಳ್ಳ. ಅಷ್ಟೊಂದ್ ಕಥೆ ಇಲ್ದೇ ಇದ್ರೂ ಒಂತರಾ ಚೆನ್ನಾಗಿದೆ.
ಅವ್ನು ಅದ್ ಹೆಂಗ್ ಕಳ್ಳ ಆಗ್ತಾನೆ, ಅದ್ ಹೆಂಗ್ ಕಳ್ತನ ಮಾಡ್ತಾನೆ ಅಂತ ಚೆನ್ನಾಗ್ ತೆಗ್ದಿದಾರೆ. ನಿಜ ಅಂತ ಅನಿಸ್ದೆ ಇದ್ರೂ acting ಸೂಪರ್. ಕಳ್ತನ ಅದ್ ಹೆಂಗ್ ಚಟ ಆಗ್ ಬಿಡತ್ತೆ ಅನ್ನೋದನ್ನೂ ಚೆನ್ನಾಗ್ ತೆಗ್ದಿದಾರೆ.
ನೋಡ್ಲೇಬೇಕಾದ movie.
ನನ್ನ Rating: 4/5


ಯಾಕೆ ಚೆನ್ನಾಗಿಲ್ದೆ ಇರೋ movie ಬಗ್ಗೆ ಜಾಸ್ತಿ ಬರ್ದಿದೀನಿ ಅಂತ ನೀವ್ ಕೇಳ್ಬಹುದು. ನನ್ ತರ ನೀವೂ ಸಮಯ ಹಾಗೂ ದುಡ್ಡು ದಂಡ ಮಾಡ್ದೇ ಇರ್ಲಿ ಅನ್ನೋ ಸದಾಭಿಪ್ರಾಯ!
ಇದನ್ನ ಓದಿದ್ ಮೇಲೂ ನೀವ್ ಹೋದ್ರೆ ಅದು ನನ್ ತಪ್ಪಲ್ಲ!
ಅದಕ್ಕೆ ನೀವೇ ಹೊಣೆಗಾರರು :P.
ಮಜಾ ಮಾಡ್ತಾ ಇರಿ!

Monday, December 15, 2008

ಪ್ರವಾಸ ಕಥನ: ತೊಗರೆ ಹಂಕಲ್ ತೋಟ

ನಾವು ಆಫೀಸಿಂದ ಚಿಕ್ಕಮಗಳೂರಿನ ಹತ್ತಿರ ಇರುವ ಹಂಕಲ್ ತೋಟ ಎನ್ನುವ ಜಾಗಕ್ಕೆ ಹೋಗಿದ್ದೆವು.
ಅಲ್ಲಿನ ಕೆಲವು ಸಂಗತಿಗಳು:
ಹೊರಟಿದ್ದು:
ಬೆಳಗ್ಗೆ ೫ ಗಂಟೆಗೆ ಹೊರಡ್ಬೇಕಿತ್ತು. ಅದಕ್ಕೆ ೪ ಗಂಟೆಗೆ ಅಲಾರ್ಮ್ ಇಟ್ಟು ೧.೩೦ ಗೆ ಮಲಕ್ಕೊಂಡೆ.೩ ಗಂಟೆಗೆ ಎಚ್ರ ಆದ್ರೂ, ಅಲಾರ್ಮ್ ಆಗೋದನ್ನೇ ಕಾಯ್ತಾ ಸುಮ್ನೇ ಬಿದ್ಕೊಂಡಿದ್ದೆ. ೩.೩೦ಕ್ಕೆ ನನ್ ಟೀಮ್ ಮೇಟ್ ಬಾಲ ಫೋನ್ ಮಾಡಿ ಎಬ್ಬಿಸ್ದ. ಸರಿ ಇನ್ನೇನ್ ಮಲಕ್ಕೊಳ್ಳೋದು ಅಂತ ಎದ್ದೆ. ಆಮೇಲೆ ಹೊರಟು ತರುಣ್ ಬರೋದು ಕಾಯ್ತಾ ಕೂತಿದ್ದೆ.ಅಂತೂ ಇಂತೂ ೪.೪೫ ಕ್ಕೆ ಆಫೀಸ್(ಬನ್ನೇರ್ಘಟ್ಟ ರೋಡ್) ಹತ್ರ ತಲುಪಿದ್ವಿ. ಎಲ್ಲರೂ ಬಂದು ಹೊರಡೋದು ೫.೩೦ ಆಗೋಯ್ತು. ೧೮ ಜನ ಕೂರೋವಂತ ಬಸ್ಸು. ನಾವು ಹೊರಟಿದ್ದು ಒಟ್ಟು ೧೭ ಜನ ಮತ್ತು ೩ ಮಕ್ಕಳು.
ಹೋಗ್ತಾ ಬಸ್ಸಲ್ಲಿ ಆರಾಮಾಗಿ ನಿದ್ದೆ ಮಾಡ್ಬಹುದು ಅಂತ ಅಂದ್ಕೊಂಡಿದ್ದೆ. ಆದ್ರೆ ನಿದ್ದೆ ಮಾಡಕ್ಕೆ ಆಗಿಲ್ಲ! ಆಗಿಲ್ಲ ಅಂತ ಹೇಳೋದಕ್ಕಿಂತ ಯಾರೂ ನಿದ್ದೆ ಮಾಡಕ್ಕೆ ಬಿಡ್ಲಿಲ್ಲ ಅನ್ನೋದೇ ಜಾಸ್ತಿ ಸರಿಯಾಗತ್ತೆ. ಯಾರೋ ಬರ್ತೀನಿ ಅಂತ ಹೇಳಿ ಬಂದಿರ್ಲಿಲ್ಲ. ಆವ್ರನ್ನೂ ಸ್ವಲ್ಪ ಮಿಸ್ ಮಾಡ್ಕೊತಿದ್ದೆ!
ಹೋಗ್ತಾ ಮಕ್ಕಳ ಜೊತೆ ಆಟ ಆಡ್ತಾ ಹೋದ್ವಾ, ಆಗ ಸೋನಿ ಬಾಲಂಗೆ ಪ್ರಪೋಸ್ ಮಾದಿದ್ಳು. ಮುದ್ಮುದ್ದಾಗಿ "Will you marry me" ಅಂತ ಕೇಳಿದ್ಳು. ಬಾಲಂಗೆ ಅಂತೂ ಇಂತು ಒಂದ್ ಹುಡುಗಿ ಸಿಕ್ಕಿದ್ಳಲ್ಲಾ ಅಂತ ಆಡ್ಕೊಂಡು ಮುಂದೆ ಹೋದ್ವಿ.

ಹಂಕಲ್ ತೋಟದಲ್ಲಿ:
ಅಲ್ಲಿಗೆ ತಲುಪೋವಾಗ ಗಂಟೆ ೧೨ ಆಗಿತ್ತು. ಹೋದ್ ಕೂಡ್ಲೇ ಕಾಫಿ ಕೊಟ್ರು, ನಂತ್ರ ಫ್ರೆಶ್ ಆಗಿ ಊಟ ಮಾಡಿದ್ವಿ. ಊಟ ತುಂಬಾ ಚೆನ್ನಾಗಿತ್ತು. ಆಮೇಲೆ ಹುಡುಗ್ರು ಕ್ರಿಕೆಟ್ ಆಡಕ್ಕೆ ಶುರು ಮಾಡಿದ್ರು. ನಾನು ಸುಮ್ನೇ ನೋಡ್ತಾ ಕೂತಿದ್ದೆ. ಜಾಗನೆಲ್ಲ ಒಂದ್ ಸರ್ತಿ ಸರ್ವೇ ಮಾಡ್ದೆ. ನೋಡಕ್ಕೆ ತುಂಬಾ ಚೆನ್ನಾಗಿದೆ ಜಾಗ! ಎಲ್ಲಿ ನೋಡಿದ್ರೂ ಹಸಿರು, ಕಾಫೀ ತೋಟ. ಅಲ್ಲಿ ನಾವಿದ್ದಿದ್ ಮನೇನೂ ಅಷ್ಟೇ ಸ್ವಚ್ಚವಾಗಿ, ಸುಂದರವಾಗಿ ನೋಡ್ಕೊಂದಿದಾರೆ. ಎರಡ್ ದಿನ ಕಂಪ್ಯೂಟರ್ ಮುಖ ನೊಡ್ದೆ, ಆರಾಮಾಗಿ ಇರ್ಬೇಕು ಅಂದ್ರೆ ಸೂಪರ್ ಜಾಗ. ಅಲ್ಲಿ ಒಂದ್ ಮರಕ್ಕೆ ಹಗ್ಗದ ಏಣಿ ಹಂಗೆ ಇನ್ನೊಂದು ಮರದ್ ಏಣಿ ಇಟ್ಟಿದ್ರು. ನಾವೆಲ್ಲ ಮರದ್ ಏಣಿ ಹತ್ಕೊಂಡ್ ಮೇಲೆ ಬಂದ್ರೆ ರಾಜುಲು, ಅಮಿತ್ ಹಗ್ಗದ್ ಏಣಿಲಿ ಮೇಲೆ ಬಂದ್ರು. ಆಮೇಲೆ ನಾನು, ಸ್ವಾತಿ, ಸೋನಾಕ್ಶಿ ಮೇಲಿಂದ ಕ್ರಿಕೆಟ್ ನೋಡ್ತಾ ಇದ್ವಿ. ಮತ್ತೆ ಕಾಫಿ ಸಮಯ! ಆಟಾನೂ ಮುಗೀತು.


ಮುಳ್ಳಯನ ಗಿರಿ:
ಆಮೇಲೆ ಸನ್ ಸೆಟ್ ನೋಡಕ್ಕೆ ಮುಳ್ಳಯನ ಗಿರಿಗೆ ಹೋಗೋದು ಅಂತ ಹೊರಟ್ವಿ. ಹೋಗ್ತಾ ಅಂತಾಕ್ಷರೀ ಆಡಿದ್ವಿ. ನಾನು, ಅಮಿತ್, ಸ್ವಾತಿ ಬೇರೆ ಯಾರಿಗೂ ಅವಕಾಶ ಕೊಡ್ದೆ ಹಾಡಿದ್ವಿ.
ಮುಳ್ಳಯನ ಗಿರೀನೂ ಅಷ್ಟೇ, ಸಖತ್ತಾಗಿದೆ. ಕರ್ನಾಟಕದ ಅತಿ ಎತ್ತರದ ಜಾಗ ಅಂತೆ ಮುಳ್ಳಯನ ಗಿರಿ. ನಾವು ಹೋದಾಗ ಸೂರ್ಯನ ಒಂದೇ ಒಂದು ಗೆರೆ ಕಾಣಿಸ್ತಾ ಇತ್ತು. ಸೂರ್ಯ ಮುಳುಗೋದನ್ನ ನೋಡಿದ್ವಿ. ಅಲ್ಲಿ ಒಂದು ದೇವಸ್ತಾನಾನು ಇದೆ. ಒಳಗಡೆ ಹೋಗಕ್ಕಾಗಿಲ್ಲ. ಲೇಟ್ ಆಗ್ತಿತ್ತು ಅಂತ ಅಲ್ಲಿಂದ ಹೊರಟ್ವಿ. ಆದ್ರೆ ಅಲ್ಲಿಂದ ನೋಡಿದ ಗುಡ್ಡ ಬೆಟ್ಟಗಳು, ಸೂರ್ಯ ಮಾತ್ರ ನೋಡ್ಲೇಬೇಕಾದ ದೃಶ್ಯ. ವಾಪಸ್ ಬರ್ಬೇಕಿದ್ರೆ ಮಾತ್ರ ತುಂಬಾ ಭಯ ಆಗೋಯ್ತು. ಕೆಳಗಡೆ ನೋಡಿದ್ರೆ ಪ್ರಪಾತ. ರೋಡ್ ಅಲ್ಲಿ ಒಂದ್ ಬಸ್ ಹೋಗೋವಷ್ಟ್ ಜಾಗ ಮಾತ್ರ ಇತ್ತು. ಇನ್ನೋದ್ ಕಡೆ ಇಂದ ಕಾರ್ ಗೀರ್ ಏನಾದ್ರೂ ಬಂದ್ರೆ ದೇವ್ರೇ ಗತಿ! ತರುಣ್ ಅಂತೂ ಸಕತ್ ಹೆದ್ರ್ ಕೊಂಡ್ರು. ಮತ್ತೆ ನಮ್ ಹಾಡು ಶುರು. ಹೋಗ್ತಾ ಬರ್ತಾ ೨-೩ ಗಂಟೆ ಬರೀ ಹಾಡಿದೀವಿ. ವಾಪಸ್ ತೋಟ ತಲುಪೋವಾಗ ೮ ಗಂಟೆ ಆಗಿತ್ತು. ಹೊರಗಡೆ ಬೆಂಕಿ ಹಾಕಿದ್ರು(camp fire). ಚಳಿ ಅಷ್ಟೇನೂ ಇರ್ಲಿಲ್ಲ. ಆದ್ರೂ ಊಟ ಮಾಡಿ ಬಂದು ಎಲ್ಲಾರು ಅಲ್ಲೇ ಕುಳಿತ್ವಿ. ಸ್ವಲ್ಪ ಹೊತ್ತು ಮಾತಾಡಿದ್ ಮೇಲೆ ಅಲ್ಲೇ ಒಂದು ವಾಕಿಂಗ್ ಹೋದ್ವಿ. ಬೆಳದಿಂಗಳ ನಡಿಗೆ ಅಂತಾನೆ ಹೇಳ್ಬಹುದು. ಆ ಹೊತ್ತಲ್ಲಿ ತೋಟ ಇನ್ನೂ ಚೆನ್ನಾಗಿ ಕಾಣಿಸ್ತಿತ್ತು. ನೀವೂ ಎಲ್ಲಾದ್ರೂ ಹಂಕಲ್ ತೋಟಕ್ಕೆ ಹೋದ್ರೆ ರಾತ್ರಿ ಹೊತ್ತು ಜೀಪ್ ರೀಡೆಗೆ ಖಂಡಿತಾ ಹೋಗ್ ಬನ್ನಿ.

ಮರು ದಿನದ ಟ್ರೆಕಿಂಗ್:
ಬೆಳಗ್ಗೆ ಎಲ್ಲಾರು ಎದ್ದು ಕಾಫಿ ಕುಡಿಯೋದು ೭ ಘಂಟೆ ಆಗಿತ್ತು. ಸುಮಾರು ೭.೩೦ ಗೆ ಒಂದಷ್ಟ್ ಜನ ಟ್ರೆಕಿಂಗ್ ಹೊರಟ್ವಿ. ಟ್ರೆಕಿಂಗ್ ಅಂದ್ರೆ ಅದೇ ತೋಟದ ಒಳಗೆ ನಡ್ಕೊಂಡ್ ಹೋಗೋದು. ಎಲ್ಲೋ ಒಂದು ನೀರಿನ ಬುಗ್ಗೆ(water fall ಅನ್ನೋದನ್ನ ಈ ತರ ಅನುವಾದಿಸಿದೀನಿ!) ಇದೆ ಅಂತ ನಮ್ ಗೈಡ್ ಹೇಳಿದ್ದ. ಅದನ್ನೇ ನಂಬ್ಕೊಂಡು ನಾವೂ ನಡೆದ್ವಿ, ನಡೆದ್ವಿ, ನಡೆದ್ವಿ... ತೋಟದ ಒಳಗಡೆ ತಂಪಾಗಿತ್ತು. ತೋಟ ಮುಗೀತು, ಗುಡ್ಡ ಶುರುವಾಯ್ತು, ಕಲ್ಲು, ಮುಳ್ಳು ಇತ್ಯಾದಿಗಳನ್ನ ದಾಟ್ಕೊಂಡು ಎಷ್ಟ್ ನಡೆದ್ರೂ ಆ ನೀರು ಸಿಗ್ಲೇ ಇಲ್ಲ. ಹೆಚ್ಚೂ ಕಮ್ಮಿ ೬ ಕಿ.ಮೀ. ಆದ್ರೂ ನಡ್ದಿದೀವಿ. ಆ ನೀರನ್ನ ನಂಬಿಕೊಡು ನಾವ್ಯಾರೂ ನೀರೂ ತಂದಿರ್ಲಿಲ್ಲ :-(. ಸಾಕ್ ಸಾಕಾಗಿತ್ತು. ನಮ್ ಕಥೇನೆ ಹಿಂಗಾದ್ರೆ ಪಾಪ ಸೋನಾಕ್ಷಿ(ಇನ್ನೂ ೬ ವರ್ಷ) ಅದ್ ಹೆಂಗ್ ನಡೆದ್ಲೋ ಆಶ್ಚರ್ಯ ಆಗ್ತಿದೆ. ಹಸಿವು ಬಾಯಾರಿಕೆಗಳಿಂದ ನಾವೆಲ್ಲ ಒದ್ದಾಡಕ್ಕೆ ಶುರು ಮಾಡಿದ್ವಿ. ಶಿವಪ್ಪಾ ಕಾಯೋ ತಂದೆ ಹಾಡು ಹಾಡೊಡೊಂದೇ ಬಾಕಿ. ಇನ್ನ್ ನಡಿಯಕ್ಕೆ ಆಗಲ್ಲ ಅಂತ ಜೀಪ್ ಕರ್ಸಿದ್ವಿ. ಅದ್ರಲ್ಲೇ ಕೆಳಗಡೆ ಬಂದಾಯ್ತು. ೧೨ ಗಂಟೆಗೆ ತಣ್ಣಗಾದ ಇಡ್ಲಿ ವಾಡೆ ನಮ್ಮನ್ನೇ ಕಾಯ್ತಿತ್ತು!!!

ಪ್ರಯಾಣ:
ಸರಿ ಸ್ನಾನ ಗೀನ ಮಾಡಿದ್ ಮೇಲೆ ಊಟದ್ ಸಮಾಯನೂ ಆಯ್ತು. ತುಂಬಾ ರುಚಿಯಾದ ಊಟ. ಊಟ ಆದ್ ಕೂಡ್ಲೇ ನಾವು ಹೊರಡ್ ಬೇಕಿತ್ತು. ಎಲ್ಲಾರೂ ಬೇಗ ಬೇಗ ಪ್ಯಾಕ್ ಮಾಡಿದ್ವಿ. ಆಮೇಲೆ ನಮ್ ಪ್ರಯಾಣ ಶುರು!
ಪಾಪ ರಾಜುಲು ಬಾನ್ಸುರಿಗೆ ಅದೆಷ್ಟ್ ತೊಂದ್ರೆ ಕೋಟ್ವೋ. ಅಮಿತ್ ಗೆ ಕೊನೇ ತನ್ಕನೂ ಒಂದೇ ಒಂದ್ ಸ್ವರ ನುಡ್ಸಕ್ಕೆ ಆಗ್ಲಿಲ್ಲ :P.
ಹಾಸನದ್ ತನಕ ಹೆಚ್ಚಿನವರು ನಿದ್ದೆ ಮಾಡಿದ್ರು. ನಾನು, ಬಾಲ ಮತ್ತೆ ಸ್ವಾತಿ ಮಾತ್ರ ಹಾಡ್ ಹೇಳ್ತಾ ಇದ್ವಿ. ಬಾಲ ಹಿನ್ನಲೆ ಸಂಗೀತಾನೂ(background music) ಕೊಟ್ಟ! ಎಲ್ಲರಿಗೂ ಮತ್ತೆ ಜೋಶ್ ಬರಕ್ಕೆ ಒಂದ್ ಕಾಫಿ ಬೇಕಾಗಿತ್ತು.
ಕಾಫಿ ಕುಡಿದು ಅಲ್ಲಿಂದ ಹೊರಟ್ ಮೇಲೆ ಬಸ್ಸಲ್ಲಿ dumb charads(ಮೂಕಾಭಿನಯ ಅಂತ ಹೇಳ್ಬಹುದಾ?) ಆಡಿದ್ವಿ ಅಲ್ಲಿಂದ ವಾಪಸ್ ಬೆಂಗ್ಳೂರು ಬರೋವರೆಗೂ! ಏನೇನ್ ಸಿನಿಮಾ ಎಲ್ಲಾ ಮಾಡಿದ್ವಿ ಅಂತ ಈಗ ನೆನಪಿಸ್‌ಕೊಂಡ್ರೆ ಈಗ ಆಶ್ಚರ್ಯ ಆಗತ್ತೆ, ಜೊತೆಗೆ ನಗೂನೂ ಬರತ್ತೆ. Philadelphia, Reshma ki jawani, if only, victoria no203, manorama 6 feet under, ಇನ್ನೂ ಸುಮಾರು!! ರಾಜುಲು ಜೂ(zoo) ಆದ್ರು. ಹರಿ ಬಗ್ಗೆ ಹೇಳ್ದೇ ಇರೋದೇ ವಾಸಿ ;-)!
ವಾಪಸ್ ಬರ್ತಾ ಮಾತ್ರ ಸಕತ್ ಮಜಾ ಮಾಡಿದ್ವಿ!

ಮರಳಿ ಮನೆಗೆ:
ಮರಳಿ ಮಣ್ಣಿಗೆ ಅಲ್ಲ :P. ಬೆಂಗ್ಳೂರ್ ತಲಪೋವಾಗ ೧೧ ಗಂಟೆ ಆಗಿತ್ತು. ಆಮೇಲೆ ತರುಣ್ ಮನೆ ತಲಪಿಸಿದ್ರು. ೧೧.೩೦ಗೆ ಮನೆ ಸೇರಿ, ಫೋನ್ ಅಲ್ಲಿ ಸ್ವಲ್ಪ ಮಾತಾಡಿ ೧೨ ಘಂಟೆಗೆ ಮಾಲಕ್ಕೊಂಡೆ. ಇಲ್ಲಿಗೆ ನಮ್ ಪ್ರವಾಸ ಮುಗೀತು!

ಮರುದಿನ ಏಳೋವಾಗ ೧೧ ಆಗಿತ್ತು. ಮೈ ಕೈ ಎಲ್ಲ ಎಷ್ಟ್ ನೋವಾಗ್ತಿತ್ತು ಅಂದ್ರೆ ಆಫೀಸ್ಗೂ ಚಕ್ಕರ್ ಹಾಕಿ ಮತ್ತೆ ಮಾಲಕ್ಕೊಂಡೆ.

ಚಿತ್ರಗಳು ಇಲ್ಲಿವೆ: http://picasaweb.google.com/iamjyothi/HunkalWoods#

Wednesday, December 10, 2008

ಬೆಂಗಳೂರಿನಲ್ಲಿ ಆಟೋಗಳು!

ಹ್ಮ್! ಮಲೆಗಳಲ್ಲಿ ಮದುಮಗಳು, ಜೊತೆ ಪ್ರಾಸಬಧ್ಧವಾಗಿರ್ಲೀ ಅಂತ ಈ ಹೆಸ್ರು ಇಟ್ಟಿದೀನಿ.
ಕ್ಯಾಬ್ ಎರಡು ದಿನ ಇರ್ಲಿಲ್ಲ. ಆಗ ಆಟೋ ಹಿಡಿಯಕ್ಕೋಗಿ ತಲೆ ಕೆಟ್ಟೊಯ್ತು!
ಎಲ್ಲಿಗ್ ಕೇಳಿದ್ರೂ ಬರಲ್ಲ ಅಂತಾರೆ!
ಯಾಕ್ ಬರಲ್ಲ ಅಂತ ನನ್ ಗೆಳೆಯ ಒಬ್ಬ ಹೇಳ್ತಿದ್ದ. ನಾವೆಲ್ಲ ಹೇಗೆ ಸೋಮಾರಿಗಳ ತರ ಕೆಲ್ಸಾ ತಪ್ಪಿಸ್‌ಕೊಂಡು ಓಡಾಡ್ತೀವೋ, ಆವ್ರೂ ಅದೇ ತರ ಅಂತ! ಇನ್ನೂ ಅಪ್ಪಿ ತಪ್ಪಿ ದೋಡ್ ಮನಸ್ ಮಾಡಿ ಬರಕ್ ಒಪ್ಕೊಂಡ್ರೆ ಬಾಯಿಗ್ ಬಂದ್ ರೇಟ್ ಹೇಳ್ತಾರೆ!
ಹೆಚ್ಚೂ ಕಡ್ಮೆ ಆಟೋ ರೇಟೇ ಹೇಳ್ತಾರೆ ಅನ್ಸತ್ತೆ! ೫ ಕಿಲೋ ಮೀಟರ್ ಇದ್ರೂ ಸಾಕು, ೭೫ ರೂಪಾಯಿ ಅಂತಾರೆ! ಮೀಟರ್ ಹಾಕು ಅಂದ್ರೆ ಮೀಟರ್ ಮೇಲೆ ಹತ್ತೋ ಇಪ್ಪತ್ತೋ ಕೊಡಬೇಕಂತೆ. ಇನ್ನೂ ಆ ಮೀಟರ್ ಗಳೋ, ದೇವ್ರಿಗೇ ಪ್ರೀತಿ. ಏನಿಲ್ಲ ಅಂದ್ರೂ ೫ ಕಿಲೋ ಮೀಟರ್ ಗೆ ಹತ್ತ್ ರೂಪಾಯಿ ಅಂತೂ ಜಾಸ್ತಿ ಓಡತ್ತೆ.
ಅಷ್ಟೆಲ್ಲಾ ಜಾಸ್ತಿ ಕೊಟ್ರೂ, ಚಿಲ್ರೇ ಇಲ್ಲ ಅಂತ ಇನ್ನೊ ಐದೋ, ಹತ್ತೋ ನುಂಗ್ತಾರೆ.
ಇವರ ಮೇಲೆ ದೂರು ಕೊಡೋಣ ಅಂತ ಅಂದ್ರೆ ಎಲ್ ಕೊಡ್ಬಹುದು ಅಂತ ಎಲ್ಲೂ ಮಾಹಿತಿ ಸಿಗ್ತಾ ಇಲ್ಲ.
ನನ್ ಜೊತೆ ಕ್ಯಾಬ್ ಅಲ್ಲಿ ಬರೋ ಇನ್ನೊಬ್ರೂ ಕ್ಯಾಬ್ ಇಲ್ದಿದ್ ದಿನ ನಡ್ಕೊಂಡೇ ಆಫೀಸ್ ಬಂದ್ರಂತೆ(ಏನಿಲ್ಲ ಅಂದ್ರೂ ೬ ಕಿಲೋ ಮೀಟರ್).
ಆಟೋ ಡ್ರೈವರ್ ಜೊತೆ ಜಗಳ ಆಡೋದಕ್ಕಿಂತ ಅದೇ ದಾರಿ ಹಿಡಿಯೋದು ವಾಸಿ ಅಲ್ವಾ?

Sunday, December 7, 2008

ನಾನೊಬ್ಬ ಹೋದ್ರೆ ಸಾಕು!

ಬೆಂಗ್ಳೂರಲ್ಲಿ ಇಷ್ಟೊಂದ್ ಟ್ರಾಫಿಕ್ ಆಗಾಕ್ ಕಾರ್ಣನೇ ಇದು! ನಾವೂ ಇದೇ ಥರ ಅಂದ್‌ಕೋತೀವಿ ಅಲ್ವಾ?
ಒಂದ್ ಸಿಗ್ನಲ್ ಬಂದ್ರೆ ಕಾಯೋ ತಾಳ್ಮೆ ಯಾರಿಗೂ ಇಲ್ಲ.
ಅಲ್ಲ, ಎಲ್ಲಾರೂ ಒಂದೇ ಸರ್ತಿ ಎಲ್ಲ ದಿಕ್ಕಲ್ಲೂ ಹೋಗ್‌ಬೇಕು ಅಂದ್ರೆ ಆಗತ್ತಾ?
ಇವತ್ತು ಬೇರೆಯವರಿಗೆ ಹೋಗಕ್ಕೆ ನಾವ್ ದಾರಿ ಬಿಡ್ಲಿಲ್ಲ ಅಂದ್ರೆ ನಾಳೆ ಅದೇ ಬೇರೆಯವರ ಜಾಗ್ದಲ್ಲಿ ನಾವೂ ಇರ್ತೀವಿ ಅಂತ ಯಾಕ್ ಯೋಚ್ನೆ ಮಾಡಲ್ಲ?
ನಾಳೆ ಇನ್ಯಾರನ್ನಾದ್ರೂ ಓವರ್ ಟೇಕ್ ಮಾಡೋವಾಗ ಸ್ವಲ್ಪ ಯೋಚ್ನೆ ಮಾಡಿ!

Saturday, December 6, 2008

ಕನ್ನಡದಲ್ಲಿ ಗಾಯಕ/ಗಾಯಕಿಯರಿಗೆ ಬರ ಬಂದಿದ್ಯಾ?

ನಮ್ ಕನ್ನಡದವರು ಹಾಡೋ ಕಾಲ ಮುಗ್ದೇ ಹೋಯ್ತು ಅನ್ಸತ್ತೆ. ಯಾವ ಎಫ್.ಎಂ. ಚ್ಯಾನೆಲ್ ಕೇಳಿದ್ರೂ ಬರೀ ಹಿಂದ್ ಗಾಯಕರು ಕನ್ನಡಾನ ದಿನಾ ಕೊಲೆ ಮಾಡ್ತಾ ಇದಾರೆ. ನನ್ ಗೆಳೆಯ ಒಬ್ಬ ತಮಾಷೆ ಮಾಡ್ತಾ ಇದ್ದ್-"ಕನ್ನಡ ಗಾಯಕರ ಸಂಘದ ಮುಖ್ಯಸ್ಥ ಸೋನು ನಿಗಮ್ ಅಂತ". ಅದು ನಿಜ ಆಗೋ ಕಾಲನೂ ದೂರ ಇಲ್ಲ ಅನ್ಸತ್ತೆ.
ಒಂದ್ ವಿಷ್ಯ ಮಾತ್ರ ಇನ್ನೂ ಅರ್ಥ ಆಗ್ತಿಲ್ಲ. ಹಿಂದಿಯವರಿಗೆ ಅಷ್ಟೊಂದ್ ದುಡ್ಡ್ ಸುರ್ದು, ಕನ್ನಡಾನ ಹಿಂದಿಲೋ ಇಂಗ್ಲಿಷ್ ಅಲ್ಲೋ ಬರ್ಕೊಟ್ಟೂ ಸಮಾಯಾನೂ ಜಾಸ್ತಿ ದಂಡ ಮಾಡೋ ಬದ್ಲು ಕನ್ನಡದಲ್ಲೇ ಹುಡುಕಿದ್ರೆ ಒಳ್ಳೇ ಗಾಯಕರು ಸಿಗಲ್ವಾ? ಸೋನು ನಿಗಮ್ ಒಳ್ಳೇ ಗಾಯಕ ಇರ್ಬಹ್ದು. ಆದ್ರೆ ರಾಜೇಶ್ ಕೃಷ್ಣನ್ ಏನ್ ಕಡ್ಮೆ? ಮನೋ ಮೂರ್ತಿಯವರಿಗೆ ಒಂದು ಮಾತು. ನಿಮ್ಮ ಮೊದಲ ಸೂಪರ್ ಹಿಟ್ ಹಾಡು ನೂರು ಜನ್ಮಕೂ ಅಲ್ವಾ? ಅದನ್ ಹಾಡಿದ್ದು ನಮ್ ರಾಜೇಶ್ ಕೃಷ್ಣನ್ನೇ ಅಲ್ವಾ?
ಸೋನು ನಿಗಮ್ ಕನ್ನಡಾನೆ ಕಲ್ತಕೊಂಡ್ ಬಿಡ್ತಾರೆ ಅನ್ಸತ್ತೆ!
ಆದ್ರೆ ಉದಿತ್ ನಾರಾಯಣ್ , ಶಾನ್, ಕುನಾಲ್ ಗಾಂಜಾವಾಲಾ, ಶ್ರೇಯ ಘೋಶಾಲ್ ಕನ್ನಡಾನಾ ಸಾಯ್ಸೇ ಬಿಡ್ತಾರೆ!
ಇಷ್ಟೊಂದೆಲ್ಲ ರಿಯಾಲಿಟಿ ಶೋಗಳನ್ ಮಾಡ್ತಿದಾರೆ, ಅವ್ರಲ್ಲಿ ಒಬ್ರೂ ಚೆನ್ನಾಗಿಲ್ವ? ಯಾಕೆ ಅವ್ರಿಗೆ ಅವಕಾಶ ಕೊಡಲ್ಲ?
ನೋಡೋಣ, ಇನ್ನು ಮುಂದೇನಾದ್ರೂ ಕನ್ನಡದವ್ರಿಗೆ ಅವಕಾಶ ಕೊಡ್ತಾರಾ ಅಂತ.

Thursday, December 4, 2008

My experiments with cooking!!

It is three months since I moved to new home!
Now, I am learning to cook!! Or, I can say experimenting! :-)
If I write a book on this, I know my roommates will definitely write a boot titled "Victims of Jyothi's cooking". Pray for their health ;-)
Let me make a list of what all I prepared in these days:
I made Palya of these vegetables: Beans, potato, alasande, banana, cabbage, pumpkin etc etc!
I cook either rice or chapathi almost everyday. Saturday sunday is full experimenting!!
Prepared godhi/raagi dose, sajjige rotti, etc.
The biggest experiment was Rama & mine Pizza!! It came out pretty well!


Thanks to the head cook Uma & Amma for all the instructions.
I am writing this blog after preparing rice, potato palya and rasam.
I hope my roommates survive this too. :-)